ಮಂಗಳೂರು: ಪ್ಲಾಸ್ಟಿಕ್ಸ್ ಫಾರ್ ಚೇಂಜ್, ಬೆಳಗಾವಿಯ ಮಹಿಳಾ ಕಲ್ಯಾಣ ಸಂಸ್ಥೆ ಮತ್ತು ಮಂಗಳೂರು ಮಹಾನಗರ ಪಾಲಿಕೆ ಸಹಯೋಗದಲ್ಲಿ ಭಾನುವಾರ ನಗರದ ಪುರಭವನದಲ್ಲಿ ತ್ಯಾಜ್ಯ ನಿರ್ವಾಹಕರ ಸಮಾವೇಶ ನಡೆಯಿತು.

ಮಹಾನಗರ ಪಾಲಿಕೆಯ ವಲಯ ಆಯುಕ್ತ ಶಬರೀನಾಥ್ ಸಮಾವೇಶ ಉದ್ಘಾಟಿಸಿದರು. ಪಾಲಿಕೆ ವ್ಯಾಪ್ತಿಯಲ್ಲಿ ಪ್ರತಿನಿತ್ಯ 300-350 ಟನ್ ಕಸ ಉತ್ಪತ್ತಿಯಾಗುತ್ತಿದೆ. ಇದನ್ನು ಸಂಸ್ಕರಿಸಿ ನಿರ್ವಹಿಸುವುದು ದೊಡ್ಡ ಸವಾಲಾಗಿದೆ. ಆರಂಭದಲ್ಲೇ ತ್ಯಾಜ್ಯ ವಿಂಗಡಣೆಯು ಸಮರ್ಪಕವಾಗಿ ನಡೆದರೆ ನಂತರ ಹೆಚ್ಚಿನ ಸಮಸ್ಯೆ ಆಗಲಾರದು ಎಂದರು.

ಹಸಿ ತ್ಯಾಜ್ಯವನ್ನು ಪಚ್ಚನಾಡಿಯಲ್ಲಿ ಗೊಬ್ಬರವಾಗಿ ಪರಿವರ್ತಿಸಲಾಗುತ್ತಿದೆ. ಘನತ್ಯಾಜ್ಯದ ಮರುಬಳಕೆ ಸಾಧ್ಯವಿದೆ. ಆದರೆ, ಅದನ್ನು ಸಂಗ್ರಹಿಸಲು ಸಾಕಷ್ಟು ಸ್ಥಳಾವಕಾಶ ಬೇಕು. ಅಲ್ಲದೆ ಸಂಗ್ರಹಿಸಿಟ್ಟ ಸ್ಥಳಕ್ಕೆ ಬೆಂಕಿ ಬೀಳುವ ಅಪಾಯವೂ ಇದೆ. ಘನತ್ಯಾಜ್ಯ ವಿಲೇವಾರಿಗೆ ಪ್ಲಾಸ್ಟಿಕ್ ಫಾರ್ ಚೇಂಜ್ನಂತಹ ಸಂಸ್ಥೆಗಳು ಸಹಕಾರಿಯಾಗಿವೆ ಎಂದು ಅಭಿಪ್ರಾಯಪಟ್ಟರು.

ಬೆಳಗಾವಿಯ ಮಹಿಳಾ ಕಲ್ಯಾಣ ಸಂಸ್ಥೆಯ ಕಾರ್ಯದರ್ಶಿ ವೈಜಯಂತಿ ಎಂ.ಚೌಗಲಾ ಮಾತನಾಡಿ, ‘ಪ್ಲಾಸ್ಟಿಕ್ ಫಾರ್ ಚೇಂಜ್ ಸಂಸ್ಥೆಯ ಮೂಲಕ ತಾಜ್ಯ ನಿರ್ವಾಹಕರ ಸಾಮಾಜಿಕ, ಆರ್ಥಿಕ, ನೃತಿ, ಶೈಕ್ಷಣಿಕ ಬೆಳವಣಿಗೆ, ಜೀವನ ಮಟ್ಟದಲ್ಲಿ ಸುಧಾರಣೆ ಆಗುತ್ತದೆ. ಪ್ಲಾಸ್ಟಿಕ್ ಸಂಗ್ರಹಣೆ, ನಿರ್ವಹಣೆ, ಮರುಬಳಕೆ ಕಾರ್ಯವೂ ಯಶಸ್ವಿಯಾಗಿ ನಡೆಯುತ್ತಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.