ಮಲೇಬೆನ್ನೂರು: ಸಮೀಪದ ಉಕ್ಕಡಗಾತ್ರಿ ಕರಿಬಸವೇಶ್ವರ ಗದ್ದುಗೆಯಲ್ಲಿ ಶುಕ್ರವಾರ ಎಳ್ಳಮಾವಾಸ್ಯೆ ಪ್ರಯುಕ್ತ ಅಪಾರ ಸಂಖ್ಯೆಯ ಭಕ್ತರು ಬಂದು ದೇವರ ದರ್ಶನ ಪಡೆದರು.

ಸ್ವಾಮಿಯ ಮೂಲ ಗದ್ದುಗೆ, ಕರಿಬಸವೇಶ್ವರ ಸ್ವಾಮಿಗೆ ಪುಷ್ಪಾಲಂಕಾರ ಮಾಡಲಾಗಿತ್ತು. ಭಕ್ತರು ವಿಶೇಷ ಪೂಜೆ ರುದ್ರಾಭಿಷೇಕ, ಜಲಾಭಿಷೇಕವನ್ನು ನೆರವೇರಿಸಿದರು.

ಮಾಗಿಚಳಿ, ಶೀತಗಾಳಿ ಲೆಕ್ಕಿಸದೆ ಗುರುವಾರ ತಡರಾತ್ರಿ ಬಂದ ಹೆಚ್ಚಿನ ಭಕ್ತರು ಜಾಗರಣೆ ಮಾಡಿ ಭಜನೆ, ಕೀರ್ತನೆ ಹಾಡಿದರು.

ಬ್ರಾಹ್ಮಿ ಸಮಯದಲ್ಲಿ ಹೆಚ್ಚಿನ ಸಂಖ್ಯೆ ಭಕ್ತರು ಬಂದು ತುಂಗಭದ್ರಾ ನದಿಯಲ್ಲಿ ಸ್ನಾನ ಮಾಡಿದರು. ನದಿಪಾತ್ರದಲ್ಲಿ ಬಿಗಿ ಭದ್ರತೆ ಒದಗಿಸಲಾಗಿತ್ತು ಎಂದು ಟ್ರಸ್ಟ್ ಕಾರ್ಯದರ್ಶಿ ಸುರೇಶ್ ಮಾಹಿತಿ ನೀಡಿದರು.

ಟ್ರಸ್ಟ್ ವತಿಯಿಂದ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು. ಭಕ್ತರು ಹಾಗೂ ವಾಹನಗಳ ಭರಾಟೆ ಹೆಚ್ಚಾಗಿತ್ತು.ಪೊಲೀಸರು ಭದ್ರತೆ ಒದಗಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.