ಸೋಮವಾರ, ಆಗಸ್ಟ್ 2, 2021
21 °C

ದಾವಣಗೆರೆ | 12 ಮಂದಿಗೆ ಕೋವಿಡ್–19 ದೃಢ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ಜಿಲ್ಲೆಯಲ್ಲಿ ಶುಕ್ರವಾರ 12 ಮಂದಿಗೆ ಕೋವಿಡ್‌–19 ದೃಢಪಟ್ಟಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 245ಕ್ಕೆ ಏರಿದೆ.

ನಾಲ್ಕು ಮಂದಿಗೆ ಹಗೆದಿಬ್ಬ ಸರ್ಕಲ್‌ನ ವೃದ್ಧನ ಸಂಪರ್ಕ ಇದ್ದರೆ, ಒಬ್ಬರಿಗೆ ತರಳಬಾಳು ಬಡಾವಣೆಯ ವೃದ್ಧನಿಂದ, ಮತ್ತೊಬ್ಬರಿಗೆ ಚನ್ನಗಿರಿ ವೃದ್ಧೆಯ ಸಂಪರ್ಕದಿಂದ ಕೊರೊನಾ ವೈರಸ್ ತಗುಲಿದೆ. 6 ಮಂದಿಗೆ ಸೋಂಕಿತರ ಸಂಪರ್ಕ ಪತ್ತೆಯಾಗಿಲ್ಲ.

ಹಗೆದಿಬ್ಬ ಸರ್ಕಲ್‌ನ 54 ವರ್ಷದ ಮಹಿಳೆ (ಪಿ.8070), 12 ವರ್ಷದ ಬಾಲಕ (ಪಿ.8071), 60 ವರ್ಷದ ವೃದ್ಧೆ (ಪಿ.8072) 24 ವರ್ಷದ ಮಹಿಳೆಗೆ 64 ವರ್ಷದ ವೃದ್ಧನ (ಪಿ.6159) ಸಂಪರ್ಕದಿಂದ ಸೋಂಕು ಬಂದಿದೆ.

ತರಳಬಾಳು ಬಡಾವಣೆಯ 48 ವರ್ಷದ ಮಹಿಳೆಗೆ (ಪಿ.8074), ಹಾಗೂ ಚನ್ನಗಿರಿಯ 50 ವರ್ಷದ ವೃದ್ಧ (ಪಿ.8075), ಈಚೆಗೆ ಮೃತಪಟ್ಟ ವೃದ್ಧೆಯ (ಪಿ.7576) ಸಂಪರ್ಕದಿಂದ ಬಂದಿದೆ.

ಸಿ.ಜೆ.ಆಸ್ಪತ್ರೆಯ 28 ವರ್ಷದ ಮಹಿಳೆ (ಪಿ.8064), ಹರಿಹರ ತಾಲ್ಲೂಕು ರಾಜನಹಳ್ಳಿಯ 18 ವರ್ಷದ ಯುವತಿ (ಪಿ.8065) ದೊಡ್ಡಬಾತಿಯ 20 ವರ್ಷದ ಮಹಿಳೆ (ಪಿ.8066) 22 ವರ್ಷದ ಮಹಿಳೆ (ಪಿ.8067) ಹಾಗೂ ಆವರಗೊಳ್ಳದ 21 ವರ್ಷದ ಮಹಿಳೆ (ಪಿ.8068) 23 ವರ್ಷದ ಮಹಿಳೆಗೆ (ಪಿ.8069) ಯಾರ ಸಂಪರ್ಕದಿಂದ ಬಂದಿದೆ ಎಂಬುದನ್ನು ಪತ್ತೆಹಚ್ಚಲಾಗುತ್ತಿದೆ.

ಸೋಂಕಿತರ ಪೈಕಿ 215 ಜನರು ಗುಣಮುಖರಾಗಿ ಬಿಡುಗಡೆ ಹೊಂದಿರುತ್ತಾರೆ. 6 ಜನರು ಮೃತಪಟ್ಟಿದ್ದು, 24 ಸಕ್ರಿಯ ಪ್ರಕರಣಗಳು ಇವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು