ಗುರುವಾರ , ಆಗಸ್ಟ್ 11, 2022
21 °C

ಪೊಲೀಸ್ ಭದ್ರತೆಯಲ್ಲಿ ಬಸ್‌ಗಳ ಸಂಚಾರ ಆರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗರೆ: ನಗರದಲ್ಲಿ ಪೊಲೀಸ್ ಭದ್ರತೆಯಲ್ಲಿ ಸೋಮವಾರ ಬಸ್‌ಗಳ ಸಂಚಾರ ಆರಂಭಿಸಲಾಗಿದೆ.

ಮಧ್ಯಾಹ್ನದವರೆಗೆ ರಾಣೇಬೆನ್ನೂರು,  ಚಿತ್ರದುರ್ಗ ಹಾಗೂ ಹರಿಹರ ಪಟ್ಟಣಗಳಿಗೆ ತಲಾ ಎರಡು ಹಾಗೂ ಹರಪನಹಳ್ಳಿಗೆ ಒಂದು ಸೇರಿ 7 ಬಸ್‌ಗಳು ಸಂಚರಿಸಿದವು.

ಬಸ್ ಸಂಚಾರ ಆರಂಭವಾಗುತ್ತಿರುವ ಸುದ್ದಿ ತಿಳಿದು ವಿವಿಧ ನಗರ ಹಾಗೂ ಪಟ್ಟಣಗಳಿಗೆ ತೆರಳಲು ನಿಲ್ದಾಣಗಳತ್ತ ಬರುತ್ತಿದ್ದು, ಕೆಲವು ಪ್ರಯಾಣಿಕರು ಬೆಳಿಗ್ಗೆಯಿಂದ ಕಾದು ಕುಳಿತಿದ್ದಾರೆ. ಆದರೆ ನಿಗದಿತ ಸಮಯಕ್ಕೆ ಬಸ್‌ಗಳು ಹೊರಡುತ್ತಿಲ್ಲ.

‘ದಾವಣಗೆರೆ 1,2 ಹಾಗೂ ಹರಿಹರ ಘಟಕಗಳ 1,132 ನೌಕರರಲ್ಲಿ ಕೇವಲ 14 ಮಂದಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಭಾನುವಾರ ರಾತ್ರಿ ಬೆಂಗಳೂರು, ಕಲಬುರ್ಗಿ, ರಾಯಚೂರು, ಹುಮ್ನಾಬಾದ್‌ಗಳಿಗೆ 7 ಬಸ್‌ಗಳು ಸಂಚರಿಸಿವೆ.  ಬೆಳಿಗ್ಗೆಯಿಂದ ಬಸ್ ಸಂಚಾರ ಆರಂಭವಾಗಿದ್ದು, ಯಾವುದೇ ತೊಂದರೆಯಾಗಿಲ್ಲ. ಚಾಲಕರು ಬಂದ ನಂತರ ‍ಪ್ರಯಾಣಿಕರ ಅಗತ್ಯಗಳನ್ನು ನೋಡಿಕೊಂಡು ಬಸ್‌ಗಳನ್ನು ಕಳುಹಿಸಲಾಗುವುದು’ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಸಿದ್ದೇಶ್ವರ್ ಹೆಬ್ಬಾಳ್ ತಿಳಿಸಿದರು.

‘ದಿನಕ್ಕೆ ₹40 ಲಕ್ಷದಂತೆ ಮೂರು ದಿವದಿಂದ ₹1.20 ಕೋಟಿ ನಷ್ಟವಾಗಿದೆ. ಚಾಲಕರು ಸ್ವಇಚ್ಛೆಯಿಂದ ಕರ್ತವ್ಯಕ್ಕೆ ಮರಳುತ್ತಿದ್ದಾರೆ. ಸಂಜೆಯ ವೇಳೆಗೆ ಸರಿಹೋಗುವ ನಿರೀಕ್ಷೆ ಇದೆ’ ಎಂದು ಸಿದ್ದೇಶ್ವರ್ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು