ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ: 345 ಮಂದಿಗೆ ಕೊರೊನಾ, 620 ಮಂದಿ ಗುಣಮುಖ

Last Updated 10 ಅಕ್ಟೋಬರ್ 2020, 17:04 IST
ಅಕ್ಷರ ಗಾತ್ರ

ದಾವಣಗೆರೆ: ಜಿಲ್ಲೆಯಲ್ಲಿ 345 ಮಂದಿಗೆ ಕೊರೊನಾ ಇರುವುದು ಶನಿವಾರ ದೃಢಪಟ್ಟಿದೆ. 620 ಮಂದಿ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ. ಒಟ್ಟು ಸೋಂಕಿತರ ಸಂಖ್ಯೆ 18 ಸಾವಿರ ದಾಟಿದೆ.

ದಾವಣಗೆರೆ ತಾಲ್ಲೂಕು ಒಂದರಲ್ಲಿಯೇ 163 ಮಂದಿಗೆ ಸೋಂಕು ಇರುವುದು ಖಚಿತವಾಗಿದೆ. ಹೊನ್ನಾಳಿ–ನ್ಯಾಮತಿ ತಾಲ್ಲೂಕಿನಲ್ಲಿ 67, ಹರಿಹರ ತಾಲ್ಲೂಕಿನಲ್ಲಿ 43, ಚನ್ನಗಿರಿ ತಾಲ್ಲೂಕಿನಲ್ಲಿ 36, ಜಗಳೂರು ತಾಲ್ಲೂಕಿನಲ್ಲಿ 34 ಮಂದಿಗೆ ಕೊರೊನಾ ಬಂದಿದೆ.

ದಾವಣಗೆರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹೊರ ಜಿಲ್ಲೆಯ ಇಬ್ಬರಿಗೆ ಸೋಂಕು ತಗುಲಿರುವುದು ಖಚಿತವಾಗಿದೆ.

ಜಿಲ್ಲೆಯಲ್ಲಿ ಈವರೆಗೆ 18,332 ಮಂದಿಗೆ ಕೊರೊನಾ ಬಂದಿದೆ. 16,203 ಮಂದಿ ಗುಣಮುಖರಾಗಿದ್ದಾರೆ. 247 ಮಂದಿ ಮೃತಪಟ್ಟಿದ್ದಾರೆ. 1,882 ಸಕ್ರಿಯ ಪ್ರಕರಣಗಳಿವೆ.

7 ಮಂದಿಗೆ ಕೊರೊನಾ ಪಾಸಿಟಿವ್

ಮಲೇಬೆನ್ನೂರು: ಹೋಬಳಿ ವ್ಯಾಪ್ತಿಯಲ್ಲಿ ಶನಿವಾರ 7 ಮಂದಿಗೆ ಕೊರೊನಾ ಸೋಂಕು ತಗುಲಿರುವುದು ಖಚಿತಪಟ್ಟಿದೆ.

ಪಟ್ಟಣದ ಮೂವರು ಪುರುಷರು, ಹೊಳೆಸಿರಿಗೆರೆ, ಹಳ್ಳಿಹಾಳ್, ಕುಂಬಳೂರು ಗ್ರಾಮದ ತಲಾ ಮೂವರು ಪುರುಷರು, ದಿಬ್ಬದಹಳ್ಳಿಯ ಮಹಿಳೆಗೆ ಸೋಂಕು ತಗುಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT