ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

SSLC Result 2024 | ದಾವಣಗೆರೆಯ ಅಂಧ ವಿದ್ಯಾರ್ಥಿನಿಗೆ ಶೇ 94.88 ಫಲಿತಾಂಶ

Published 9 ಮೇ 2024, 16:18 IST
Last Updated 9 ಮೇ 2024, 16:18 IST
ಅಕ್ಷರ ಗಾತ್ರ

ದಾವಣಗೆರೆ: ನಗರದ ಸಿದ್ಧಗಂಗಾ ಪ್ರೌಢಶಾಲೆಯ ಅಂಧ ವಿದ್ಯಾರ್ಥಿನಿ ಯುಕ್ತಿ ಪಿ., ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 593 ಅಂಕಗಳನ್ನು (ಶೇ 94.88) ಪಡೆಯುವ ಮೂಲಕ ಸಾಧನೆ ಮಾಡಿದ್ದಾಳೆ.

ಹುಟ್ಟಿನಿಂದಲೇ ಪೂರ್ಣ ಅಂಧೆಯಾಗಿರುವ ಯುಕ್ತಿ, ಬೆಂಗಳೂರಿನ ಜ್ಯೋತಿ ಸೇವಾ ಅಂಧರ ಶಾಲೆಯಲ್ಲಿ 7ನೇ ತರಗತಿವರೆಗೆ ಓದಿದ್ದಾಳೆ. 8ನೇ ತರಗತಿಯಿಂದ ಸಿದ್ಧಗಂಗಾ ಪ್ರೌಢಶಾಲೆಯಲ್ಲಿ ಅಭ್ಯಾಸ ನಡೆಸುತ್ತಿದ್ದಳು.

‘ಅಂಧರ ಶಾಲೆಗೆ ಸೀಮಿತವಾಗದೇ, ಸಾಮಾನ್ಯ ವಿದ್ಯಾರ್ಥಿಗಳೊಂದಿಗೆ ಬೆರೆಯಬೇಕೆಂಬ ಉದ್ದೇಶದಿಂದ ಸಿದ್ಧಗಂಗಾ ಶಾಲೆಗೆ ಸೇರಿದ್ದೆ. ಶಾಲೆಯಿಂದ ಲ್ಯಾಪ್‌ಟಾಪ್‌ ನೀಡಲಾಗಿತ್ತು. ಎನ್‌.ವಿ.ಡಿ.ಎ. ಸ್ಕ್ರೀನ್ ರೀಡರ್ ಸಾಫ್ಟ್‌ವೇರ್‌ ಮೂಲಕ ಅಧ್ಯಯನ ನಡೆಸಿದ್ದೆ. ಸ್ಕ್ರೈಬ್‌ ನೆರವಿನೊಂದಿಗೆ ಪರೀಕ್ಷೆ ಎದುರಿಸಿದ್ದೆ. ಫಲಿತಾಂಶ ಖುಷಿ ನೀಡಿದೆ. ಇಂಗ್ಲಿಷ್‌ ಪ್ರಾಧ್ಯಾಪಕಿ ಆಗುವ ಕನಸಿದೆ’ ಎಂದು ಯುಕ್ತಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT