ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

44 ಮಂದಿಗೆ ಕೋವಿಡ್: 24 ಮಂದಿ ಬಿಡುಗಡೆ

Last Updated 6 ನವೆಂಬರ್ 2020, 16:26 IST
ಅಕ್ಷರ ಗಾತ್ರ

ದಾವಣಗೆರೆ: ಜಿಲ್ಲೆಯಲ್ಲಿ ಶುಕ್ರವಾರ 44 ಮಂದಿಗೆ ಕೋವಿಡ್ ಸೋಂಕು ದೃಢಪಟ್ಟಿದ್ದು, ಒಬ್ಬರು ಮೃತಪಟ್ಟಿದ್ದಾರೆ. 24 ಮಂದಿ ಗುಣಮುಖರಾಗಿದ್ದಾರೆ.

ಜಯನಗರದ 78 ವರ್ಷದ ವೃದ್ಧ ಕೋವಿಡ್‌ನಿಂದಾಗಿ ಸಿ.ಜಿ.ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ಈವರೆಗೆ 261 ಮೃತಪಟ್ಟಿದ್ದಾರೆ.

ದಾವಣಗೆರೆ ನಗರ ಹಾಗೂ ತಾಲ್ಲೂಕಿನ 21, ಹರಿಹರ ತಾಲ್ಲೂಕಿನ 9, ಜಗಳೂರು ತಾಲ್ಲೂಕಿನ 2,ಚನ್ನಗಿರಿ ತಾಲ್ಲೂಕಿನ 4, ಹೊನ್ನಾಳಿ ತಾಲ್ಲೂಕಿನ 7 ಹಾಗೂ ಇತರೆ ಜಿಲ್ಲೆಯ ಒಬ್ಬರಿಗೆ ಸೋಂಕು ದೃಢಪಟ್ಟಿದ್ದು, ಬಿಡುಗಡೆಯಾದವರಲ್ಲಿ ದಾವಣಗರೆ ನಗರ ಹಾಗೂ ತಾಲ್ಲೂಕಿನಲ್ಲಿ 12, ಹರಿಹರ ತಾಲ್ಲೂಕಿನ 6, ಚನ್ನಗಿರಿ ತಾಲ್ಲೂಕಿನ 5, ಹೊನ್ನಾಳಿ ತಾಲ್ಲೂಕಿನಲ್ಲಿ ಒಬ್ಬರು ಕೋವಿಡ್‌ನಿಂದ ಗುಣಮುಖರಾಗಿದ್ದಾರೆ.

ಜಿಲ್ಲೆಯಲ್ಲಿ ಈವರೆಗೆ 21,000 ಮಂದಿಗೆ ಕೋವಿಡ್ ದೃಢಪಟ್ಟಿದ್ದು, 20,261 ಮಂದಿ ಗುಣಮುಖರಾಗಿದ್ದಾರೆ. 478 ಸಕ್ರಿಯ ಪ್ರಕರಣಗಳು ಇವೆ.

ಹೆಡ್ ಕಾನ್ಸ್ ಟೆಬಲ್ ಸಾವು

ದಾವಣಗೆರೆ: ಇಲ್ಲಿನ ದಕ್ಷಿಣ ಸಂಚಾರ ಠಾಣೆಯ ಹೆಡ್‌ ಕಾನ್‌ಸ್ಟೆಬಲ್ ನಾರಾಯಣ ರಾಜ್ ಅರಸ್ (44) ಅವರು ಕೋವಿಡ್‌ನಿಂದ ಮೃತಪಟ್ಟಿದ್ದಾರೆ. ಇವರು ದೊಡ್ಡಬಾತಿ ಗ್ರಾಮದವರಾಗಿದ್ದು, ಕೋವಿಡ್ ದೃಢಪಟ್ಟಿದ್ದರಿಂದ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಈ ವಿಷಯವನ್ನು ದೃಢಪಡಿಸಿದ್ದಾರೆ.

1999 ಬ್ಯಾಚ್‌ನಲ್ಲಿ ನೇಮಕವಾಗಿದ್ದರು. ಮೃತರಿಗೆ ಇಬ್ಬರು ಪುತ್ರರು ಹಾಗೂ ಪುತ್ರಿ ಇದ್ದಾರೆ.

ಶುಕ್ರವಾರ ಸಂಜೆ ಅಂತ್ಯ ಸಂಸ್ಕಾರ ನಡೆದಿದ್ದು, ಗೌರವ ಸೂಚಿಸಲಾಯಿತು. ಸಿಬ್ಬಂದಿ ಮೃತಪಟ್ಟಿದ್ದರಿಂದ ಎಸ್ಪಿ ಹನುಮಂತರಾಯ ತಮ್ಮ ಜನ್ಮದಿನವನ್ನು ಆಚರಿಸಿಕೊಳ್ಳಲಿಲ್ಲ. ಶುಭಾಶಯ ಹೇಳದಂತೆ ಇತರರಿಗೂ ತಾಕೀತು ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT