ಶುಕ್ರವಾರ, ಫೆಬ್ರವರಿ 21, 2020
21 °C

ಕ್ರಿಕೆಟ್‌ ಬೆಟ್ಟಿಂಗ್‌: ಇಬ್ಬರ ಸೆರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ಇಂಗ್ಲೆಂಡ್‌ ಮತ್ತು ಆಫ್ರಿಕಾ ನಡುವಿನ ಕ್ರಿಕೆಟ್‌ ಪಂದ್ಯಕ್ಕೆ ಸಂಬಂಧಿಸಿದಂತೆ ಬುಧವಾರ ಬೆಟ್ಟಿಂಗ್‌ ನಡೆಸುತ್ತಿದ್ದ ಇಬ್ಬರನ್ನು ಬಸವನಗರ ಪೊಲೀಸರು ಬಂಧಿಸಿದ್ದಾರೆ.

ಚಾಮರಾಜಪೇಟೆಯ ಸತೀಶ್‌ ಅಲಿಯಾಸ್‌ ಜಮ್ಮನಹಳ್ಳಿ ಸತೀಶ್ (40), ಮುಖೇಶ್‌ ಅಲಿಯಾಸ್‌ ಮುಖ್ಯ(41) ಬಂಧಿತ ಆರೋಪಿಗಳು. ಚಾಮರಾಜಪೇಟೆ ಸರ್ಕಲ್‌ನ ನಯನ ಹೋಟೆಲ್‌ ಬಳಿ ಮೊಬೈಲ್‌ ಆ್ಯಪ್‌ ಬಳಸಿ ಕ್ರಿಕೆಟ್‌ ಬೆಟ್ಟಿಂಗ್‌ ನಡೆಸುತ್ತಿದ್ದ ವೇಳೆ ದಾಳಿ ನಡೆಸಿದ ಪೊಲೀಸರು ₹31,500 ಮತ್ತು ಎರಡು ಮೊಬೈಲ್‌ ವಶಪಡಿಸಿಕೊಂಡಿದ್ದಾರೆ.

ಆಂಧ್ರಪ್ರದೇಶದ ನಾರಾಯಣ್ ರಾಜ್, ದುರ್ಗಾ ರಾವ್, ನಾರಾಯಣ್ ರಾವ್, ದಾವಣಗೆರೆ ಶ್ಯಾಮ ಮತ್ತು ಹುಬ್ಬಳ್ಳಿಯ ಪ್ರಕಾಶ್ ತಪ್ಪಿಸಿಕೊಂಡಿದ್ದಾರೆ ಎಂದು ಬಸವನಗರ ಎಸ್‌ಐ ನಾಗರಾಜ್‌ ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು