ಬಂಟ್ವಾಳ: ಇಲ್ಲಿನ ರಾಯಿ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸಿದ್ಧಕಟ್ಟೆ ಸಹಕಾರಿ ವ್ಯವಸಾಯಿಕ ಸಂಘ ಮತ್ತು ಫಲ್ಗುಣಿ ರೋಟರಿ ಕ್ಲಬ್ ವತಿಯಿಂದ 2,000 ಲೀಟರ್ ಸಾಮರ್ಥ್ಯದ ಕುಡಿಯುವ ನೀರಿನ ಸಿಂಟೆಕ್ಸ್ ಟ್ಯಾಂಕ್ ಅನ್ನು ಶನಿವಾರ ಕೊಡುಗೆಯಾಗಿ ನೀಡಲಾಯಿತು.
ರಾಯಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ರಶ್ಮಿತ್ ಶೆಟ್ಟಿ ಕೈತ್ರೋಡಿ, ಸಿದ್ದಕಟ್ಟೆ ಸಹಕಾರಿ ಸಂಘದ ಅಧ್ಯಕ್ಷ ಪ್ರಭಾಕರ ಪ್ರಭು. ರೋಟರಿ ಕ್ಲಬ್ ಅಧ್ಯಕ್ಷ ಮೈಕಲ್ ಡಿಕೋಸ್ತ, ವೈದ್ಯಾಧಿಕಾರಿ ಡಾ. ಮನೋನ್ಮಣಿ, ಪ್ರಮುಖರಾದ ಸಂತೋಷ ಗೌಡ, ಹರೀಶ್ ಆಚಾರ್ಯ ರಾಯಿ, ರಾಜೇಶ್ ಶೆಟ್ಟಿ ಕೊನೆರೋಟ್ಟು, ಮಾಧವ ಶೆಟ್ಟಿಗಾರ್, ಮಂದಾರತಿ ಶೆಟ್ಟಿ, ಶಿವಯ್ಯ. ಎಸ್. ಎಲ್., ಮೋಹನ್ ಜಿ.ಮೂಲ್ಯ, ವಾಸುದೇವ ಆಚಾರ್ಯ, ರಾಜೇಶ್ ನೆಲ್ಯಾಡಿ, ದಿನೇಶ್ ಸುವರ್ಣ ರಾಯಿ, ಎಚ್. ಎ. ರೆಹಮಾನ್, ಬಸವರಾಜ್ ಆಲಿಮಟ್ಟಿ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.