ಶನಿವಾರ, 21 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೇಪು: ಮೇಳೈಸಿದ ಹಲಸು ಹಬ್ಬ

Published : 22 ಆಗಸ್ಟ್ 2011, 10:40 IST
ಫಾಲೋ ಮಾಡಿ
Comments

ವಿಟ್ಲ: ಕೇಪು ಗ್ರಾಮದ ಕಲ್ಲಂಗಳ ಸಮೀಪ ಕೃಷಿಕ ಉಬರು ರಾಜಗೋಪಾಲ ಭಟ್ ಅವರ ಮನೆಯಲ್ಲಿ ಶನಿವಾರ ಹಲಸಿನ ಹಬ್ಬ ನಡೆಯಿತು. ಬೇರೆ ಬೇರೆ ಕಡೆಗಳಿಂದ ಸಂಗ್ರಹಿಸಿದ 40 ಬಗೆಯ ಹಲಸಿನಹಣ್ಣುಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು.

ಹಲಸಿನ ಉತ್ಪನ್ನಗಳ ವಿವಿಧ ಭಕ್ಷ್ಯಗಳನ್ನು ಅಡಿಗೆಯ ಪ್ರಾತ್ಯಕ್ಷಿಕೆಯೊಂದಿಗೆ ಪಾಕತಜ್ಞೆ ಸವಿತಾ ಎಸ್.ಭಟ್ ಅಡ್ವಾಯಿ ವಿವರಣೆ ನೀಡಿದರು. ಅಡಿಗೆ ವಿಧಾನದ ಬಗ್ಗೆ ಸುಶೀಲಾ ಭಟ್ ಪಾತನಡ್ಕ ವಿವರಣೆ ನೀಡಿದರು. ಸತ್ಯವತಿ, ಅಕ್ಷಯ ಸಹಕರಿಸಿದರು.

ಹಲಸಿನ ಮಾರುಕಟ್ಟೆ ಬಗ್ಗೆ ಅಡ್ಕತ್ತಿಮಾರು ಸುಬ್ರಹ್ಮಣ್ಯ ಭಟ್ ಮತ್ತು ಸಖರಾಯಪಟ್ಟಣದ ಶಿವಣ್ಣ ಮಾಹಿತಿ ನಡೆಯಿತು. ಹಲಸಿನ ಹಣ್ಣಿನ ಪೌಡರ್, ಕಾಯಿ ಪೌಡರ್, ಒಣಗಿಸಿದ ಹಲಸಿನಹಣ್ಣು ನಾನಾ ತೂಕದ ಪ್ಯಾಕೇಟ್‌ಗಳಲ್ಲಿ ಮಾರಾಟ, ಚಿಪ್ಸ್‌ಗಾಗಿ ಭಾರೀ ಬೇಡಿಕೆಯ ಕುರಿತು ರೈತರಿಗೆ ತಿಳಿಸಿಕೊಟ್ಟರು.
ಪಲ್ಯ, ಉಪ್ಪಿನಕಾಯಿ, ಕಾಯಿಹುಳಿ, ಪಾಯಸ  ಹಲಸಿನಿಂದ ತಯಾರಿಸಿದ್ದೇ ಆಗಿತ್ತು. ಕಾಫಿಗೆ ಹಲಸಿನ ಹುರಿದ ಸೋಳೆಯ ತಿಂಡಿ. ಹೀಗೆ ಎಲ್ಲವೂ ಹಲಸುಮಯ!

ಬಳಿಕ ಆಸಕ್ತ ಕೃಷಿಕರಿಗೆ ಕಸಿತಜ್ಞ ಗುರುರಾಜ ಬಾಳ್ತಿಲ್ಲಾಯ ಮತ್ತು ನರ್ಸರಿ ತಜ್ಞ ಕೃಷ್ಣ ಕೆದಿಲಾಯ ಅವರಿಂದ ಕಸಿಕಟ್ಟುವ, ಗಿಡ ನೆಡುವ ಪ್ರಾತ್ಯಕ್ಷಿಕೆ ನಡೆಯಿತು.ಹಲಸಿನ ಹಬ್ಬವನ್ನು ಉಬರು ರಾಜಗೋಪಾಲ ಭಟ್ ಕುಟುಂಬ, ಅಡ್ಯನಡ್ಕ ವಾರಣಾಶಿ ಸಂಶೋಧನಾ ಪ್ರತಿಷ್ಠಾನ,

ರಾಷ್ಟ್ರೀಯ ತೋಟಗಾರಿಕಾ ಮಿಷನ್, ಕೃಷಿ ಇಲಾಖೆ, ಗೋಳ್ತಮಜಲು ಸಾವಯವ ಗ್ರಾಮ ಯೋಜನೆ, ದ.ಕ.ಜಿಲ್ಲೆ ತೋಟಗಾರಿಕಾ ಇಲಾಖೆ, ಅಡಿಕೆ ಪತ್ರಿಕೆ ಆಯೋಜಿಸಿತ್ತು.ಶ್ರೀಪಡ್ರೆ, ವಿ.ಕೆ.ಶರ್ಮ ಮುಳಿಯ, ಡಾ.ವಾರಣಾಶಿ ಕೃಷ್ಣಮೂರ್ತಿ, ಡಾ.ವಾರಣಾಶಿ ಅಶ್ವಿನಿ ಕೃಷ್ಣಮೂರ್ತಿ, ಶ್ರೀಪಡ್ರೆ, ನಾ.ಕಾರಂತ ಸೇರಿದಂತೆ ನೂರಾರು ಮಂದಿ ಈ ಹಬ್ಬದಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT