ರೈತರ ಆತ್ಮಹತ್ಯೆ ಪ್ರಕರಣಗಳು ಉಪವಿಭಾಗಾಧಿಕಾರಿ ಅಧ್ಯಕ್ಷತೆಯ ಸಮಿತಿ ಎದುರು ಬರುತ್ತವೆ. ಸಮಿತಿ ತೀರ್ಮಾನ ಕೈಗೊಂಡು ಪರಿಹಾರಕ್ಕೆ ಶಿಫಾರಸು ಮಾಡುತ್ತದೆ. ಬಹುತೇಕ ಪ್ರಕರಣಗಳಲ್ಲಿ ಪರಿಹಾರ ಮಂಜೂರಾಗಿದೆ.ಶ್ರೀನಿವಾಸ್ ಚಿಂತಾಲ್ ಜಂಟಿ ಕೃಷಿ ನಿರ್ದೇಶಕ
ದಾವಣಗೆರೆ ಹರಿಹರ ಜಗಳೂರು ತಾಲ್ಲೂಕು ವ್ಯಾಪ್ತಿಯಲ್ಲಿ ದಾಖಲಾದ 15 ಪ್ರಕರಣಗಳಲ್ಲಿ 13ರಲ್ಲಿ ಪರಿಹಾರ ಸಿಕ್ಕಿದೆ. 2 ಪ್ರಕರಣಗಳನ್ನು ತಿರಸ್ಕರಿಸಲಾಗಿದೆ. ಸರ್ಕಾರದ ಮಾನದಂಡದ ಆಧಾರದ ಮೇರೆಗೆ ತೀರ್ಮಾನ ಕೈಗೊಳ್ಳಲಾಗಿದೆ.ದುರ್ಗಶ್ರೀ ಉಪವಿಭಾಗಾಧಿಕಾರಿ ದಾವಣಗೆರೆ
ಸರ್ಕಾರದ ಆದ್ಯತೆ ಬದಲಾಗಿದೆ. ಕೃಷಿಗೆ ಒತ್ತು ಕಡಿಮೆಯಾಗಿದೆ. ಸ್ವಾಮಿನಾಥನ್ ವರದಿ ಅನುಷ್ಠಾನಗೊಳಿಸಿದರೆ ಬೆಳೆಗಳಿಗೆ ನ್ಯಾಯಯುತ ಬೆಲೆ ಸಿಗುತ್ತದೆ. ಆಗ ರೈತರ ಬದುಕು ಹಸನವಾಗಲಿದ್ದು ಆತ್ಮಹತ್ಯೆ ಪ್ರಕರಣಗಳು ಕಡಿಮೆ ಆಗಲಿವೆ.ಬಲ್ಲೂರು ರವಿಕುಮಾರ್ ರೈತ ಮುಖಂಡ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.