ಭಾನುವಾರ, 28 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಸಕ ಪರಮೇಶ್ವರನಾಯ್ಕ ಸಹೋದರ ಸೇರಿ 6 ಜನರ ಬಂಧನ

Last Updated 5 ಜುಲೈ 2021, 7:19 IST
ಅಕ್ಷರ ಗಾತ್ರ

ಉಚ್ಚಂಗಿದುರ್ಗ: ಸಮೀಪದ ಲಕ್ಷ್ಮೀಪುರ ಗ್ರಾಮದಲ್ಲಿ‌ ಶಾಸಕ ಪಿ.ಟಿ. ಪರಮೇಶ್ವರನಾಯ್ಕ ಅವರ ಸಹೋದರ ಪಿ.ಟಿ. ಶಿವಾಜಿನಾಯ್ಕ ಹಾಗೂ ಶರಣಾನಾಯ್ಕ ಸಂಬಂಧಿಕರ ಮೇಲಿನ ಹಲ್ಲೆ ಪ್ರಕರಣ ಸಂಬಂಧ ಅರಸೀಕೆರೆ ಪೊಲೀಸರು 6 ಜನರನ್ನು
ಬಂಧಿಸಿದ್ದಾರೆ.

ಗಾಯಾಳು ಶರಣನಾಯ್ಕ ಅವರ ಸೊಸೆ ಶ್ರೀದೇವಿ ನೀಡಿದ ದೂರಿನ ಅನ್ವಯ ಪಿ.ಟಿ. ಶಿವಾಜಿನಾಯ್ಕ, ಕುಮಾರಿ ಬಾಯಿ, ರಾಹುಲ್ ಎಂಬುವವರನ್ನು ಬಂಧಿಸಲಾಗಿದೆ.

ಪಿ.ಟಿ. ಶಿವಾಜಿನಾಯ್ಕ ಅವರ ಪತ್ನಿ ಕುಮಾರಿಬಾಯಿ ಅವರೂ ನೀಡಿದ್ದ ಪ್ರತಿ ದೂರು ಆಧರಿಸಿ ಶ್ರೀದೇವಿ, ಶಿವಕುಮಾರ್, ಜಗದೀಶ ಅವರನ್ನೂ ಬಂಧಿಸಲಾಗಿದೆ.

ಹಲ್ಲೆ ಪ್ರಕರಣದಲ್ಲಿ ಗಾಯಗೊಂಡಿರುವ ಶರಣನಾಯ್ಕ ಹರಪನಹಳ್ಳಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದೇವಿಬಾಯಿ ಎಂಬುವವರು ತಲೆಮರೆಸಿಕೊಂಡಿದ್ದಾರೆ.ಆರೋಪಿಗಳನ್ನು ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ ಜೈಲಿಗೆ ಸ್ಥಳಾಂತರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ

ಜೂನ್‌ 29ರಂದು ಶಾಸಕರ ತವರು ಲಕ್ಷ್ಮೀಪುರ ಗ್ರಾಮದಲ್ಲಿ ಸಹೋದರ ಪಿ.ಟಿ. ಶಿವಾಜಿನಾಯ್ಕ ಅವರ ಮನೆಯ ಸುತ್ತಲೂ ತಂತಿಬೇಲಿ ನಿರ್ಮಿಸಲು ಗುಂಡಿ ತೋಡುತ್ತಿರುವಾಗ ಮಾತಿನ ಚಕಮಕಿ ನಡೆದು ಮಾರಾಮಾರಿ ನಡೆದಿತ್ತು. ಪ್ರಕರಣ ದಾಖಲಿಸಿಕೊಂಡು ಅರಸೀಕೆರೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT