ದಾವಣಗೆರೆ: ‘ದಾವಣಗೆರೆ ನಿರ್ಮಿತಿ ಕೇಂದ್ರವು ಅನುಭವವಿಲ್ಲದ ಎಂಜಿನಿಯರ್ಗಳ ತಾಣವಾಗಿದೆ. ನಿರ್ಮಿತಿ ಕೇಂದ್ರದಲ್ಲಿ ಪ್ರಭಾವ ಬೀರುವ ಮೂಲಕ ಮಾನದಂಡಗಳನ್ನು ಪಾಲಿಸದೇ, ನಿಯಮಗಳನ್ನು ಗಾಳಿಗೆ ತೂರಿ ಅಕ್ರಮವಾಗಿ 12 ನೌಕರರು ನೇಮಕಗೊಂಡಿದ್ದಾರೆ’ ಎಂದು ಬಿಜೆಪಿ ರೈತ ಮೋರ್ಚಾ ರಾಜ್ಯ ಘಟಕದ ಉಪಾಧ್ಯಕ್ಷ ಲೋಕಿಕೆರೆ ನಾಗರಾಜ್ ಗಂಭೀರ ಆರೋಪ ಮಾಡಿದರು.

‘2020ರ ಅಕ್ಟೋಬರ್ನಿಂದ 2023ರ ಡಿಸೆಂಬರ್ವರೆಗೆ ನಿರ್ಮಿತಿ ಕೇಂದ್ರದಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಡಿ.ಎಸ್. ಚಂದನ್ ಅವರನ್ನು ಹಿಂದಿನ ಜಿಲ್ಲಾಧಿಕಾರಿಯವರು ನಿಯಮ ಬಾಹಿರವಾಗಿ ಯೋಜನಾ ವ್ಯವಸ್ಥಾಪಕರನ್ನಾಗಿ ನೇಮಿಸಿದ್ದಾರೆ’ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.

‘ಡಿ.ಎಸ್.ಚಂದನ್ ಇದೇ ನಿರ್ಮಿತಿ ಕೇಂದ್ರದಲ್ಲಿ ಯೋಜನಾ ನಿರ್ದೇಶಕರಾಗಿದ್ದ ಜಿ.ರಾಜಪ್ಪ ಅವರ ಮಗ. ಕೇವಲ 2 ವರ್ಷ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡಿರುವ ವ್ಯಕ್ತಿಯನ್ನು ನೇರ ನೇಮಕ ಮಾಡಿಕೊಳ್ಳಲು ಅವಕಾಶ ಇದೆಯೇ? ಎಂಬುದನ್ನು ಜಿಲ್ಲಾಧಿಕಾರಿ ಸ್ಪಷ್ಟಪಡಿಸಬೇಕು’ ಎಂದು ಆಗ್ರಹಿಸಿದರು.

‘ಡಿಪ್ಲೋಮಾ ಪದವೀಧರರಾಗಿರುವ ಎಸ್.ಎಸ್. ಶಿವಕುಮಾರ್, ಕೆ.ಜೆ. ಮಂಜುನಾಥ್ ಅವರು ಬಿ.ಇ. ಪದವೀಧರರೆಂಬುದಾಗಿ ನಕಲಿ ದಾಖಲೆಗಳನ್ನು ನೀಡಿ ಯೋಜನಾ ಎಂಜಿನಿಯರ್ ಹುದ್ದೆಗೆ ನೇಮಕಗೊಂಡಿದ್ದಾರೆ. ಮಹಾಂತೇಶ್ ಬಸವನಗೌಡ ಅವರು ಡಿಪ್ಲೋಮಾ ಪದವಿಯನ್ನು ಪೂರೈಸಲು 12 ವರ್ಷ ತೆಗೆದುಕೊಂಡಿದ್ದಾರೆ. ಇವರ ಡಿಪ್ಲೋಮಾ ಪದವಿಯೇ ಅನರ್ಹವಾಗಿದ್ದರೂ, ತನ್ನ ಸಂಬಂಧಿಕರ ಪ್ರಭಾವ ಬಳಸಿ ನೇಮಕವಾಗಿದ್ದಾರೆ’ ಎಂದು ಆರೋಪಿಸಿದರು.

‘ನಿವೃತ್ತ ಯೋಜನಾ ವ್ಯವಸ್ಥಾಪಕ ರವಿ ಅವರ ಚಿಕ್ಕಪ್ಪನ ಮಗ ಗಿರೀಶ್ ಹಾಗೂ ಪಾಲಿಕೆಯ ಮಾಜಿ ಸದಸ್ಯ ಎ.ನಾಗರಾಜ್ ಅವರ ಅಳಿಯ ವೀರೇಶ್ ಹುಗ್ಗಿ ಅವರು ಪ್ರಭಾವ ಬಳಸಿಕೊಂಡು ಯೋಜನಾ ಎಂಜಿನಿಯರ್ ಆಗಿ ನೇಮಕಗೊಂಡಿದ್ದಾರೆ’ ಎಂದು ದೂರಿದರು.

‘ಡಿಪ್ಲೋಮಾದಲ್ಲಿ ಅನುತ್ತೀರ್ಣರಾಗಿರುವ ಎಚ್.ಕೆ. ಶಿವಕುಮಾರ್, ಜಿ.ಬಿ. ನಾಗರಾಜ್, ವೈ.ಜಯಶ್ರೀ ಅವರು ನಕಲಿ ದಾಖಲೆಗಳನ್ನು ಸಲ್ಲಿಸಿ ಎಂಜಿನಿಯರ್ ಆಗಿ ನೇಮಕಗೊಂಡಿದ್ದಾರೆ. ಯೋಜನಾ ವ್ಯವಸ್ಥಾಪಕ ಡಿ.ಎಸ್. ಚಂದನ್ ಅವರ ಅನಧಿಕೃತ ಆಪ್ತ ಸಹಾಯಕನಾಗಿ ಕೆಲಸ ಮಾಡುತ್ತಿರುವ ಎಂ.ರಾಘವೇಂದ್ರ ಅವರನ್ನು ಲೆಕ್ಕಿಗರನ್ನಾಗಿ, ವೆಂಕಟೇಶ್ ಅವರನ್ನು ಚಾಲಕರನ್ನಾಗಿ, ನಂದ್ಯಮ್ಮ ಅವರನ್ನು ಕಚೇರಿ ಸಹಾಯಕರನ್ನಾಗಿ ನೇಮಿಸಿಕೊಳ್ಳಲಾಗಿದೆ. ಈ ಎಲ್ಲ ನೇಮಕಗಳನ್ನು ಹಿಂದಿನ ಜಿಲ್ಲಾಧಿಕಾರಿ ಅವರು ಜಿಲ್ಲಾ ಉಸ್ತುವಾರಿ ಸಚಿವರ ಅಣತಿಯಂತೆ ಮಾಡಿರುವ ಶಂಕೆ ಇದೆ’ ಎಂದು ಆರೋಪಿಸಿದರು.

ಕಾನೂನುಬಾಹಿರವಾಗಿ ನೇಮಕಗೊಂಡ ಎಲ್ಲರನ್ನೂ ಸೇವೆಯಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿದರು.

ಬಿಜೆಪಿ ಮುಖಂಡರಾದ ಎನ್.ಎಚ್. ಹಾಲೇಶ್, ವಾಟರ್ ಮಂಜಣ್ಣ, ರಾಜು ತೋಟಪ್ಪ ಮತ್ತಿತರರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.