ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಕ್ಕೆ: ಸುಬ್ರಹ್ಮಣ್ಯ ಸ್ವಾಮಿಗೆ ಚಂಪಾಷಷ್ಠಿ ಸಂಭ್ರಮ

Last Updated 24 ನವೆಂಬರ್ 2017, 5:21 IST
ಅಕ್ಷರ ಗಾತ್ರ

ಸುಬ್ರಹ್ಮಣ್ಯ: ಪ್ರಕೃತಿ ಸೌಂದರ್ಯದ ನೆಲೆವೀಡು, ಪುರಾಣ ಪ್ರಸಿದ್ಧ ಹಿನ್ನಲೆ ಯಿಂದ ಸರ್ವಧರ್ಮಿಯರನ್ನು ಕೈ ಬೀಸಿ ಕರೆಯುತ್ತಿರುವ ಶ್ರದ್ಧೆ ಭಕ್ತಿ ಯ ಪುಣ್ಯಭೂಮಿ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ಯಲ್ಲಿ ಶುಕ್ರವಾರ ಚಂಪಾಷಷ್ಠಿ ಸಂಭ್ರಮ.

ನಾಗಸಂಕುಲ ಇಲ್ಲಿ ಹರಿದಾಡುತ್ತಿದೆ ಎಂಬ ನಂಬಿಕೆಯಿಂದ ಕರ್ಮ ದೋಷ ಗಳ ಪರಿಹಾರಕ್ಕೆಂದು ಕ್ಷೇತ್ರಕ್ಕೆ ಧಾವಿಸಿ ಬರುವ ಭಕ್ತರು ಸಹಸ್ರಾರು. ದೇಶದ ಮೂಲೆ-ಮೂಲೆಗಳಿಂದ ಆಕ ರ್ಷಣೆಯ ಮೂಲಕ ಕರೆಯುತ್ತಿರುವ ಇಲ್ಲಿ ನಿತ್ಯವೂ ಜನಜಾತ್ರೆ.

ಶಿಷ್ಟ-ಜಾನಪದ ಸಂಸ್ಕೃತಿಗಳು ಸಂತುಲನಗೊಂಡು ನೇರ್ಪುಗೊಂಡ ತುಳುನಾಡಿನ ಧಾರ್ಮಿಕ ಸಾಂಸ್ಕೃತಿಕ ಹಿನ್ನೆಲೆಯುಳ್ಳ ಮಣ್ಣಿನ ಮೂಲ ಆರಾ ಧನೆಗೆ ವೈದಿಕ ಮೆರುಗನ್ನು ನೀಡಿದ ನಾಗ-ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಇದೇ 23 ಮತ್ತು 24ರಂದು ಸುಬ್ರಹ್ಮಣ್ಯ ಷಷ್ಠಿ-ಚಂಪಾಷಷ್ಠಿ ಸಂಭ್ರಮ. ಶ್ರದ್ಧೆ ಭಾವ ಪರ್ವದ ಹಬ್ಬವಾದ ಶುಕ್ರವಾರ ‘ಬ್ರಹ್ಮರಥ’ವನ್ನು ಬೆತ್ತ ಬಿದಿರುಗಳಿಂದ ಕಟ್ಟಿ ಶೃಂಗರಿಸಿ ಎಳೆಯುವುದು ವಿಶೇಷ ವಾಗಿದೆ.

ವೈದಿಕ-ಅವೈದಿಕ ಮಿಲನದ ಸವಿಯನ್ನು ಕಾಣುವ ಕುಕ್ಕೆ ಸುಬ್ರಹ್ಮಣ್ಯದ ಚಂಪಾಷಷ್ಠಿ ಮಹೋತ್ಸವ ತನ್ನದೇ ಆದ ವಿಶೇಷತೆಗಳನ್ನು ಹೊಂದಿದದು, ಚಾಂದ್ರಮಾನ ಪದ್ಧತಿಗೆ ಅನುಸಾರವಾಗಿ ಇಲ್ಲಿ ಜಾತ್ರೆ ನಡೆಯುತ್ತದೆ. ಶ್ರೀ ದೇವರ ಉತ್ಸವ ಮೂರ್ತಿಯ ಉತ್ಸವದ ಜತೆಗೆ ಕ್ಷೇತ್ರದ ದೈವಗಳಾದ ಹೊಸಳಿಗಮ್ಮ, ಕಾಟುಕಾಮಂಚು ದೈವಗಳಿಗೆ ನೇಮ, ಗೋಪುರ, ನಡಾವಳಿ ನಡೆಯುವುದು ದೈವ ದೇವರುಗಳ ಸಮಾಗಮವನ್ನು ಪ್ರಚುರಪಡಿಸುತ್ತಿದೆ.

