ಜಿಲ್ಲೆಯಲ್ಲಿ ಕಾಫಿ ಕಾಳು ಮೆಣಸು ಬೆಳೆ ಬೆಳೆದ ಹಲವು ರೈತರು ಆರ್ಥಿಕವಾಗಿ ಲಾಭ ಕಂಡಿದ್ದಾರೆ. ಬೆಳೆಗಾರರಿಗೆ ಇಲಾಖೆಯಿಂದ ಅಗತ್ಯ ಸಲಹೆ ನೀಡಿ ಪ್ರೋತ್ಸಾಹಿಸಲಾಗುತ್ತಿದೆ
ರಾಘವೇಂದ್ರ ಪ್ರಸಾದ್ ಉಪನಿರ್ದೇಶಕ ತೋಟಗಾರಿಕೆ ಇಲಾಖೆ
ಚನ್ನಗಿರಿ ತಾಲ್ಲೂಕಿನಲ್ಲಿ ರೈತರು ಕಾಫಿ ಮಾತ್ರವಲ್ಲದೆ 250ರಿಂದ 300 ಹೆಕ್ಟೇರ್‌ನಲ್ಲಿ ಕಾಳುಮೆಣಸನ್ನೂ ಬೆಳೆಯುತ್ತಿದ್ದಾರೆ. ಇಲಾಖೆಯಿಂದ ಕಾಳುಮೆಣಸು ಬೆಳೆಗೆ ಸಬ್ಸಿಡಿಯನ್ನೂ ನೀಡಲಾಗುತ್ತಿದೆ
ಶ್ರೀಕಾಂತ್ ಕೆ.ಎಸ್.ಹಿರಿಯ ಸಹಾಯಕ ನಿರ್ದೇಶಕ ತೋಟಗಾರಿಕೆ ಇಲಾಖೆ
ಒಟ್ಟು 7 ಎಕರೆಯಲ್ಲಿ ಕಾಫಿ ಬೆಳೆ ಬೆಳೆದಿದ್ದೇನೆ. ಕಾಫಿ ಹಣ್ಣನ್ನು ಒಣಗಿಸಿ ಮಾರಾಟ ಮಾಡಿದ್ದು ಕ್ವಿಂಟಲ್‌ಗೆ ₹ 25000 ದರ ಸಿಕ್ಕಿದೆ. ವ್ಯಾಪಾರಿಗಳೇ ಬೆಳೆಗಾರರಿಂದ ನೇರವಾಗಿ ಒಣಗಿದ ಕಾಫಿ ಹಣ್ಣು ಖರೀದಿಸುತ್ತಿದ್ದಾರೆ