ಗುರುವಾರ , ಮೇ 19, 2022
24 °C
ಪ್ರಾಣತೆತ್ತ ರೈತರ ಕುಟುಂಬಕ್ಕೆ ₹ 10 ಲಕ್ಷ ಪರಿಹಾರ ನೀಡಿ: ಶಾಸಕ ಖಾದರ್‌ ಆಗ್ರಹ

ಪ್ರಜಾಸತ್ತಾತ್ಮಕ ಹೋರಾಟಕ್ಕೆ ಸಂದ ಗೆಲುವು: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ಕೃಷಿ ಕಾಯ್ದೆ ತಿದ್ದುಪಡಿ ಮಸೂದೆ ರದ್ದುಪಡಿಸುವ ಪ್ರಧಾನ ಮಂತ್ರಿ ಘೋಷಣೆ ದೇಶದಲ್ಲಿ ವರ್ಷಪೂರ್ತಿ ನಡೆದ ರೈತರ ಪ್ರಜಾಸತ್ತಾತ್ಮಕ ಹೋರಾಟದ ಗೆಲುವಾಗಿದೆ ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಘಟಕದ ಅಧ್ಯಕ್ಷ ಒ.ಎಂ.ಎ.ಸಲಾಂ ಹೇಳಿದ್ದಾರೆ.

‘ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಸಾರ್ವಭೌಮರು. ಅವರ ಇಚ್ಛೆಯನ್ನು ಯಾವತ್ತೂ ತಿರಸ್ಕರಿಸಲಾಗದು ಎಂದು ಕೇಂದ್ರ ಸರ್ಕಾರಕ್ಕೆ ಮತ್ತೊಮ್ಮೆ ನೆನಪಿಸಲಾಗಿದೆ. ರೈತರ ಐತಿಹಾಸಿಕ ಹೋರಾಟವು ಅಂತಿಮವಾಗಿ ದುರಂಹಕಾರ ಮತ್ತು ಸರ್ವಾಧಿಕಾರದ ಮೇಲೆ ತನ್ನ ಗೆಲುವನ್ನು ಸಾಧಿಸಿದೆ. ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಮುನ್ನ ಘೋಷಣೆ ಹೊರಬಿದ್ದಿರುವುದು ಕಾಕತಾಳೀಯವೇನಲ್ಲ. ರೈತರ ಜೀವ ಮತ್ತು ದೇಶದ ಜನರ ಹಿತಕ್ಕಿಂತ ಹೆಚ್ಚು ಚುನಾವಣಾ ಗೆಲುವು ಮತ್ತು ಅಧಿಕಾರವೇ ತನ್ನ ಆದ್ಯತೆಯಾಗಿದೆ ಮತ್ತ ಇದನ್ನು ಗಳಿಸಲು ತಾನು ಯಾವ ಮಟ್ಟಕ್ಕೂ ಹೋಗಬಹುದು ಎಂಬುದನ್ನು ಈ ಸರ್ಕಾರ ಮತ್ತೊಮ್ಮೆ ಸಾಬೀತುಪಡಿಸಿದೆ’ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸರ್ಕಾರಕ್ಕೆ ಮುಖಭಂಗ

ಮಂಗಳೂರು: ಇತ್ತೀಚೆಗೆ ನಡೆದ ಉಪ ಚುನಾವಣೆಗಳಲ್ಲಿ ಹೆಚ್ಚಿನ ಸ್ಥಾನಗ
ಳಲ್ಲಿ ಪರಾಭವ ಅನುಭವಿಸಿದ ಬಿಜೆಪಿ, ಮುಂಬರುವ ಐದು ರಾಜ್ಯ
ಗಳ ಚುನಾವಣೆಗಳನ್ನು ಗಮನದಲ್ಲಿಟ್ಟು
ಕೊಂಡು ರೈತರ ಆಕ್ರೋಶಕ್ಕೆ ಹೆದರಿ ತಿದ್ದುಪಡಿ ಮಸೂದೆಯನ್ನು ವಾಪಸ್ ಪಡೆದಿದೆ ಎಂದು ಸಿಪಿಎಂ ಜಿಲ್ಲಾ ಘಟಕದ ಕಾರ್ಯದರ್ಶಿ ವಿ. ಕುಕ್ಯಾನ್, ಎಐಟಿಯುಸಿ ಜಿಲ್ಲಾ ಘಟಕದ ಕಾರ್ಯದರ್ಶಿ ವಿ.ಸೀತಾರಾಂ ಬೇರಿಂಜ ತಿಳಿಸಿದ್ದಾರೆ. ಈ ಕಾಯ್ದೆ ತಿದ್ದುಪಡಿಗಳ ವಿಚಾರ ಸಂಸತ್ತಿನಿಂದ ನಿರ್ಗಮಿಸುವವರೆಗೂ ರೈತರು ಎಚ್ಚರ ಇರಬೇಕಾಗಿದೆ. ರೈತ ಸಂಘಗಳು ಮತ್ತು ಜನರು ಎಚ್ಚರಿಕೆಯಿಂದ ಇರಬೇಕು. ತ್ಯಾಗ, ಬಲಿದಾನಗಳಿಂದ ಕೇಂದ್ರ ಸರ್ಕಾರವನ್ನು ಹಿಮ್ಮೆಟ್ಟಿಸಿರುವ ರೈತ ಸಂಘಟನೆಗಳು, ಕಾರ್ಮಿಕ ಸಂಘಟನೆಗಳ ಶ್ರಮ ಶ್ಲಾಘನೀಯ. ಈ ರೈತ ಚಳವಳಿಯಲ್ಲಿ ಮಡಿದ ಹುತಾತ್ಮರ ಕುಟುಂಬಕ್ಕೆ ಕೇಂದ್ರ ಸರ್ಕಾರ ಪರಿಹಾರ ಮತ್ತು ಮಾಸಾಶನ ಕೊಡಬೇಕು ಎಂದು ಆಗ್ರಹಿಸಿದ್ದಾರೆ.

ಹೋರಾಟ: ರೈತ ವಿರೋಧಿ ಮಸೂದೆ ವಿರುದ್ಧದ ಹೋರಾಟಕ್ಕೆ ಜಯ ದೊರೆತಿದೆ. ಇಂಧನ ಹಾಗೂ ಗ್ಯಾಸ್ ಬೆಲೆ ಏರಿಕೆ ವಿರುದ್ಧವೂ ಜನರು ಸಹನೆ ಕಳೆದುಕೊಂಡಿದ್ದಾರೆ. ಇದರ ವಿರುದ್ಧ ನಡೆಯುವ ಹೋರಾಟಕ್ಕೆ ಕಾಂಗ್ರೆಸ್ ಸಾಥ್ ನೀಡುತ್ತದೆ. ಬ್ರಿಟಿಷರ ವಿರುದ್ಧ ಜನಾಂದೋಲನ ನಡೆಸಿ, ಅವರನ್ನು ಓಡಿಸಿದಂತೆ ಕೇಂದ್ರ ಸರ್ಕಾರದ ವಿರುದ್ಧವೂ ಇದೇ ಮಾದರಿಯ ಹೋರಾಟವನ್ನು ಜನರು ನಡೆಸುವ ಕಾಲ ಬಂದಿದೆ ಎಂದು ಶಾಸಕ ಯು.ಟಿ.ಖಾದರ್ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು