ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ: ನಕಲಿ ಬಂಗಾರದ ನಾಣ್ಯ ನೀಡಿ ₹ 5.10 ಲಕ್ಷ ವಂಚನೆ

Published 9 ಜೂನ್ 2023, 7:36 IST
Last Updated 9 ಜೂನ್ 2023, 7:36 IST
ಅಕ್ಷರ ಗಾತ್ರ

ದಾವಣಗೆರೆ: ವ್ಯಕ್ತಿಯೊಬ್ಬರಿಗೆ ನಕಲಿ ಬಂಗಾರದ ನಾಣ್ಯಗಳನ್ನು ನೀಡಿ ₹ 5.10 ಲಕ್ಷ ವಂಚಿಸಿದ ಸಂಬಂಧ ಸಂತೇಬೆನ್ನೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಉಡುಪಿ ಜಿಲ್ಲೆಯ ಪೇರ್ಡೂರು ಗ್ರಾಮದ ಸಂತೋಷ ಶೆಟ್ಟಿ ವಂಚನೆಗೆ ಒಳಗಾದವರು. ಅವರಿಗೆ ಫೋನ್‌ ಕರೆ ಮಾಡಿದ ವ್ಯಕ್ತಿಯೊಬ್ಬ, ಮನೆಯ ಅಡಿಪಾಯ ತೆಗೆಯುವಾಗ ಚಿನ್ನದ ಗಟ್ಟಿಗಳು ಸಿಕ್ಕಿದ್ದು, ಅವುಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡುವುದಾಗಿ ನಂಬಿಸಿ ಚನ್ನಗಿರಿ ತಾಲ್ಲೂಕಿನ ಸಿದ್ದನಮಠ ಗ್ರಾಮದ ಸಮೀಪದ ಮಾವಿನ ತೋಟಕ್ಕೆ ಬರಲು ತಿಳಿಸಿದ್ದ.

ಅವರು ಬಂದಾಗ ಎರಡು ಬಂಗಾರದ ನಾಣ್ಯಗಳನ್ನು ಕೊಟ್ಟು ನಂಬಿಸಿದ್ದ. ಅವರನ್ನು ಮತ್ತೆ ಸಿದ್ದನಮಠ ಕರೆಯಿಸಿಕೊಂಡು 200 ಗ್ರಾಂ ನಕಲಿ ಬಂಗಾರದ ನಾಣ್ಯ ನೀಡಿ  ₹ 5.10 ಲಕ್ಷ ಪಡೆದಿದ್ದ. ಅವರು ಮನೆಗೆ ಹೋಗಿ ನೋಡಿದಾಗ ನಕಲಿ ಚಿನ್ನದ ನಾಣ್ಯ ನೀಡಿರುವುದು ಗೊತ್ತಾಗಿದೆ.

ಈ ಸಂಬಂಧ ಸಂತೋಷ ಶೆಟ್ಟಿ ಸಂತೇಬೆನ್ನೂರು ಪೊಲೀಸ್‌ ಠಾಣೆಗೆ ದೂರು ನೀಡಿದ್ದು, ರಮೇಶ್ ಹಾಗೂ ಐದು ಜನರ ವಿರುದ್ಧ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT