ಮಾಯಕೊಂಡ: ಸಮೀಪದ ಒಂಟಿಹಾಳು ಬಳಿ ಜಮೀನಿನಲ್ಲಿ ಎಳೆಯ ಹುಲ್ಲು, ಅಲಸಂದೆ ಬಳ್ಳಿಯನ್ನು ಹೆಚ್ಚಾಗಿ ತಿಂದು, ಆಹಾರ ವಿಷಪೂರಿತವಾಗಿ 35 ಕುರಿಗಳು ಶನಿವಾರ ಸಂಜೆ ಸಾವನ್ನಪ್ಪಿವೆ.
ಚಳ್ಳಕೆರೆ ತಾಲ್ಲೂಕಿನ ಪರಶುರಾಂಪುರ ಗ್ರಾಮದ ಕುರಿಗಾಹಿಗಳಾದ ಮಂಜಪ್ಪ, ಶಿವಣ್ಣ, ಕರಿಯಪ್ಪ, ಚಿದಾನಂದ, ಈರಣ್ಣ ಅವರಿಗೆ ಸೇರಿದ ಕುರಿಗಳು ಇವಾಗಿವೆ.
ಪ್ರತಿದಿನದಂತೆ ಕುರಿಗಾಹಿಗಳು ಕುರಿ ಮೇಯಿಸಿಕೊಂಡು ಬರುವ ದಾರಿಯಲ್ಲಿ ಸಂಜೆ ರೊಪ್ಪ ಸೇರುವ ಮುನ್ನವೇ ಕುರಿಗಳು ನಿತ್ರಾಣಗೊಂಡು ಬಳಿಕ ಸಾವನ್ನಪ್ಪಿವೆ. ಜಾನುವಾರು ಅಧಿಕಾರಿ ಈ. ಪುರಂದರ ಹಾಗೂ ಸಹಾಯಕ ಹರೀಶ್ ಸಮಯಕ್ಕೆ ಸರಿಯಾಗಿ ಸ್ಥಳಕ್ಕೆ ಭೇಟಿ ನೀಡಿ ಪ್ರಥಮ ಚಿಕಿತ್ಸೆ ನೀಡಿದ್ದರಿಂದ ಕೆಲವು ಕುರಿಗಳು ಪ್ರಾಣಪಾಯದಿಂದ ಪಾರಾಗಿವೆ.
'ಒಂದೊಂದು ಕುರಿಗಳು ₹25 ಸಾವಿರಕ್ಕು ಹೆಚ್ಚು ಬೆಲೆಬಾಳುತ್ತಿದ್ದವು. ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿವೆ. ಏನು ಮಾಡಬೇಕು ಎಂಬುದೇ ತೋಚದಂತಾಗಿದೆ’ ಎಂದು ಕುರಿಗಾಹಿ ಕರಿಯಪ್ಪ ನೊಂದುಕೊಂಡರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.