ಹರಿಹರ: ನಾಡಹಬ್ಬ ದಸರಾ ಮಹೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸೋಣ ಎಂದು ಶಾಸಕ ಬಿ.ಪಿ.ಹರೀಶ್ ಹೇಳಿದರು.

ನಗರದ ಶ್ರೀ ಓಂಕಾರ ಮಠದ ಸಭಾಂಗಣದಲ್ಲಿ ದಸರಾ ಮಹೋತ್ಸವ ಸಮಿತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ದಸರಾ ಹಬ್ಬ ಆಚರಣೆಯ ಪೂರ್ವಭಾವಿ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.

ಈ ಬಾರಿಯ 21ನೇ ದಸರಾ ಉತ್ಸವವು ಅ. 3ರಿಂದ 12ರವರೆಗೆ ನೆರವೇರಲಿದೆ. ಅ. 12ಕ್ಕೆ ಸಾಮೂಹಿಕ ಬನ್ನಿ ಹಾಗೂ ಅಂಬಾರಿ ಮೆರವಣಿಗೆ ಜರುಗಲಿದ್ದು, ನಗರದ ಎಲ್ಲ ಸಮಾಜದವರು ಪಾಲ್ಗೊಳ್ಳಬೇಕು ಎಂದು ಸಮಿತಿಯ ಅಧ್ಯಕ್ಷ ಶಂಕರ್ ಖಟಾವ್ಕರ್ ಕೋರಿದರು.

ನಗರಸಭೆ ಅಧ್ಯಕ್ಷೆ ಕವಿತಾ ಬೇಡರ, ಬಿಜೆಪಿ ಮುಖಂಡ ಎಸ್.ಎಂ.ವೀರೇಶ್ ಹನಗವಾಡಿ, ಕಾಂಗ್ರೆಸ್ ಮುಖಂಡ ನಂದಿಗಾವಿ ಶ್ರೀನಿವಾಸ್, ಸಿ.ಎಸ್.ಹುಲಿಗೇಶ್, ಕಾರ್ಮಿಕ ಮುಖಂಡ ಎಚ್.ಕೆ.ಕೊಟ್ರಪ್ಪ ಮಾತನಾಡಿದರು.

ನಗರಸಭೆ ಉಪಾಧ್ಯಕ್ಷ ಜಂಬಣ್ಣ, ನಿವೃತ್ತ ಶಿಕ್ಷಕಿ ನಾಗಮಣಿ ಶಾಸ್ತ್ರಿ, ಟಿ.ಜೆ.ಮುರುಗೇಶಪ್ಪ, ಅಜಿತ್ ಸಾವಂತ್, ಎಂಜಿನಿಯರ್ ಶಿವಪ್ರಕಾಶ್ ಶಾಸ್ತ್ರಿ, ಪ್ರಕಾಶ್ ಕೋಳೂರು, ರಮೇಶ್ ನಾಯ್ಕ, ಅಮರಾವತಿ ರೇವಣಸಿದ್ದಪ್ಪ, ನಾರಾಯಣ ಜೋಯಿಸ್, ಅಂಬಾಸಾ ಹಂಸಾಗರ, ಮಾಲತೇಶ್ ಭಂಡಾರಿ, ಪರಶುರಾಮ ಕಾಟ್ವೆ, ಪ್ರಕಾಶ್ ಶ್ರೇಷ್ಠಿ, ಶ್ರೀನಿವಾಸ್ ಮೆರ್ವಾಡೆ, ರೆಡ್ಡಿ ಹನುಮಂತಪ್ಪ, ರಾಮಪ್ರಸಾದ ಕುಲಕರ್ಣಿ, ರೂಪಾ ಶಶಿಕಾಂತ್, ಸಾಕ್ಷಿ ಶಿಂದೆ, ರೂಪಾ ಕಾಟ್ವೆ, ಅಮಿತಾ, ಮಂಜುಳಾ ಅಗಡಿ ಹಾಗೂ ವಿವಿಧ ಸಮುದಾಯಗಳ ಪದಾಧಿಕಾರಿಗಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.