ನಾಡಿನ ಎಲ್ಲಾ ದೇವಸ್ಥಾನಗಳಲ್ಲಿ ಧ್ವಜಾರೋಹಣದ ಮೂಲಕ ಜಾತ್ರೆ ಆರಂಭವಾಗಿ ಧ್ವಜಾರೋಹಣದೊಂ ದಿಗೆ ಜಾತ್ರೆ ಮುಕ್ತಾಯವಾದರೇ ಕುಕ್ಕೆ ಕ್ಷೇತ್ರದಲ್ಲಿ ಅನ್ನ ಬೇಯಿಸುವ ರಾಮ-ಲಕ್ಷ್ಮಣ ಕೊಪ್ಪರಿಗೆ ಏರುವುದರೊಂದಿಗೆ ಜಾತ್ರೆ ಆರಂಭಗೊಂಡು ಕೊಪ್ಪರಿಗೆ ಇಳಿಯುವುದರೊಂದಿಗೆ ಜಾತ್ರೆ ಸಮಾಪನಗೊಳ್ಳುತ್ತದೆ.

ಮಳೆ-ಬೆಳೆಯ ಪ್ರಾಪ್ತಿಗಾಗಿ, ಆ ರೋಗ್ಯ, ಐಶ್ವರ್ಯ ಅಭಿವೃದ್ಧಿಗಾಗಿ, ರೋಗ-ರುಜಿನ ಮುಕ್ತಿ, ವಿವಾಹ, ಸಂತಾ ನ ವೃದ್ಧಿ, ಚರ್ಮರೋಗ ನಿವಾರಣೆಗಾಗಿ ಕುಮಾರಧಾರ ತೀರ್ಥ ಸ್ನಾನ ಮಾಡಿ ನಾಗಸಂಕುಲ ಹರಿದಾಡುವ ಪುಣ್ಯ ಭೂಮಿಯಲ್ಲಿ ವಿವಿಧ ಬಗೆಯ ಉರುಳು ಸೇವೆ, ಆಶ್ಲೇಷಬಲಿ, ನಾಗಪ್ರತಿಷ್ಟೆ, ಸರ್ಪಸಂಸ್ಕಾರ, ತುಲಾ ಭಾರ, ಪ್ರಾರ್ಥನೆ ಇತ್ಯಾದಿ ಹರಕೆ ಹೊತ್ತು ಜಾತಿ-ಧರ್ಮ-ಪಂಥ ಭೇದ-ಭಾವವಿಲ್ಲದೆ ಇಲ್ಲಿ ನಡೆಯುವ ನಾಗ-ಸುಬ್ರಹ್ಮಣ್ಯನ ಸೇವೆಯಲ್ಲಿ ಅಪಾರ ಭಕ್ತ ಸಂಕುಲ ಪಾಲ್ಗೊಂಡು ಕೃತಾರ್ಥರಾಗುವರು.

ಕೊಪ್ಪರಿಗೆ ಏರುವುದರೊಂದಿಗೆ ಜಾತ್ರೆಯ ಪ್ರಕ್ರಿಯೆ ಆರಂಭವಾಗಿ ಮುಂದಿನ 15 ದಿನಗಳಲ್ಲಿ ಕೊಪ್ಪರಿಗೆ ಅನ್ನ ಭಕ್ತರಿಗೆ ಮಹಾಪ್ರಸಾದ. ಮಾರ್ಗಶಿರ ಶುದ್ಧ ಚೌತಿಯಂದು ಶ್ರೀ ದೇವರಿಗೆ ಹೂವಿನ ತೇರಿನ ಉತ್ಸವ, ಪಂಚಮಿಯಂದು ಪಂ ಚಮಿ ರಥೋತ್ಸವ, ಷಷ್ಠಿಯಂದು ಮಹಾರ ಥೋತ್ಸವ-ಬ್ರಹ್ಮರಥೋತ್ಸ, ಷಷ್ಠಿಯ ಮರುದಿನ ಕುಮಾರಧಾರಾ ಮತ್ಸ್ಯತೀ ರ್ಥದಲ್ಲಿ ಶ್ರೀ ದೇವರ ಅವಭ್ರತೋತ್ಸವ, ನೌಕಾವಿಹಾರ ನಡೆಯುತ್ತದೆ. ದ್ವಾದ ಶಿಯಂದು ಜಾತ್ರೆ ಕೊನೆಗೊಳ್ಳುತ್ತದೆ.

ಮಲೆಮಕ್ಕಳ ಬೆತ್ತದ ತೇರು
ಚಂಪಾಷಷ್ಠಿ ಜಾತ್ರಾ ಸಂದರ್ಭದಲ್ಲಿ ಬಿದಿರಿರುವ ಬೆತ್ತದ ಹೊರತು ಇತರ ಯಾವುದೇ ಹಗ್ಗಗಳನ್ನು ಸ್ವಲ್ಪವೂ ಉಪಯೋಗಿಸದೇ ಮೂಲನಿ ವಾಸಿ ಗಳಾದ ಮಲೆಕುಡಿಯ ಜನಾಂಗದವರು ರಚಿಸುವ ರಥ ಲಕ್ಷದೀಪೋತ್ಸವದಂದು ಕಾಶಿಕಟ್ಟೆ ದೇವಳದ ಮುಂದೆ ಜನಪದೀಯ ಶೈಲಿಯಲ್ಲಿ ರಚಿಸುವ ಚಲಿಸಲಾಗದ ‘ಗುರ್ಜಿ’ ರಥದಿಂದ ಹಿಡಿದು ಪಂಚಮಿ, ಬ್ರಹ್ಮರಥಗಳು ಎಲ್ಲರ ಮನಸೂರೆಗೊಳ್ಳುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT