ಕಡರನಾಯ್ಕನಹಳ್ಳಿ: ‘ತತ್ವ, ಆದರ್ಶಗಳ ಪ್ರಸ್ತುತ ಗೌಣ ಎನ್ನುವ ಕಾಲದಲ್ಲಿ ಸಮಾಜಮುಖಿ ಕಾರ್ಯ ಕೈಗೊಳ್ಳುವುದು ಮಹತ್ವದ ಕಾರ್ಯ’ ಎಂದು ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಅಭಿಪ್ರಾಯಪಟ್ಟರು.

ಸಮೀಪದ ಹೊಳೆಸಿರಿಗೆರೆ ಗ್ರಾಮದಲ್ಲಿ ಭಾನುವಾರ ಎನ್.ಜಿ. ನಾಗನಗೌಡರ ಅಭಿಮಾನಿ ಬಳಗದಿಂದ ಹಮ್ಮಿಕೊಂಡಿದ್ದ ಹಿರಿಯ ಮುಖಂಡ ಎನ್.ಜಿ. ನಾಗನಗೌಡರ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.

‘ಸರ್ವ ಜನಾಂಗದ ಸಮಸ್ಯೆಗಳಿಗೆ ಸ್ಪಂದಿಸಿ, ಗ್ರಾಮವಲ್ಲದೇ ಸುತ್ತಲಿನ ಗ್ರಾಮಗಳಲ್ಲಿ ಸೌಹಾರ್ದ ಮೂಡಿಸಲು ಶ್ರಮಿಸಿದ ನಾಗನಗೌಡರ ಸೇವೆ ಮಾದರಿ’ ಎಂದರು.

ಹಾಗೂ " ಜನಮುಖಿ ಸೇವಾ ಸಖಿ" ಅಭಿನಂದನಾ ಗ್ರಂಥ ಬಿಡುಗಡೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.

‘ಜೀವನದುದ್ದಕ್ಕೂ ಪರರ ಹಿತಕ್ಕಾಗಿ ಶ್ರಮಿಸಿದ ನಾಗನಗೌಡರು, ಫಲಾಪೇಕ್ಷೆ ಬಯಸಲಿಲ್ಲ. ಹಲವಾರು ಪ್ರಶಸ್ತಿಗಳು ಬಂದರೂ ಸರಳ ಜೀವನದ ಮೂಲಕ ಆದರ್ಶಪ್ರಾಯರಾಗಿದ್ದಾರೆ’ ಎಂದು ಯಲವಟ್ಟಿಯ ಗುರು ಸಿದ್ದಾಶ್ರಮದ ಮಠದ ಯೋಗಾನಂದ ಸ್ವಾಮೀಜಿ ಹೇಳಿದರು.

‘ಆದರ್ಶ ವ್ಯಕ್ತಿಗಳನ್ನು ಗೌರವಿಸುವುದು ನಮ್ಮ ಕರ್ತವ್ಯ. ರಾಜಕೀಯ ಲಾಭ ಪಡೆಯುವಂತ ಅವಕಾಶ ಇದ್ದರೂ ಬಯಸದೆ ಸೌಹಾರ್ದದ ಸಂದೇಶ ಸಾರಿದ ನಾಗನಗೌಡರು ನಮಗೆ ಮಾದರಿ’ ಎಂದು ಎನ್.ಜಿ. ನಾಗನಗೌಡರ ಅಭಿಮಾನಿ ಬಳಗದ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ಪೂಜಾರ್ ಹೇಳಿದರು.

ಹರಪನಹಳ್ಳಿ ತೆಗ್ಗಿನಮಠ ಸಂಸ್ಥಾನದ ವರಸದ್ಯೋಜಾತ ಶ್ರೀ, ಹರಿಹರ ರಾಮಕೃಷ್ಣ ವಿವೇಕಾನಂದ ಆಶ್ರಮದ ಶಾರದೇಶಾನಂದ ಶ್ರೀ ಆಶೀರ್ವಚನ ನೀಡಿದರು.

‘ನನಗೆ ನಿಮ್ಮ ಪ್ರೀತಿ, ಗೌರವಗಳಿಂದ ಮನಸು ತುಂಬಿ ಬಂದಿದೆ’ ಎಂದು ನಾಗನಗೌಡ ಹೇಳಿದರು.

ಜಿ. ನಂದಿಗೌಡ ಅಧ್ಯಕ್ಷತೆ ವಹಿಸಿದ್ದರು.

‘ಜನಮುಖಿ ಸೇವಾಸಖಿ’ ಅಭಿನಂದನಾ ಗ್ರಂಥ ಬಿಡುಗಡೆ ಮಾಡಲಾಯಿತು.

ಹೊನ್ನಾಳಿ ಶಾಸಕ ಡಿ.ಜಿ. ಶಾಂತನಗೌಡ, ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ, ಮಾಜಿ ಶಾಸಕ ಎಸ್. ರಾಮಪ್ಪ, ಉದ್ಯಮಿ ಬಿ.ಸಿ. ಉಮಾಪತಿ, ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಬೂದಿಹಾಳ ಹಾಲೇಶಪ್ಪ, ಯಲವಟ್ಟಿ ಯೋಮಕೇಶ್ವರಪ್ಪ, ಮಂಜುನಾಥ್ ಪಾಟೀಲ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರಭು ಬಂಡೇರ, ಪ್ರಾಧ್ಯಾಪಕರಾದ ಸಿ.ವಿ. ಪಾಟೀಲ್, ಭಿಕ್ಷಾವರ್ತಿಮಠ್, ಜಿಗಳಿ ಪ್ರಕಾಶ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.