ಮೆಲ್ಬೋರ್ನ್: ಅಕ್ಟೋಬರ್ 19ರಿಂದ ತವರಿನಲ್ಲಿ ಆರಂಭವಾಗಲಿರುವ ಭಾರತ ವಿರುದ್ಧದ ಮೂರು ಪಂದ್ಯಗಳ ಏಕದಿನ ಹಾಗೂ ಐದು ಪಂದ್ಯಗಳ ಟಿ20 ಸರಣಿಯ ಮೊದಲ ಎರಡು ಪಂದ್ಯಗಳಿಗೆ ಆಸ್ಟ್ರೇಲಿಯಾ ತಂಡವನ್ನು ಪ್ರಕಟಿಸಲಾಗಿದೆ. ಏಕದಿನ ತಂಡಕ್ಕೆ ಸ್ಟಾರ್ ವೇಗಿ ಮಿಚೆಲ್ ಸ್ಟಾರ್ಕ್ ಮರಳಿದ್ದು, ಪ್ಯಾಟ್ ಕಮಿನ್ಸ್ ಅನುಪಸ್ಥಿತಿಯಲ್ಲಿ ತಂಡವನ್ನು ಮಿಚೆಲ್ ಮಾರ್ಷ್ ಮುನ್ನಡೆಸಲಿದ್ದಾರೆ.

ಕಳೆದ ತಿಂಗಳು ಟಿ20 ಅಂತರರಾಷ್ಟ್ರೀಯ ಕ್ರಿಕೆಟ್ ನಿವೃತ್ತಿ ಘೋಷಿಸಿದ್ದ ಸ್ಟಾರ್ಕ್, ಆಗಸ್ಟ್ನಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಿಂದ ಹೊರಗುಳಿದಿದ್ದರು. ಇದೀಗ ಅವರು ಭಾರತ ವಿರುದ್ಧದ ಏಕದಿನ ಸರಣಿಗೆ ಆಯ್ಕೆಯಾಗಿದ್ದಾರೆ. ಆ್ಯಷಸ್ ಸರಣಿಗೆ ಪ್ರಮುಖ ಬೌಲರ್ ಆಗಿರುವುದರಿಂದ ಅವರಿಗೆ ಕೆಲಸದ ಹೊರೆ ಕಡಿಮೆ ಮಾಡುವ ಉದ್ದೇಶದಿಂದ ಕೆಲವು ಸರಣಿಗಳಿಗೆ ವಿಶ್ರಾಂತಿ ನೀಡಲಾಗುತ್ತಿದೆ.

ಇನ್ನು ಮುಂದಿನ ವರ್ಷ (2026) ನಡೆಯಲಿರುವ ಟಿ20 ವಿಶ್ವಕಪ್ ಗಮದಲ್ಲಿಟ್ಟುಕೊಂಡು ಏಕದಿನ ಸರಣಿ ಬಳಿಕ ನಡೆಯಲಿರುವ ಮೊದಲ ಎರಡು ಟಿ–20 ಪಂದ್ಯಕ್ಕೆ 14 ಸದಸ್ಯರ ತಂಡವನ್ನು ಘೋಷಣೆ ಮಾಡಿದ್ದಾರೆ. ಈ ತಂಡವನ್ನು ಕೂಡ ಮಿಚಲ್ ಮಾರ್ಷ್ ಅವರು ಮುನ್ನಡೆಸಲಿದ್ದಾರೆ.

ಆಸ್ಟ್ರೇಲಿಯಾ ಏಕದಿನ ತಂಡ: ಮಿಚೆಲ್ ಮಾರ್ಷ್ (ನಾಯಕ), ಕ್ಸೇವಿಯರ್ ಬಾರ್ಟ್ಲೆಟ್, ಅಲೆಕ್ಸ್ ಕ್ಯಾರಿ, ಕೂಪರ್ ಕಾನೊಲಿ, ಬೆನ್ ದ್ವಾರ್ಶುಯಿಸ್, ನಾಥನ್ ಎಲ್ಲಿಸ್, ಕ್ಯಾಮರೂನ್ ಗ್ರೀನ್, ಜೋಶ್ ಹ್ಯಾಜಲ್ವುಡ್, ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್, ಮಿಚೆಲ್ ಓವನ್, ಮ್ಯಾಥ್ಯೂ ರೆನ್ಶಾ, ಮ್ಯಾಥ್ಯೂ ಶಾರ್ಟ್, ಮಿಚೆಲ್ ಸ್ಟಾರ್ಕ್, ಆಡಮ್ ಜಂಪಾ.
.ODI ನಾಯಕತ್ವದಿಂದ ರೋಹಿತ್ ಶರ್ಮಾಗೆ ಕೊಕ್: ಆಸಿಸ್ ಸರಣಿಗೆ ಹೊಸ ಕ್ಯಾಪ್ಟನ್.ODI ನಾಯಕತ್ವದಿಂದ ರೋಹಿತ್ರನ್ನು ಕೆಳಗಿಳಿಸಿದ್ದೇಕೆ? ಕಾರಣ ತಿಳಿಸಿದ ಅಗರ್ಕರ್.
ಆಸ್ಟ್ರೇಲಿಯಾ ಟಿ20 ತಂಡ (ಮೊದಲ ಎರಡು ಪಂದ್ಯಗಳು): ಮಿಚೆಲ್ ಮಾರ್ಷ್ (ನಾಯಕ), ಸೀನ್ ಅಬಾಟ್, ಕ್ಸೇವಿಯರ್ ಬಾರ್ಟ್ಲೆಟ್, ಟಿಮ್ ಡೇವಿಡ್, ಬೆನ್ ದ್ವಾರ್ಶುಯಿಸ್, ನಾಥನ್ ಎಲ್ಲಿಸ್, ಜೋಶ್ ಹ್ಯಾಜಲ್ವುಡ್, ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್, ಮ್ಯಾಥ್ಯೂ ಕುಹ್ನೆಮನ್, ಮಿಚೆಲ್ ಓವನ್, ಮ್ಯಾಥ್ಯೂ ಶಾರ್ಟ್, ಮಾರ್ಕಸ್ ಸ್ಟೊಯಿನಿಸ್, ಆಡಮ್ ಜಂಪಾ.

ವೇಳಾ ಪಟ್ಟಿ:

ಮೊದಲ ಪಂದ್ಯ ಅಕ್ಟೋಬರ್ 19 – ಪರ್ತ್

ಎರಡನೇ ಪಂದ್ಯ ಅಕ್ಟೋಬರ್ 23– ಅಡಿಲೇಡ್

ಮೂರನೇ ಪಂದ್ಯ ಅಕ್ಟೋಬರ್ 25– ಸಿಡ್ನಿ

ಟಿ20ಐ ಸರಣಿ ವೇಳಾಪಟ್ಟಿ

ಮೊದಲ ಪಂದ್ಯ ಅಕ್ಟೋಬರ್ 29– ಕ್ಯಾನ್ಬೆರಾ,

ಎರಡನೇ ಪಂದ್ಯ ಅಕ್ಟೋಬರ್ 31–ಮೆಲ್ಬೋರ್ನ್,

ಮೂರನೇ ಪಂದ್ಯ ನವೆಂಬರ್ 2– ಹೊಬಾರ್ಟ್,

ನಾಲ್ಕನೇ ಪಂದ್ಯ ನವೆಂಬರ್ 6– ಗೋಲ್ಡ್ ಕೋಸ್ಟ್

ಕೊನೆಯ ಪಂದ್ಯ ನವೆಂಬರ್ 8 –ಬ್ರಿಸ್ಬೇನ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.