ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ ಮಹಾನಗರ ಪಾಲಿಕೆ ಉಪ ಚುನಾವಣೆ: ಬಿಜೆಪಿ, ಕಾಂಗ್ರೆಸ್‌ ಸಮಬಲ

Last Updated 31 ಮಾರ್ಚ್ 2021, 4:44 IST
ಅಕ್ಷರ ಗಾತ್ರ

ದಾವಣಗೆರೆ: ಇಲ್ಲಿನ ಮಹಾನಗರ ಪಾಲಿಕೆಯ ಎರಡು ವಾರ್ಡ್‌ಗಳಿಗೆ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ತಲಾ ಒಂದು ಸ್ಥಾನ ಗೆದ್ದುಕೊಂಡಿವೆ. ಕಾಂಗ್ರೆಸ್ ಸದಸ್ಯರಿಬ್ಬರು ರಾಜೀನಾಮೆ ನೀಡಿದ್ದರಿಂದ ಎರಡು ವಾರ್ಡ್‌ಗಳು ತೆರವಾಗಿದ್ದವು.

ಕಾಂಗ್ರೆಸ್‌ನ ಭದ್ರಕೋಟೆಯಾಗಿದ್ದ ಯಲ್ಲಮ್ಮನಗರದಲ್ಲಿ (22ನೇ ವಾರ್ಡ್) ಬಿಜೆಪಿಯ ಶಿವಾನಂದ ಆರ್. 1844 ಮತ ಪಡೆದರೆ, ಕಾಂಗ್ರೆಸ್‍ನ ರವಿಸ್ವಾಮಿ ಎಸ್. 1374 ಮತಗಳನ್ನಷ್ಟೇ ಪಡೆದರು. ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಮಹಮ್ಮದ್ ಮುಜಾಹಿದ್ ಪಾಷ 978 ಮತ ಪಡೆಯುವ ಮೂಲಕ ಕಾಂಗ್ರೆಸ್‍ ಸೋಲಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ಬಿಜೆಪಿಯ ಶಿವಾನಂದ ಆರ್.
ಬಿಜೆಪಿಯ ಶಿವಾನಂದ ಆರ್.

ಭಾರತ್ ಕಾಲೊನಿಯಲ್ಲಿ (20ನೇ ವಾರ್ಡ್) ಕಾಂಗ್ರೆಸ್‌ನ ಮೀನಾಕ್ಷಿ ಎಂ. ಜಗದೀಶ್ 2392 ಮತ ಪಡೆದು ಜಯಶಾಲಿಯಾದರು. ಬಿಜೆಪಿಯ ರೇಣುಕಾ ಎಂ. 2024 ಮತ ಪಡೆದರು.

ಕಾಂಗ್ರೆಸ್‌ನ ಮೀನಾಕ್ಷಿ ಎಂ. ಜಗದೀಶ್
ಕಾಂಗ್ರೆಸ್‌ನ ಮೀನಾಕ್ಷಿ ಎಂ. ಜಗದೀಶ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT