ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ: ತಾಯಿ–ಮಗು, ದಂಪತಿ, ಕುಟುಂಬಕ್ಕೆ ಕೊರೊನಾ ಸೋಂಕು

ಒಂದೇ ದಿನ 18 ಮಂದಿಯಲ್ಲಿ ಸೋಂಕು ಇರುವುದು ದೃಢ
Last Updated 8 ಜುಲೈ 2020, 15:57 IST
ಅಕ್ಷರ ಗಾತ್ರ

ದಾವಣಗೆರೆ: ದೊಡ್ಡೇರಿಯ ತಾಯಿ–ಮಗು, ಪಿ.ಜೆ. ಬಡಾವಣೆಯ ದಂಪತಿ, ಹರಿಹರದ ಕುಟುಂಬದ ನಾಲ್ವರು ಹೀಗೆ ಒಟ್ಟು 18 ಮಂದಿಗೆ ಕೊರೊನಾ ಸೋಂಕು ಇರುವುದು ಬುಧವಾರ ದೃಢಪಟ್ಟಿದೆ.

ವಿವೇಕಾನಂದ ಬಡಾವಣೆಯ 66 ವರ್ಷದ ವೃದ್ಧರಿಗೆ ಕೊರೊನಾ ಬಂದಿದೆ. ರ‍್ಯಾಂಡಮ್‌ ಆಗಿ ತಪಾಸಣೆ ಮಾಡುವಾಗ ಇವರನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಹೊರ ಜಿಲ್ಲೆಯಿಂದ ಬಂದಿರುವ ಪಿ.ಜೆ. ಬಡಾವಣೆಯ 50 ವರ್ಷದ ಮಹಿಳೆ ಮತ್ತು ಅವರ ಪತಿ 57 ವರ್ಷದ ವ್ಯಕ್ತಿಗೆ ಸೋಂಕು ಇರುವುದು ದೃಢಪಟ್ಟಿದೆ.

ಚನ್ನಗಿರಿ ತಾಲ್ಲೂಕಿನ ಗಂಗಗೊಂಡನಹಳ್ಳಿಯ 35 ವರ್ಷದ ಮಹಿಳೆ, ತಾವರಕೆರೆಯ 38 ವರ್ಷದ ಪುರುಷನಿಗೆ ಸೋಂಕು ತಗುಲಿದೆ. ರ‍್ಯಾಂಡಮ್‌ ಆಗಿ ತಪಾಸಣೆ ಮಾಡುವಾಗ ಇವರ ಗಂಟಲುದ್ರವ ಮಾದರಿ ಕಳುಹಿಸಲಾಗಿತ್ತು. ಚನ್ನಗಿರಿ ಕುರುಬರ ಬೀದಿಯ 40 ವರ್ಷದ ವ್ಯಕ್ತಿಗೂ ಕೊರೊನಾ ಕಾಣಿಸಿಕೊಂಡಿದೆ. ಅವರು ಕೊರೊನಾ ವಾರಿಯರ್‌ ಆಗಿ ಮುಂಚೂಣಿ ಕೆಲಸಗಾರರಾಗಿದ್ದರು.

ಶೀತಜ್ವರದಿಂದ ಬಳಲುತ್ತಿದ್ದ ದಾವಣಗೆರೆ ನರಸರಾಜಪೇಟೆಯ 45 ವರ್ಷದ ಪುರುಷನಿಗೆ ಕೊರನಾ ವೈರಸ್‌ ಇರುವುದು ದೃಢಪಟ್ಟಿದೆ.

ಹರಿಹರ ಗೌಸಿಯಾ ಕಾಲೊನಿಯ 65 ವರ್ಷದ ವೃದ್ಧ, 57 ವರ್ಷದ ಮಹಿಳೆ, 36 ಮತ್ತು 33 ವರ್ಷದ ಪುರುಷರು ಹೀಗೆ ಒಂದೇ ಕುಟುಂಬದ ನಾಲ್ವರಿಗೆ ಗೌಸಿಯಾ ಕಾಲೊನಿಯ 30 ವರ್ಷದ ಯುವಕನ ಸಂಪರ್ಕದಿಂದ ಕೊರೊನಾ ಬಂದಿದೆ.

ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆಗೆ ಹೋಗಿ ಬಂದಿರುವ ದಾವಣಗೆರೆ ವಿನಾಯಕ ಬಡಾವಣೆಯ 52 ವರ್ಷದ ವ್ಯಕ್ತಿಗೂ ಸೋಂಕು ಇರುವುದು ಖಚಿತಗೊಂಡಿದೆ. ವಿಜಯನಗರ ಬಡಾವಣೆಯ 43 ವರ್ಷದ ಪುರುಷ ಮತ್ತು ರಾಜೀವ್‌ಗಾಂಧಿ ಬಡಾವಣೆಯ 32 ವರ್ಷದ ಯುವಕನಿಗೆ ಹೊಂಡದ ಸರ್ಕಲ್‌ನ 35 ವರ್ಷದ ಮಹಿಳೆಯ ಸಂಪರ್ಕದಿಂದ ಸೊಂಕು ತಗುಲಿದೆ.

ಬಾಷಾನಗರದ 49 ವರ್ಷದ ಪುರುಷನಲ್ಲಿ ವೈರಸ್‌ ಕಾಣಿಸಿಕೊಂಡಿದ್ದು, ಶೀತಜ್ವರ ಎಂದು ಗುರುತಿಸಲಾಗಿದೆ.

ನ್ಯಾಮತಿ ತಾಲ್ಲೂಕು ದೊಡ್ಡೇರಿಯ 38 ವರ್ಷದ ಪುರುಷನ ಸಂಪರ್ಕದಿಂದ 29 ವರ್ಷದ ಮಹಿಳೆ ಮತ್ತು ಅವರ 8 ವರ್ಷದ ಮಗನಿಗೆ ಸೋಂಕು ಇರುವುದು ದೃಢಪಟ್ಟಿದೆ. ಶೀತಜ್ವರ ಇದ್ದ ಎಂಸಿಸಿ ಎ ಬ್ಲಾಕ್‌ನ 45 ವರ್ಷದ ಪುರುಷನಿಗೆ ಸೋಂಕು ಇರುವುದು ಖಚಿತವಾಗಿದೆ.

ಕಡಿಮೆ ಸಕ್ರಿಯ ಪ್ರಕರಣಗಳಲ್ಲಿ ದ್ವಿತೀಯ ಸ್ಥಾನ

ಜಿಲ್ಲೆಯಲ್ಲಿ ಈವರೆಗೆ 383 ಮಂದಿಗೆ ಸೋಂಕು ಕಾಣಿಸಿಕೊಂಡಿದೆ. 324 ಮಂದಿ ಬಿಡುಗಡೆಗೊಂಡಿದ್ದಾರೆ. 13 ಮಂದಿ ಮೃತಪಟ್ಟಿದ್ದಾರೆ. ಸಕ್ರಿಯ 46 ಪ್ರಕರಣಗಳಿವೆ. ಮೂವರು ಐಸಿಯುನಲ್ಲಿದ್ದಾರೆ.

ರಾಜ್ಯದಲ್ಲಿ ಅತಿ ಕಡಿಮೆ ಸಕ್ರಿಯ ಪ್ರಕರಣಗಳಲ್ಲಿ ಚಿತ್ರದುರ್ಗ (28) ಪ್ರಥಮ ಸ್ಥಾನದಲ್ಲಿದ್ದರೆ, ದಾವಣಗೆರೆ (46) ದ್ವಿತೀಯ ಸ್ಥಾನದಲ್ಲಿದೆ. ಚಿಕ್ಕಮಗಳೂರು (52) ಮೂರನೇ ಸ್ಥಾನ ಹೊಂದಿದೆ. ಬೆಂಗಳೂರು (10,103), ದಕ್ಷಿಣ ಕನ್ನಡ (859), ಬಳ್ಳಾರಿ (880) ಕ್ರಮವಾಗಿ ಅತಿ ಹೆಚ್ಚು ಸಕ್ರಿಯ ಪ್ರಕರಣಗಳನ್ನು ಹೊಂದಿರುವ ಜಿಲ್ಲೆಗಳಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT