ದಾವಣಗೆರೆ: ‘ತಮ್ಮ ಪುತ್ರ ಚಾಕುವಿನಿಂದ ಇರಿದು ಹಲ್ಲೆ ನಡೆಸಿದರೂ ನನ್ನ ಆರೋಗ್ಯದ ಬಗ್ಗೆ ಪಾಲಿಕೆ ಸದಸ್ಯ ನಿಂಗಪ್ಪ ವಿಚಾರಿಸಲಿಲ್ಲ. ಆಸ್ಪತ್ರೆಗೆ ಭೇಟಿ ನೀಡಿ, ಚಿಕಿತ್ಸೆಗೆ ನೆರವು ನೀಡುತ್ತೇನೆ ಎಂದು ನೀಡಿದ್ದ ಭರವಸೆಯನ್ನೂ ಅವರು ಈಡೇರಿಸಲಿಲ್ಲ’ ಎಂದು ಯುವಕ ಬಿ.ಆರ್. ಹರೀಶ್ ಆರೋಪಿಸಿದರು.

‘ಇದೇ ಜೂನ್ 5ರಂದು ನಿಂಗಪ್ಪ ಅವರ ಪುತ್ರ ರಾಕೇಶ್ ನನಗೆ ಚಾಕುವಿನಿಂದ ಇರಿದಿದ್ದ. ಇದರಿಂದ ನನ್ನ ಜೀವನಕ್ಕೇ ತೊಂದರೆಯಾಗಿದೆ’ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಅಳಲು ತೋಡಿಕೊಂಡರು.

‘ನಾನು, ರಾಕೇಶ್ ಇಬ್ಬರೂ ಸ್ನೇಹಿತರೇ. ನಮ್ಮಿಬ್ಬರಿಗೂ ಸ್ನೇಹಿತೆಯಾದ ಹುಡುಗಿಯನ್ನು ನಾನು ಪ್ರೀತಿಸುತ್ತಿದ್ದೇನೆ ಎಂದು ರಾಕೇಶ್ ತಪ್ಪು ತಿಳಿದು, ನನ್ನ ಮೇಲೆ ಹಲ್ಲೆ ನಡೆಸಿದ. ಪ್ರಕರಣದಿಂದ ನನ್ನ ಮತ್ತು ಹುಡುಗಿಯ ಭವಿಷ್ಯಕ್ಕೆ ತೊಂದರೆಯಾಗುತ್ತಿದೆ. ಆದರೆ, ಹುಡುಗಿ ಮತ್ತು ನನ್ನ ನಡುವೆ ಇರುವುದು ಗೆಳತನವಷ್ಟೇ. ಹುಡುಗಿಯ ಮತ್ತು ನನ್ನ ಕುಟುಂಬದವರು ಸ್ನೇಹದಿಂದ್ದೇವೆ’ ಎಂದು ಸ್ಪಷ್ಟಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ನವೀನ್, ಮನೋಜ, ಎಂ. ರಾಜಕುಮಾರ್ ಅವರೂ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.