ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುವೆ: ಸಚಿವ ಎಸ್‌. ಅಂಗಾರ

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನೂತನ ಸಚಿವ ಎಸ್‌.ಅಂಗಾರ ಅವರಿಗೆ ಸ್ವಾಗತ
Last Updated 6 ಆಗಸ್ಟ್ 2021, 3:11 IST
ಅಕ್ಷರ ಗಾತ್ರ

ಸುಬ್ರಹ್ಮಣ್ಯ: ಎರಡನೇ ಬಾರಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಪ್ರಪ್ರಥಮವಾಗಿ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಬಂದ ಸಚಿವ ಎಸ್.ಅಂಗಾರ ಅವರನ್ನು ಅದ್ಧೂರಿಯಾಗಿ ಸ್ವಾಗತಿಸಲಾಯಿತು.

ಸಚಿವರು ಗೋಪುರದ ಬಳಿಯಿಂದಲೇ ದೇವರಿಗೆ ನಮಸ್ಕರಿಸಿ ಆಶೀರ್ವಾದ ಪಡೆದರು.

ದೇವಳದ ಆಡಳಿತ ಕಚೇರಿ ಸಭಾಂಗಣದಲ್ಲಿ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನರಾಂ ಸುಳ್ಳಿ ಅವರು ಸಚಿವರಿಗೆ ಹಾರ ಹಾಕಿ ಶಾಲು ಹೊದಿಸಿ ದೇವರ ಪ್ರಸಾದ ನೀಡಿದರು. ಬಳಿಕ ಗ್ರಾಮ ಪಂಚಾಯಿತಿ ಸದಸ್ಯರು ಮತ್ತು ಮುಖಂಡರು ಸಚಿವರನ್ನು ಅಭಿನಂದಿಸಿದರು.

ದೇವಳದ ಎಇಒ ಪುಷ್ಪಲತಾ ರಾವ್, ಪ್ರಮುಖರಾದ ಹರೀಶ್ ಕಂಜಿಪಿಲಿ, ದಿನೇಶ್ ಸಂಪ್ಯಾಡಿ, ರಾಜೇಶ್ ಎನ್.ಎಸ್, ಚಿದಾನಂದ ಕಂದಡ್ಕ, ವೆಂಕಟೇಶ್ ಎಚ್.ಎಲ್, ಅಚ್ಚುತ್ತ ಗೌಡ, ವೆಂಕಟೇಶ್ ಎಚ್.ಎಲ್, ಭಾರತಿ ದಿನೇಶ್, ಗಿರಿಧರ್ ಸ್ಕಂಧ, ಶಿವರಾಮ ನೆಕ್ರಾಜೆ,
ದಿವ್ಯಾ, ಯಶೋದಾ, ಕೃಷ್ಣ ಸ್ಥಳೀಯರು ಹಾಗೂ ದೇವಳದ ಸಿಬ್ಬಂದಿ ಉಪಸ್ಥಿತರಿದ್ದರು.

‘ಗುರುತರ ಜವಾಬ್ದಾರಿ’

‘ಪಕ್ಷದ ಮತ್ತು ಸಂಘಟನೆಯ ಹಿರಿಯರು ಎರಡನೇ ಬಾರಿಗೆ ನನಗೆ ಅವಕಾಶ ಮಾಡಿಕೊಟ್ಟಿ ರುತ್ತಾರೆ. ಅವರು ಕೊಟ್ಟಿರುವ ಗುರುತರ ಜವಾಬ್ದಾರಿಯನ್ನು ಅವರ ಅಪೇಕ್ಷೆಗೆ ತಕ್ಕಂತೆ ನಿರ್ವಹಿಸುತ್ತೇನೆ. ಪ್ರಾಮಾಣಿಕ ವಾಗಿ ಮತ್ತು ಶಕ್ತಿ ಮೀರಿ ಸೇವೆ ನೆರವೇರಿಸಿ ನನಗೆ ನೀಡಿರುವ ಅವಕಾಶವನ್ನು ಸದುಪಯೋಗ ಪಡಿಸುತ್ತೇನೆ. ಹಿರಿಯರು ನನ್ನ ಮೇಲೆ ಇರಿಸಿರುವ ವಿಶ್ವಾಸ ಮತ್ತು ಪ್ರೀತಿಗೆ ತಕ್ಕುದಾಗಿ ಕರ್ತವ್ಯ ನಿರ್ವಹಿಸುತ್ತೇನೆ. ಜನತೆಯ ಅಭಿವೃದ್ಧಿಗೆ ಪೂರಕವಾಗಿ ಶ್ರಮವಹಿಸಿ ದುಡಿಯುತ್ತೇನೆ’ ಎಂದು ಅಂಗಾರ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT