ಸಂತೇಬೆನ್ನೂರು: ಸಮೀಪದ ಸೂಳೆಕೆರೆ ಬಳಿ ಮೂವರು ಶ್ರೀಗಂಧ ಕಳ್ಳರನ್ನು ಬಂಧಿಸಿರುವ ಪೊಲೀಸರು ₹ 6.50 ಲಕ್ಷ ಮೌಲ್ಯದ 61 ಗಂಧದ ತುಂಡುಗಳನ್ನು ವಶಕ್ಕೆ ಪಡೆದಿದ್ದಾರೆ.
ಗಾಳಿಹಳ್ಳಿ ಗ್ರಾಮದ ಇಸ್ಮಾಯಿಲ್, ಭದ್ರಾವತಿ ತಾಲ್ಲೂಕಿನ ದಡಂಗಟ್ಟೆ ನಿವಾಸಿ ಜಬೀವುಲ್ಲಾ, ಶಿವಮೊಗ್ಗ ನಿವಾಸಿ ಹೈದರ್ ಖಾನ್ ಬಂಧಿತರು. ಅವರಿಂದ ಕೃತ್ಯಕ್ಕೆ ಬಳಸಿದ 1 ಬೈಕ್, 2 ಗರಗಸ, 1 ಮಚ್ಚು, 1 ಕೊಡಲಿಯನ್ನು ವಶಪಡಿಸಿಕೊಳ್ಳಲಾಗಿದೆ.
ಮೂವರ ವಿರುದ್ಧ ಚನ್ನಗಿರಿಯಲ್ಲಿ 3 ಪ್ರಕರಣಗಳು, ನ್ಯಾಮತಿ ಪೊಲೀಸ್ ಠಾಣೆಯಲ್ಲಿ 2 ಪ್ರಕರಣ, ಬಸವಾಪಟ್ಟಣ ಪೊಲೀಸ್ ಠಾಣೆಯಲ್ಲಿ 1 ಪ್ರಕರಣ ಸೇರಿದಂತೆ ಒಟ್ಟ 7 ಪ್ರಕರಣಗಳು ದಾಖಲಾಗಿದ್ದವು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ ಮಾರ್ಗದರ್ಶನದಲ್ಲಿ ಸಂತೇಬೆನ್ನೂರು ಪೊಲೀಸ್ ಠಾಣೆಯ ಸಿಪಿಐ ನಿಂಗನಗೌಡ ನೆಗಳೂರ್ ನೇತೃತ್ವದಲ್ಲಿ ಪಿಎಸ್‌ಐ ರೂಪಾ ತೆಂಬದ್, ಸಿಬ್ಬಂದಿ ಸತೀಶ್, ಎಂ. ರುದ್ರೇಶ್, ಉಮೇಶ್ ರೆಡ್ಡಿ, ಆಂಜನೇಯ, ರಾಘವೇಂದ್ರ, ಪ್ರವೀಣ ಗೌಡ, ನಾಗಭೂಷಣ, ಇಬ್ರಾಹಿಂ ಮನ್ನಾಖಾನ್, ಪ್ರಕಾಶ್, ಬೀರೇಶ್ ಪುಟ್ಟಕ್ಕನವರ, ರಘು ಲೋಕೇಶ್ ತಂಡ ಕಾರ್ಯಾಚರಣೆ ನಡೆಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.