ಪಾಲಿಕೆಯ ರಸ್ತೆಗಳು ಹಾಗೂ ಮಳೆನೀರು ಹರಿಯುವ ಚರಂಡಿಗಳು ಒತ್ತುವರಿಯಾಗಿವೆ. ಒತ್ತುವರಿ ತೆರವುಗೊಳಿಸಬೇಕು. ಮುಂದೆಂದೂ ಒತ್ತುವರಿಗೆ ಅವಕಾಶ ಕಲ್ಪಿಸಬಾರದು
ಉದಯಚಂದ್ರ ರೈ ಜಪ್ಪಿನಮೊಗರು ನಿವಾಸಿ
ವಾರ್ಡ್‌ನ ವಿಶೇಷ
ಪಾಲಿಕೆಯ ವಿಸ್ತಾರವಾದ ವಾರ್ಡ್‌ಗಳಲ್ಲಿ ಜಪ್ಪಿನಮೊಗರು ಕೂಡ ಒಂದು. ಪಾಲಿಕೆಯ ದಕ್ಷಿಣದ ತುತ್ತ ತುದಿಯ ವಾರ್ಡ್ ಇದು. ಪಾಲಿಕೆ ವ್ಯಾಪ್ತಿಯಲ್ಲಿ ಜನವಸತಿ ಇರುವ ಅತಿ ದೊಡ್ಡ ದ್ವೀಪ ಆಡಂ ಕುದ್ರು ಈ ವಾರ್ಡ್‌ನಲ್ಲೇ ಇದೆ. ರಾಷ್ಟ್ರೀಯ ಹೆದ್ದಾರಿ 66 ಈ ವಾರ್ಡ್ ಮೂಲಕ ಹಾದುಹೊಗಿದೆ. ನಗರದ ಹೊರವಲಯದಲ್ಲಿದ್ದರೂ ದಶಕದಿಂದ ಈಚೆಗೆ ಈ ವಾರ್ಡ್ ವಾಣಿಜ್ಯವಾಗಿಯೂ ಕ್ಷಿಪ್ರಗತಿಯಲ್ಲಿ ಬೆಳವಣಿಗೆ ಹೊಂದಿದೆ. ಅನೇಕ ಶಿಕ್ಷಣ ಸಂಸ್ಥೆಗಳು, ಸಭಾಂಗಣಗಳು ಈ ವಾರ್ಡ್ ವ್ಯಾಪ್ತಿಯಲ್ಲಿವೆ. ಕಂರ್ಭಿಸ್ಥಾನ ವೈದ್ಯನಾಥ ದೈವಸ್ಥಾನ, ಗುರುವನ, ಮಲ್ಲಿಕಾರ್ಜುನ ದೇವಸ್ಥಾನ, ಆದಿಮಾಯೆ ದೇವಸ್ಥಾನಗಳು ಇಲ್ಲಿವೆ.