ಶುಕ್ರವಾರ, 20 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪುತ್ತೂರಿನಲ್ಲಿ ಮೇಳೈಸಿದ ಅಟ್ಟಿಮಡಿಕೆ ಸಾಹಸ ಪ್ರದರ್ಶನ

Published : 1 ಸೆಪ್ಟೆಂಬರ್ 2024, 16:42 IST
Last Updated : 1 ಸೆಪ್ಟೆಂಬರ್ 2024, 16:42 IST
ಫಾಲೋ ಮಾಡಿ
Comments

ಪುತ್ತೂರು: ವಿಶ್ವಹಿಂದೂ ಪರಿಷತ್‌ ಸ್ಥಾಪನಾ ದಿನಾಚರಣೆ ಅಂಗವಾಗಿ ವಿಶ್ವಹಿಂದೂ ಪರಿಷತ್‌, ಪುತ್ತೂರು ಮೊಸರು ಕುಡಿಕೆ ಉತ್ಸವ ಸಮಿತಿಯಿಂದ ಪುತ್ತೂರಿನ ಮಹಾಲಿಂಗೇಶ್ವರ ದೇವಳದ ವಠಾರದಲ್ಲಿ ಮೊಸರುಕುಡಿಕೆ ಉತ್ಸವ ಮತ್ತು ಅಟ್ಟಿ ಮಡಿಕೆ ಒಡೆಯುವ ಶೋಭಾಯಾತ್ರೆ ನಡೆಯಿತು.

ಅಟ್ಟಿ ಮಡಿಕೆ ಒಡೆಯುವ ಸಾಹಸ ಪ್ರದರ್ಶನಕ್ಕೆ ಬೊಳುವಾರಿನಲ್ಲಿ ಚಾಲನೆ ನೀಡಲಾಯಿತು.

ವಿಶ್ವ ಹಿಂದೂ ಪರಿಷತ್ ಮಂಗಳೂರು ವಿಭಾಗ ಪ್ರಚಾರ ಪ್ರಮುಖ್ ಪ್ರದೀಪ್ ಸರಿಪಲ್ಲ ಅವರು ಕಾರ್ಯಕ್ರಮ ಉದ್ಘಾಟಿಸಿದರು.

ಕರ್ನಾಟಕ ದಕ್ಷಿಣ ಪ್ರಾಂತ ಉಪಾಧ್ಯಕ್ಷ ಯು.ಪೂವಪ್ಪ ಅವರು ಶೋಭಾಯಾತ್ರೆಗೆ ಚಾಲನೆ ನೀಡಿದರು.

ನೃತ್ಯ ನಿರ್ದೇಶಕಿ ವಿದುಷಿ ನಯನಾ ರೈ, ವಿದುಷಿ ಸ್ವಸ್ತಿಕಾ ಆರ್.ಶೆಟ್ಟಿ ಅವರ ಶಿಷ್ಯರು ನೃತ್ಯದ ಮೂಲಕ ಮಡಿಕೆ ಒಡೆದರು.

ಕಲಾ ಮೇಳಗಳು ಶೋಭಾಯಾತ್ರೆಯಲ್ಲಿ ಭಾಗವಹಿಸಿದ್ದವು.

ಪ್ರಮುಖರಾದ ಕೃಷ್ಣವೇಣಿ ಮುಳಿಯ, ಉಮೇಶ್ ನಾಯಕ್, ಜಗದೀಶ್ ನೀರ್ಪಾಜೆ, ಹರೀಶ್ ಕುಮಾರ್ ದೋಳ್ಪಾಡಿ, ಕೃಷ್ಣ ಪ್ರಸನ್ನ, ದಾಮೋದರ ಪಾಟಾಳಿ, ಜಿತೇಶ್ ಬಲ್ನಾಡು, ಜಯಂತ ಕುಂಜೂರುಪಂಜ, ಸಂಜೀವ ಮಠಂದೂರು, ಶ್ರೀಧರ್ ತೆಂಕಿಲ, ದಿನೇಶ್ ಪಂಜಿಗ, ಭಾಮಿ ಅಶೋಕ್ ಶೆಣೈ, ಕೇಶವ ಪ್ರಸಾದ್ ಮುಳಿಯ, ಮುರಳೀಕೃಷ್ಣ ಹಸಂತಡ್ಕ, ವಿರೂಪಾಕ್ಷ ಭಟ್, ಮಾಧವ ಪೂಜಾರಿ, ಲಕ್ಷ್ಮಣ ಗೌಡ, ಕೃಷ್ಣಪ್ರಸಾದ್ ಬೆಟ್ಟ, ಜನಾರ್ದನ ಬೆಟ್ಟ, ಅಜಿತ್ ರೈ ಹೊಸಮನೆ, ಸಚಿನ್ ಶೆಣೈ, ಪ್ರೇಮಲತಾ ರಾವ್, ಪ್ರಭಾ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT