ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಸಾಯಿಖಾನೆಗೆ ಸಾಗಿಸುತ್ತಿದ್ದ 77 ಜಾನುವಾರು ರಕ್ಷಣೆ

Last Updated 7 ಸೆಪ್ಟೆಂಬರ್ 2020, 10:30 IST
ಅಕ್ಷರ ಗಾತ್ರ

ದಾವಣಗೆರೆ: ಕಸಾಯಿಖಾನೆಗೆ ಅಕ್ರಮವಾಗಿ ಸಾಗಣೆಯಾಗುತ್ತಿದ್ದ 77 ಜಾನುವಾರನ್ನು ತಾಲ್ಲೂಕಿನ ಕಲ್ಪನಹಳ್ಳಿ ಬಳಿ ಗ್ರಾಮಾಂತರ ಪೊಲೀಸರು ರಕ್ಷಿಸಿದ್ದಾರೆ.

ಭಾನುವಾರ ರಾತ್ರಿ 10ಗಂಟೆಯ ವೇಳೆ ರಾಷ್ಟ್ರೀಯ ಹೆದ್ದಾರಿ–48ರಲ್ಲಿ ಗ್ರಾಮಾಂತರ ಡಿವೈಎಸ್‌ಪಿ ನರಸಿಂಹ ತಾಮ್ರಧ್ವಜ ನೇತೃತ್ವದಲ್ಲಿ ದಾಳಿ ನಡೆಸಿದ ಪೊಲೀಸರು ನಾಲ್ಕು ಕಂಟೈನರ್‌ಗಳಲ್ಲಿ ತುಂಬಿಕೊಂಡು ಹೋಗುತ್ತಿದ್ದ 45 ಎಮ್ಮೆಗಳು ಹಾಗೂ 32 ಎತ್ತುಗಳನ್ನು ರಕ್ಷಿಸಿದ್ದಾರೆ. ಪ್ರಕರಣ ಸಂಬಂಧ 12 ಮಂದಿಯನ್ನು ಬಂಧಿಸಿ, ಒಂದು ಕಾರು ಹಾಗೂ ಕಂಟೈನರ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

‘ಜಾನುವಾರನ್ನು ರಾಣೇಬೆನ್ನೂರಿನಿಂದ ತಮಿಳುನಾಡಿನ ಕಸಾಯಿಖಾನೆಗೆ ಸಾಗಿಸುತ್ತಿದ್ದರು. ಇವುಗಳ ಮೌಲ್ಯ ₹16 ಲಕ್ಷ ಎಂದು ಅಂದಾಜಿಸಲಾಗಿದೆ. ಆರೋಪಿಗಳ ವಿರುದ್ಧ ಕರ್ನಾಟಕ ಗೋವಧೆ ಪ್ರತಿಬಂಧಕ ಮತ್ತು ಜಾನುವಾರು ಪರಿರಕ್ಷಣೆ ಅಧಿನಿಯಮದಡಿ ಪ್ರಕರಣದ ದಾಖಲಿಸಲಾಗಿದೆ.ಜಾನುವಾರನ್ನು ಹೆಬ್ಬಾಳಿನಲ್ಲಿರುವ ಗೋಶಾಲೆಗೆ ರವಾನಿಸಲಾಗಿದೆ’ ಎಂದು ಡಿವೈಎಸ್‌ಪಿ ನರಸಿಂಹ ತಾಮ್ರಧ್ವಜ ತಿಳಿಸಿದರು.

ಕಾರ್ಯಾಚರಣೆಯಲ್ಲಿ ಗ್ರಾಮಾಂತರ ವೃತ್ತ ಸಿಪಿಐ ಮಂಜುನಾಥ್, ಪಿಎಸ್ಐ ಸಂಜೀವ್‌ಕುಮಾರ್, ಸಿಬ್ಬಂದಿ ಹನುಮಂತಪ್ಪ, ತಿಮ್ಮಪ್ಪ, ಅಶೋಕ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT