ಶುಕ್ರವಾರ, 23 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ | ಮಂತ್ರಾಕ್ಷತೆಗೆ ಅನ್ನಭಾಗ್ಯದ ಅಕ್ಕಿ: ಬಸವಂತಪ್ಪ ವ್ಯಂಗ್ಯ

Published 2 ಜನವರಿ 2024, 14:49 IST
Last Updated 2 ಜನವರಿ 2024, 14:49 IST
ಅಕ್ಷರ ಗಾತ್ರ

ದಾವಣಗೆರೆ: ‘ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡುತ್ತಿರುವ ಅನ್ನಭಾಗ್ಯದ ಅಕ್ಕಿಗೆ ಬಿಜೆಪಿಯವರು ಅರಿಶಿನ ಹಚ್ಚಿ ರಾಜ್ಯದಾದ್ಯಂತ ಮಂತ್ರಾಕ್ಷತೆ ಹೆಸರಲ್ಲಿ ಹಂಚುತ್ತಿದ್ದಾರೆ’ ಎಂದು ಮಾಯಕೊಂಡ ಕ್ಷೇತ್ರದ ಶಾಸಕ ಕೆ.ಎಸ್. ಬಸವಂತಪ್ಪ‌ ವ್ಯಂಗ್ಯವಾಡಿದರು.

ಇಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಮಗೂ ರಾಮಮಂದಿರ ಬೇಕು. ಆದರೆ ಅದಕ್ಕೆ ಒತ್ತು ನೀಡಿದರೆ ದೇಶದ ಅಭಿವೃದ್ಧಿ ಸಾಧ್ಯವಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಅಭಿವೃದ್ಧಿ ಕಡೆಗೆ, ರೈತರ ಬಗ್ಗೆ ಚಿಂತನೆ ನಡೆಸಿ ಮಂತ್ರಗಳನ್ನು ಹೇಳಬೇಕಿತ್ತು. ಕೇವಲ ಅಧ್ಯಾತ್ಮದ ಕಡೆಗೆ ಗಮನ ಹರಿಸಲಾಗುತ್ತಿದೆ. ದೇಶದಲ್ಲಿ ರಾಮ ಮಂದಿರದ ಜೊತೆಗೆ ಕೈಗಾರಿಕೆಗಳು ಸ್ಥಾಪನೆ ಆಗಬೇಕು. ನಾವು ಕೂಡಾ ರಾಮನ ಭಕ್ತರು. ಆದರೆ, ದೇವರನ್ನು ರಾಜಕೀಯಕ್ಕೆ ಬಳಸಿಕೊಳ್ಳಬಾರದು’ ಎಂದು ಸುದ್ದಿಗಾರರಿಗೆ ತಿಳಿಸಿದರು.

‘ಕೊರೊನಾ ಸಮಯದಲ್ಲಿ ಗಂಟೆ ಬಾರಿಸಿ ಎಂದು ಪ್ರಧಾನಿಯವರು ಕರೆ ನೀಡಿದರು. ಆದರೆ, ಕೊರೊನಾ ನಿಯಂತ್ರಣಕ್ಕೆ ತರಲು ಸಾವಿರಾರು ಕೋಟಿ ಹಣ ವೆಚ್ಚವಾಯಿತು. ಜೊತೆಗೆ ವೈದ್ಯರು ರಾತ್ರಿ ಹಗಲು ದುಡಿದರು. ಮೋದಿ ಅವರು ವೈಜ್ಞಾನಿಕ ಸಂದೇಶ ನೀಡಬೇಕಿತ್ತು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT