ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವ್ಯವಹಾರದ ಸರಿಯಾದ ಮಾಹಿತಿ ನೀಡಬೇಕು

ಜಿಎಸ್‌ಟಿ ವಾರ್ಷಿಕ ವಹಿವಾಟು ಸಲ್ಲಿಸುವಿಕೆಯ ಕಾರ್ಯಾಗಾರದಲ್ಲಿ ಜತಿನ್‌ ಕ್ರಿಸ್ಟೋಪರ್‌
Last Updated 9 ಡಿಸೆಂಬರ್ 2022, 4:10 IST
ಅಕ್ಷರ ಗಾತ್ರ

ದಾವಣಗೆರೆ: ನೀಡಬೇಕಾದ ಎಲ್ಲ ಮಾಹಿತಿನಗಳನ್ನು ನೀಡದೇ ಇದ್ದರೆ ಅದು ಸರ್ಫೆಕ್ಷನ್‌ ಆಗುತ್ತದೆ. ಉದ್ದಿಮೆದಾರರು ಶೇರ್‌ಗಳನ್ನು ಮಾರಾಟ ಮಾಡಿದಾಗ, ಜಮೀನು ಮಾರಾಟ ಮಾಡಿದಾಗ ಇವರಿಗ್ಯಾಕೆ ಇದೆಲ್ಲ ಎಂದು ಬಹಳ ಬಾರಿ ಜಿಎಸ್‌ಟಿ ಪೋರ್ಟಲ್‌ನಲ್ಲಿ ಮಾಹಿತಿ ನೀಡುವುದಿಲ್ಲ. ಎಲ್ಲ ಮಾಹಿತಿಗಳನ್ನು ನೀಡಬೇಕು ಎಂದು ಚಾರ್ಟಡ್ ಅಕೌಂಟೆಂಟ್ ಜತಿನ್ ಕ್ರಿಸ್ಟೋಫರ್ ಹೇಳಿದರು.

ಜಿಲ್ಲಾ ತೆರಿಗೆ ಸಲಹಾಗಾರರ ಸಂಘದ ವತಿಯಿಂದ ಗುರುವಾರ ಬಾಪೂಜಿ ಎಂಬಿಎ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ತೆರಿಗೆ ಸಲಹೆಗಾರರಿಗೆ, ಲೆಕ್ಕ ಬರಹಗಾರರಿಗೆ ಮತ್ತು ವ್ಯಾಪಾರಸ್ತರು ಮತ್ತು ಕೈಗಾರಿಕೋಧ್ಯಮಿಗಳಿಗೆ ಜಿ.ಎಸ್.ಟಿ-2021-22 ರ ವಾರ್ಷಿಕ ವಹಿವಾಟು ಸಲ್ಲಿಸುವಿಕೆ ಕುರಿತ ಕಾರ್ಯಾಗಾರದಲ್ಲಿ ಸಲಹೆಗಾರರಾಗಿ ಅವರು ಮಾತನಾಡಿದರು.

ತೆರಿಗೆ ಸಲಹೆಗಾರರು, ಸನ್ನದು ಲೆಕ್ಕ ಪರಿಶೋಧಕರು ಜಿ.ಎಸ್.ಟಿ ಕಾಯ್ದೆ ಮತ್ತು ನಿಯಮಗಳನ್ನು ತಿಳಿದುಕೊಂಡು ಸರಿಯಾದ ರೀತಿಯಲ್ಲಿ ಜಿ.ಎಸ್.ಟಿ.ಆರ್ 9 ಮತ್ತು 9ಸಿಯನ್ನು ಅಂತರ್ಜಾಲದಲ್ಲಿ ಸಮಯಕ್ಕೆ ಸರಿಯಾಗಿ ಸಲ್ಲಿಸಬೇಕು ಎಂದು ತಿಳಿಸಿದರು.

ಜಿಎಸ್‌ಟಿ ಕಚೇರಿಗಳಿಂದ ನೋಟಿಸ್ ಬಂದಲ್ಲಿ ಅದು ಜಿಎಸ್‌ಟಿ ಕಾಯ್ದೆ ಮತ್ತು ನಿಯಮಗಳ ಅನುಸಾರ ಬಂದಿದೆಯೇ, ಇಲ್ವೆ ಎಂಬುದನ್ನು ತಿಳಿದುಕೊಳ್ಳಬೇಕು. ಅದಕ್ಕೆ ಸರಿಯಾದ ಉತ್ತರವನ್ನು ನೀಡಬೇಕು. ಇಲ್ಲದಿದ್ದಲ್ಲಿ ತೆರಿಗೆಯ ಜೊತೆಗೆ ಬಡ್ಡಿ ಮತ್ತು ದಂಡವನ್ನು ಕಟ್ಟಬೇಕಾಗುತ್ತದೆ ಎಂದು ವಿವರಿಸಿದರು.

ಪಾವತಿಸಬೇಕಾಗಿರುವುದು ಮತ್ತು ಪಾವತಿ ಮಾಡಿರುವುದು ಹೊಂದಾಣಿಕೆ ಇರಬೇಕು. ಆಗ ಸಮಸ್ಯೆಗಳು ಉಂಟಾಗುವುದಿಲ್ಲ ಎಂದರು.

ಜಿಲ್ಲಾ ತೆರಿಗೆ ಸಲಹಾಗಾರರ ಸಂಘದ ಅಧ್ಯಕ್ಷ ಜಂಬಿಗಿ ರಾಧೇಶ್ ಸ್ವಾಗತಿಸಿದರು. ಎಚ್.ಎಸ್. ಮಂಜುನಾಥ್ ವಂದಿಸಿದರು. ಬಿ.ಜಿ.ಬಿ. ವಿನಯ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT