ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದ 29 ಶಿಕ್ಷಕರ ತರಬೇತಿ ಕಾಲೇಜುಗಳ ಮಾನ್ಯತೆ ರದ್ದು

Last Updated 8 ಫೆಬ್ರುವರಿ 2018, 19:21 IST
ಅಕ್ಷರ ಗಾತ್ರ

ನವದೆಹಲಿ:‌ ರಾಷ್ಟ್ರೀಯ ಶಿಕ್ಷಕರ ಶಿಕ್ಷಣ ಮಂಡಳಿ(ಎನ್‌ಸಿಟಿಇ) ಕಾಯ್ದೆಯ ನಿಯಮ ಮತ್ತು ಮಾನದಂಡಗಳನ್ನು ಪಾಲಿಸದ ಕರ್ನಾಟಕದ 29 ಸೇರಿದಂತೆ ದೇಶದ ಒಟ್ಟು 133 ಬಿ.ಇಡಿ ಕಾಲೇಜುಗಳ ಮಾನ್ಯತೆಯನ್ನು ಹಿಂದಕ್ಕೆ ಪಡೆಯಲಾಗಿದೆ ಎಂದು ರಾಜ್ಯಸಭೆಗೆ ಗುರುವಾರ ಕೇಂದ್ರ ತಿಳಿಸಿದೆ.

ಮಾನ್ಯತೆ ರದ್ದಾದ ಕಾಲೇಜುಗಳಲ್ಲಿ ಮಹಾರಾಷ್ಟ್ರದ 28, ತಮಿಳುನಾಡಿನ 20 ಮತ್ತು ಮಧ್ಯಪ್ರದೇಶದ 17 ಸೇರಿವೆ.

‘2016–17ನೇ ಶೈಕ್ಷಣಿಕ ಅವಧಿಯಲ್ಲಿ ಎನ್‌ಸಿಟಿಇ ಈ ಕಾಲೇಜುಗಳಿಗೆ ನೀಡಿದ್ದ ಮಾನ್ಯತೆಯನ್ನು ಹಿಂದಕ್ಕೆ ಪಡೆದಿದೆ’ ಎಂದು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಖಾತೆಯ ರಾಜ್ಯ ಸಚಿವ ಉಪೇಂದ್ರ ಕುಶ್ವಾಹ ಅವರು ಹೇಳಿದ್ದಾರೆ.

ಮಾನ್ಯತೆ ಹಿಂದಕ್ಕೆ ಪಡೆದಿರುವ ಪಟ್ಟಿಯಲ್ಲಿ ದೆಹಲಿಯ ಯಾವ ಕಾಲೇಜುಗಳ ಹೆಸರಿಲ್ಲ. ಬಿ.ಇಡಿ ಕಾಲೇಜುಗಳ ಶಿಕ್ಷಣದ ಗುಣಮಟ್ಟದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದ ಕೇಂದ್ರ ಹೊಸ ಬಿ.ಇಡಿ ಕಾಲೇಜುಗಳಿಗೆ ಅನುಮತಿ ನೀಡುವುದಿಲ್ಲ ಎಂದು ಕಳೆದ ವರ್ಷ ಘೋಷಣೆ ಮಾಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT