ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಾವಿದರೇ ನಿಜವಾದ ಸಂಪತ್ತು: ಬಸವಪ್ರಭು ಸ್ವಾಮೀಜಿ

ಪುನೀತ್‌ ರಾಜ್‌ಕುಮಾರ್‌ಗೆ ಗೀತ ನುಡಿನಮನ ಕಾರ್ಯಕ್ರಮದಲ್ಲಿ ಬಸವಪ್ರಭು ಸ್ವಾಮೀಜಿ
Last Updated 27 ಜೂನ್ 2022, 5:36 IST
ಅಕ್ಷರ ಗಾತ್ರ

ದಾವಣಗೆರೆ: ಕಟ್ಟಡ ನಾಶವಾದರೆ ಮತ್ತೆ ನಿರ್ಮಿಸಬಹುದು. ವರನಟ ರಾಜ್‌ಕುಮಾರ್‌, ಗಾನ ಗಾರುಡಿಗ ಎಸ್‌ಪಿ ಬಾಲಸುಬ್ರಹ್ಮಣ್ಯ ಅವರನ್ನು ಮರುಸೃಷ್ಟಿಸಲು ಸಾಧ್ಯವಿಲ್ಲ. ಹಾಗಾಗಿ ಕಲಾವಿದರೇ ದೇಶದ ನಿಜವಾದ ಸಂಪತ್ತು ಎಂದು ವಿರಕ್ತಮಠದ ಬಸವಪ್ರಭು ಸ್ವಾಮೀಜಿ ಹೇಳಿದರು.

ಗಾನಸುಧೆ ಕಲಾ ಬಳಗ, ದಾವಣಗೆರೆ ಫ್ರೆಂಡ್ಸ್‌ ಮೆಲೋಡಿ ಅರ್ಕೆಸ್ಟ್ರಾ ವತಿಯಿಂದ ಭಾನುವಾರ ಕುವೆಂಪು ಕನ್ನಡ ಭವನದಲ್ಲಿ ನಡೆದ ಪುನೀತ್‌ ರಾಜ್‌ಕುಮಾರ್‌ ಅವರಿಗೆ ಗೀತ ನುಡಿನಮನ ಮತ್ತು ಸುಗಮ ಸಂಗೀತ ಕಾರ್ಯಕ್ರಮ, ಅಗಲಿದ ಕಲಾವಿದರಿಗೆ ಶ್ರದ್ಧಾಂಜಲಿ, ಹಿರಿಯ ಕಲಾವಿದರಿಗೆ ಸನ್ಮಾನ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ರಷ್ಯಾ ಮತ್ತು ಉಕ್ರೇನ್ ನಡುವೆ ಯುದ್ಧ ನಡೆಯಿತು. ಉಕ್ರೇನ್ ದೇಶದ ಬೃಹತ್ ಕಟ್ಟಡಗಳು ನಾಶವಾದವು. ಮತ್ತೆ ಅವುಗಳನ್ನು ಅಷ್ಟೇ ಬೃಹತ್ ಪ್ರಮಾಣದಲ್ಲಿ ಕಟ್ಟಡವನ್ನು ನಿರ್ಮಾಣ ಮಾಡಬಹುದು. ಆದರೆ ಕಲಾವಿದರನ್ನು ಕಳೆದುಕೊಂಡರೆ ಮತ್ತೆ ಸಿಗುವದಿಲ್ಲ ಎಂದು ಎಂದರು.

ಎಲ್ಲರೂ ಸೇರಿ ಸಹಾಯ, ಸಹಕಾರ ನೀಡುವ ಮೂಲಕ ಕಲಾವಿದರನ್ನು ಬೆಳಸಬೇಕು. ನಾಡಿಗೆ ಕೊಡುಗೆ ನೀಡಿದ ಕಲಾವಿದರು ಜನರ ಹೃದಯದಲ್ಲಿ ಸದಾಕಾಲವೂ ಶಾಶ್ವತವಾಗಿರುತ್ತಾರೆ. ಪುನೀತ್ ರಾಜ್‍ಕುಮಾರ್ ಜನಪ್ರಿಯ ನಟ ಮಾತ್ರವಲ್ಲ. ಎಲ್ಲರ ಹೃದಯದಲ್ಲಿ ಉಳಿದುಕೊಂಡಿದ್ದರೆ. ಅದಕ್ಕೆ ಪ್ರಚಾರವಿಲ್ಲದೇ ಅವರು ಮಾಡಿದ ಒಳ್ಳೆಯ ಕಾರ್ಯಗಳು ಕಾರಣ ಎಂದು ತಿಳಿಸಿದರು.

ಮಹಾನಗರ ಪಾಲಿಕೆ ಸದಸ್ಯ ಬಿ.ಜಿ. ಅಜಯ್‌ ಕುಮಾರ್‌ ಉದ್ಘಾಟಿಸಿದರು. ಮಾಜಿ ಶಾಸಕ ಎಚ್‌.ಎಸ್‌. ಶಿವಶಂಕರ್‌ ಪುಷ್ಪಾರ್ಚನೆ ಮಾಡಿದರು. ಜ್ಞಾನ ಸಾಗರ ಪಿಯು ಕಾಲೇಜು ಸಂಸ್ಥಾಪಕ ಬಸವರಾಜ್‌ ಸಾಗರ್ ಅಧ್ಯಕ್ಷತೆ ವಹಿಸಿದ್ದರು. ಕಲಾವಿದರಿಗೆ ಗುರುತಿನ ಚೀಟಿ ವಿತರಿಸಲಾಯಿತು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ. ವಾಮದೇವಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರವಿಚಂದ್ರ, ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಎಂ.ಎಸ್‌. ರಾಮೇಗೌಡ, ಒ. ಮಹೇಶ್ವರಪ್ಪ, ಮಾಲಾ ನಾಗರಾಜ್‌, ಮಧುಸೂದನ್‌, ಗಾನಸುಧೆ ಕಲಾ ಬಳಗದ ಅಧ್ಯಕ್ಷ ಮಂಜುನಾಥ್ ಎನ್‌., ಗೌರವಾಧ್ಯಕ್ಷ ಚಿಂದೋಡಿ ಶಂಭುಲಿಂಗಪ್ಪ, ಪ್ರಧಾನ ಕಾರ್ಯದರ್ಶಿ ಟಿ. ಪರಮೇಶ್‌ ಅವರೂ ಇದ್ದರು. ಕರಿಬಸವರಾಜ್‌ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT