ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ: ಸಿ.ಜಿ.ಆಸ್ಪತ್ರೆಯಲ್ಲಿ ಚಾವಣಿ ಕುಸಿತ

Published 14 ಮಾರ್ಚ್ 2024, 7:28 IST
Last Updated 14 ಮಾರ್ಚ್ 2024, 7:28 IST
ಅಕ್ಷರ ಗಾತ್ರ

ದಾವಣಗೆರೆ: ಇಲ್ಲಿನ ಚಿಗಟೇರಿ ಆಸ್ಪತ್ರೆಯಲ್ಲಿ ಚಾವಣಿ ಕುಸಿದು ರೋಗಿಗಳಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಮಂಗಳವಾರ ಬೆಳಿಗ್ಗಿನ ಜಾವ ಆಸ್ಪತ್ರೆಯ 71-72ನೇ ವಾರ್ಡ್‌ನಲ್ಲಿ ಹಳೆಯ ಕಟ್ಟಡವಾಗಿದ್ದರಿಂದ ತಾರಸಿಯ ಮೇಲೆ ಹಾಕಿದ್ದ ಗಾರೆ ಕಳಚಿದ್ದು, ಕಟ್ಟಡದ ಚೂರುಗಳು ಕೆಳಗೆ ಬಿದ್ದಿವೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

‘ಚಾವಣಿಯ ಗೋಡೆಗಳು ಅಸ್ಥಿಪಂಜರದಂತಾಗಿದ್ದು, ವಾರ್ಡ್‌ಗಳಲ್ಲಿ‌ ಮಲಗಿಕೊಳ್ಳಬೇಕು ಜೀವ ಕೈಯಲ್ಲಿ ಹಿಡಿದು ಮಲಗಬೇಕಾದ ಪರಿಸ್ಥಿತಿ ಬಂದಿದೆ ರೋಗಿಗಳ ಪೋಷಕರು ಆರೋಪಿಸಿದರು.

‘50 ವರ್ಷಗಳ ಹಳೆಯ ಕಟ್ಟಡವಾಗಿರುವುದರಿಂದ ಗಾರೆ ಉದುರಿದೆ. ವಾರ್ಡ್‌ಗಳಲ್ಲಿ ಕಟ್ಟಡಗಳ ದುರಸ್ತಿಗೆ ಇಲಾಖೆಗೆ ಪ್ರಸ್ತಾವ ಸಲ್ಲಿಸಿದ್ದು, ನಾನು ಇಲಾಖೆಗೆ ಭೇಟಿ ನೀಡಿ ಆಯುಕ್ತರಿಗೆ ಮನವರಿಕೆ ಮಾಡುತ್ತೇನೆ’ ಎಂದು ಚಿಗಟೇರಿ ಜಿಲ್ಲಾ ಆಸ್ಪತ್ರೆ ಅಧೀಕ್ಷಕ ಡಾ. ನಾಗೇಂದ್ರಪ್ಪ ಎಂ.ಬಿ., ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT