ದಾವಣಗೆರೆ: ಭೀಮಾ ಕೋರೆಗಾಂವ್ ಯುದ್ಧದ ವಿಜಯೋತ್ಸವ ನಗರದ ವಿವಿಧೆಡೆ ಗುರುವಾರ ನಡೆಯಿತು. ಅಂಬೇಡ್ಕರ್ ಭಾವಚಿತ್ರ ಹಾಗೂ ಹುತಾತ್ಮರ ಸ್ತೂಪಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು.

ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಸಿಹಿ ಹಂಚಿ ಸಂಭ್ರಮಿಸಲಾಯಿತು.

‘ದೇಶದಲ್ಲಿ ನಡೆದಿರುವ ಯುದ್ಧಗಳಲ್ಲಿ 1818 ರ ಜ.1 ರಂದು ಬ್ರಿಟಿಷರು ಮತ್ತು ಮರಾಠ ಒಕ್ಕೂಟದ ಪೇಶ್ವೆಗಳ ನಡುವೆ ನಡೆದ ಭೀಮಾ ಕೋರೆಗಾಂವ ಯುದ್ಧ ಪ್ರಮುಖ. ಇದು ಜಗತ್ತನ್ನು ನಿಬ್ಬೆರಗಾಗುವಂತೆ ಮಾಡಿತು. ಆ ಯುದ್ಧದ ಪರಿಣಾಮವಾಗಿ ಮುಂದಿನ ತಲೆಮಾರುಗಳಿಗೆ ಸ್ವಾಭಿಮಾನ, ಆತ್ಮಗೌರವ ಸಿಕ್ಕಿತು’ ಎಂದು ಸಮಿತಿಯ ರಾಜ್ಯ ಸಂಚಾಲಕ ಎಚ್.ಮಲ್ಲೇಶ್ ಅಭಿಪ್ರಾಯಪಟ್ಟರು.

‘500 ಮಹರ್ ರೆಜಿಮೆಂಟ್ ಸೈನಿಕರು 28,000 ಪೇಶ್ವೆ ಸೈನಿಕರನ್ನು ಪರಾಭವಗೊಳಿಸಿದರು. ಭಾರತದ ಸ್ವಾಭಿಮಾನದ ಇತಿಹಾಸವನ್ನು ಸಾರಿ ಹೇಳಿರುವ ಯುದ್ಧ ಇದಾಗಿದೆ. ಈ ಯುದ್ಧದ ಸಂದರ್ಭದಲ್ಲಿ ಹುತಾತ್ಮರಾದ ಯೋಧರಿಗೆ ಗೌರವಾರ್ಪಣೆ ಸಲ್ಲಿಸದೇ ಹೋದರೆ ಚರಿತ್ರೆ ಕ್ಷಮಿಸದು. ಇದು ಜಾತಿವಾದ, ಅಸ್ಪೃಶ್ಯತೆಯ ವಿರುದ್ಧ ನಡೆದ ಯುದ್ಧ ಕೂಡ ಹೌದು’ ಎಂದರು.

ಸಮಿತಿಯ ಮುಖಂಡರಾದ ಮಾದಪ್ಪ ಶಾಮನೂರು, ಮಹಾಂತೇಶ್ ನವಿಲೇಹಾಳ್, ಶಿವಾನಂದ್, ಎಚ್.ಬಿ. ಮಂಜುನಾಥ್ ಕಬ್ಬೂರು, ಆರ್. ಗಿರೀಶ್ ಆವರಗೆರೆ, ಎಂ. ಚಂದ್ರಪ್ಪ ಅವರಗೆರೆ ಹಾಜರಿದ್ದರು.

ಹುತಾತ್ಮರ ಸ್ತೂಪಕ್ಕೆ ಪುಷ್ಪನಮನ

ಭೀಮಾ ಕೋರೆಗಾಂವ್ ವಿಜಯೋತ್ಸವ ಸಮಿತಿ ವತಿಯಿಂದ ನಗರದ ಬೂದಾಳ್ ರಿಂಗ್ ರಸ್ತೆಯ ಹುತಾತ್ಮರ ಸ್ತೂಪಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ಯುದ್ಧ ನಡೆದ ಬಗೆ ಅಂಬೇಡ್ಕರ್ ಗ್ರಹಿಸಿದ ರೀತಿ ಹಾಗೂ ಪರಿಣಾಮಗಳ ಬಗ್ಗೆ ತಿಳಿಸಿಕೊಡಲಾಯಿತು. ಸಮಿತಿಯ ಮುಖಂಡರಾದ ಸತೀಶ್ ಅರವಿಂದ್ ಆಶ್ಫಾಕ್ ಪವಿತ್ರ ಆದಿಲ್ ಖಾನ್ ಜಾಫರ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.