ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆಯಲ್ಲಿ ಬಸವ ಜಯಂತಿ ಆರಂಭಿಸಿದ್ದು ಹರ್ಡೇಕರ್ ಮಂಜಪ್ಪ

Published 19 ಫೆಬ್ರುವರಿ 2024, 5:43 IST
Last Updated 19 ಫೆಬ್ರುವರಿ 2024, 5:43 IST
ಅಕ್ಷರ ಗಾತ್ರ

ದಾವಣಗೆರೆ: ದಾವಣಗೆರೆಯಲ್ಲಿ ಮೊದಲ ಬಾರಿಗೆ ಬಸವ ಜಯಂತಿ ಪ್ರಾರಂಭಿಸಿದ ಕೀರ್ತಿ ಹರ್ಡೇಕರ್ ಮಂಜಪ್ಪ ಅವರಿಗೆ ಸಲ್ಲುತ್ತದೆ ಎಂದು ಮುರುಘಾಮಠದ ಉಸ್ತುವಾರಿ ಬಸವಪ್ರಭು ಸ್ವಾಮೀಜಿ ಹೇಳಿದರು

ನಗರದ ಹರ್ಡೇಕರ ಮಂಜಪ್ಪನವರ ವೃತ್ತದಲ್ಲಿ ಭಾನುವಾರ ಏರ್ಪಡಿಸಿದ ಹರ್ಡೇಕರ ಮಂಜಪ್ಪ ಅವರ 138ನೇ ಜಯಂತಿಯ ಆಚರಣೆಯ ನಿಮಿತ್ತ ಅವರ ಪುತ್ಥಳಿಗೆ ಪುಷ್ಪಾರ್ಚನೆ ಮಾಡಿ ನೆರವೇರಿಸಿ ಅವರು ಮಾತನಾಡಿದರು.

‘ಹರ್ಡೇಕರ ಮಂಜಪ್ಪ ಒಬ್ಬ ವಿಭೂತಿ ಪುರುಷರು. ಹಣೆಯ ಮೇಲೆ ಬಸವ ಪ್ರಜ್ಞೆ ಮೈಮೇಲೆ ಗಾಂಧಿ ಪ್ರಜ್ಞೆಗಳನ್ನು ಸಂಕೇತಿಸುವಂತೆ ವಿಭೂತಿ - ಖಾದಿಗಳ ಆದರ್ಶದ ಸಂಗಮವಾಗಿದ್ದಾರೆ. ಬೆಣ್ಣೆದೋಸೆ ನಗರಿ, ವಿದ್ಯಾನಗರಿ ಎಂದು ಪ್ರಸಿದ್ಧಿ ಪಡೆದಿತ್ತು. ಈಗ ಬಸವಜಯಂತಿಯ ಗಂಗೋತ್ರಿನಗರಿ ಎಂದು ಖ್ಯಾತಿಯನ್ನು ಪಡೆದಿದೆ. ಇದಕ್ಕೆ ಹರ್ಡೇಕರ ಮಂಜಪ್ಪ ಕಾರಣರಾಗಿದ್ದಾರೆ’ ಎಂದು ಸ್ಮರಸಿದರು.

‘ಸ್ವಾತಂತ್ರ್ಯ ಚಳವಳಿಗಾಗಿ 1913ರಲ್ಲಿ ದಾವಣಗೆರೆ ವಿರಕ್ತಮಠದಲ್ಲಿ ಅಂದಿನ ಮಠಾಧೀಶರಾದ ಮೃತ್ಯುಂಜಯ ಅಪ್ಪಗಳೊಂದಿಗೆ ಬಸವ ಜಯಂತಿಯನ್ನು ಪ್ರಾರಂಭಿಸಿದರು. ಅಂದಿನಿಂದ ಪ್ರಾರಂಭವಾದ ಬಸವ ಜಯಂತಿ ಇಂದು ವಿಶ್ವದಾದ್ಯಂತ ನಡೆಯಲು ಹರ್ಡೇಕರ ಮಂಜಪ್ಪ ಕಾರಣರಾಗಿದ್ದಾರೆ. ಅಷ್ಟೇ ಅಲ್ಲದೇ ‘ಧನುರ್ದಾರಿ’ ಪತ್ರಿಕೆಯನ್ನು ಆರಂಭಿಸಿ ಸ್ವಾತಂತ್ರ್ಯ ಹೋರಾಟದಲ್ಲಿ ಸಾವಿರಾರು ಯುವಕರನ್ನು ಸಂಘಟಿಸಿ ಜಾಗೃತಿ ಮೂಡಿಸಿದರು. ಅಲ್ಲದೇ ಅವರಲ್ಲಿರುವ ದುಶ್ಚಟಗಳನ್ನು ಬಿಡಿಸಿ ಖಾದಿ ಬಟ್ಟೆಗಳನ್ನು ತಯಾರಿಸುವ ವಿದ್ಯೆಯನ್ನು ಕಲಿಸಿ ಸ್ವದೇಶಿ ಚಳುವಳಿಯನ್ನು ಪ್ರಾರಂಭಿಸಿದರು’ ಎಂದು ಹೇಳಿದರು.

‘ಮಹಿಳೆಯರಿಗೆ ಅಕ್ಷರ ಅಭ್ಯಾಸವನ್ನು ಮಾಡಿಸಿದರು. ರಾಟಿ ಉದ್ಯೋಗವನ್ನು ಕಲಿಸಿದರು. ಮಹಿಳೆಯರ ಜಾಗೃತಿಗಾಗಿ 1935 ರಲ್ಲಿ ಅಕ್ಕಮಹಾದೇವಿ ಅವರ ಜಯಂತಿ ಪ್ರಾರಂಭಿದರು. ಸ್ವದೇಶಿ ಚಳವಳಿ, ರಾಷ್ಟ್ರೀಯತೆ, ಸ್ವಚ್ಛತಾ ಕಾರ್ಯ, ಆರೋಗ್ಯ ಸೂತ್ರ , ಬಸವೇಶ್ವರ ಸೇವಾದಳ ಮುಂತಾದ ಕಾರ್ಯಗಳನ್ನು ಮಾಡಿ ಇತಿಹಾಸವಾಗಿದ್ದಾರೆ. ಅವರು ಮಾಡಿರುವ ಕಾರ್ಯಗಳನ್ನು ಸ್ಮರಿಸುತ್ತಾ ಅವರ ಆದರ್ಶಗಳನ್ನು ಪಾಲಿಸೋಣ’ ಎಂದು ಸ್ವಾಮೀಜಿ ಹೇಳಿದರು.

ಸಮಾರಂಭದಲ್ಲಿ ಬಸವಕಲಾ ಲೋಕದ ಶಶಿಧರ್, ವೀರಶೈವ ತರುಣ ಸಂಘದ ಕಣಕುಪ್ಪಿ ಮುರುಗೇಶಪ್ಪ, ಜಾಗತಿಕ ಲಿಂಗಾಯತ ಮಹಾಸಭಾದ ರುದ್ರೇಗೌಡ, ಬಸವಬಳಗದ ವೀಣಾ ಮಂಜುನಾಥ್, ಚಂದ್ರಕಲಾ ಇತರರು ಇದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT