ಬುಧವಾರ, 22 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ: ರೈತರಿಗೆ ₹60.23 ಕೋಟಿ ಪರಿಹಾರ ಪಾವತಿ

ಜಿಲ್ಲಾಧಿಕಾರಿ ಡಾ.ವೆಂಕಟೇಶ್ ಎಂ.ವಿ. ಮಾಹಿತಿ: ಜಗಳೂರು ತಾಲ್ಲೂಕಿಗೆ ಸಿಂಹಪಾಲು
Published 9 ಮೇ 2024, 14:34 IST
Last Updated 9 ಮೇ 2024, 14:34 IST
ಅಕ್ಷರ ಗಾತ್ರ

ದಾವಣಗೆರೆ: ‘2023ರ ಮುಂಗಾರು ಹಂಗಾಮಿನಲ್ಲಿ ತೀವ್ರ ಮಳೆ ಕೊರತೆಯಿಂದ ಬೆಳೆ ನಷ್ಟ ಉಂಟಾಗಿ ಸಂಕಷ್ಟಕ್ಕೆ ಸಿಲುಕಿದ್ದ ಜಿಲ್ಲೆಯ ಅರ್ಹ ರೈತರಿಗೆ ಈವರೆಗೆ ಒಟ್ಟು ₹60.23 ಕೋಟಿ ಪರಿಹಾರ ಪಾವತಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ಡಾ.ವೆಂಕಟೇಶ್‌ ಎಂ.ವಿ. ತಿಳಿಸಿದ್ದಾರೆ.

‘2023ರ ಮುಂಗಾರು ಹಂಗಾಮಿನಲ್ಲಿ ದಾವಣಗೆರೆ ಜಿಲ್ಲೆಯಲ್ಲಿ 1,50,621.7 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿ ಸಂಭವಿಸಿದ್ದಾಗಿ ಸರ್ಕಾರಕ್ಕೆ ವರದಿ ನೀಡಲಾಗಿತ್ತು. ಎಸ್‍ಡಿಆರ್‌ಎಫ್ ಹಾಗೂ ಎನ್‍ಡಿಆರ್‌ಎಫ್‌ ಮಾರ್ಗಸೂಚಿಯ ಅನ್ವಯ ಮೊದಲ ಕಂತಿನಲ್ಲಿ 82,928 ರೈತರ ಖಾತೆಗೆ ಗರಿಷ್ಠ ₹2,000 ದಂತೆ ₹15.88 ಕೋಟಿ ಪಾವತಿಸಲಾಗಿತ್ತು’ ಎಂದು ಹೇಳಿದ್ದಾರೆ.

‘ಮೇ 2ರಂದು ಸರ್ಕಾರ ಹೊರಡಿಸಿದ್ದ ಆದೇಶದ ಅನ್ವಯ ಜಿಲ್ಲೆಯ 69,575 ರೈತರ ಖಾತೆಗಳಿಗೆ ಎರಡನೇ ಕಂತಿನಲ್ಲಿ ₹44,35,31,000 ಮೊತ್ತವನ್ನು ನೇರವಾಗಿ ಪಾವತಿ ಮಾಡಲಾಗಿದೆ. ಒಟ್ಟಾರೆ ಜಿಲ್ಲೆಯಲ್ಲಿ ಈವರೆಗೆ ₹ 60,23,46,381 ಮೊತ್ತವನ್ನು ಬೆಳೆ ಹಾನಿ ಪರಿಹಾರವಾಗಿ ನೀಡಲಾಗಿದೆ’ ಎಂದು ಮಾಹಿತಿ ನೀಡಿದ್ದಾರೆ.

‘ಮೊದಲ ಕಂತಿನಲ್ಲಿ ಚನ್ನಗಿರಿ ತಾಲ್ಲೂಕಿನ 16,398 ರೈತರಿಗೆ ₹3,07,12,576, ದಾವಣಗೆರೆಯ 17,015 ರೈತರಿಗೆ ₹3,22,94,548, ಹೊನ್ನಾಳಿಯ 8,795 ರೈತರಿಗೆ ₹1,66,55,292, ಜಗಳೂರಿನ 27,263 ರೈತರಿಗೆ ₹5,36,64,034, ನ್ಯಾಮತಿಯ 9,189 ರೈತರಿಗೆ ₹1,74,61,001 ಹಾಗೂ ಹರಿಹರ ತಾಲ್ಲೂಕಿನ 4,268 ರೈತರಿಗೆ ₹80,27,929 ಗಳನ್ನು ಪಾವತಿಸಲಾಗಿದೆ’ ಎಂದು ತಿಳಿಸಿದರು.

‘ಬಾಕಿ ಇದ್ದ ಬೆಳೆ ಪರಿಹಾರದಲ್ಲಿ ಚನ್ನಗಿರಿಯ 12,758 ರೈತರಿಗೆ ₹6,50,30,311, ದಾವಣಗೆರೆಯ ₹13,914 ರೈತರಿಗೆ ₹8,34,19,466, ಹೊನ್ನಾಳಿಯ 7,177 ರೈತರಿಗೆ ₹3,87,43,550, ಜಗಳೂರಿನ 24,493 ರೈತರಿಗೆ ₹19,29,18,592, ನ್ಯಾಮತಿಯ 8,025 ರೈತರಿಗೆ ₹4,58,94,470 ಹಾಗೂ ಹರಿಹರ ತಾಲೂಕಿನ 3,208 ರೈತರಿಗೆ ₹1,75,24,611 ಮೊತ್ತವನ್ನು ಈಗ ಪಾವತಿ ಮಾಡಲಾಗಿದೆ’ ಎಂದು ವಿವರಿಸಿದರು.

ರೈತರಿಗೆ ಬೆಳೆ ಪರಿಹಾರದ ಕುರಿತ ಮಾಹಿತಿ ಮತ್ತು ಮಾರ್ಗದರ್ಶನ ನೀಡಲು ಎಲ್ಲಾ ತಾಲ್ಲೂಕುಗಳಲ್ಲಿ ಸಹಾಯವಾಣಿ ಸ್ಥಾಪಿಸಲಾಗಿದೆ. ಮಾಹಿತಿಗಾಗಿ ಬೆಳಿಗ್ಗೆ 10 ರಿಂದ ಸಂಜೆ 5.30ರವರೆಗೆ ಕರೆ ಮಾಡಬಹುದಾಗಿದೆ.

ಸಹಾಯವಾಣಿ ಸಂಖ್ಯೆಗಳು: ಚನ್ನಗಿರಿ (7892481962), ದಾವಣಗೆರೆ (9731254380), ಹೊನ್ನಾಳಿ (9686136015), ಜಗಳೂರು (8431977870), ನ್ಯಾಮತಿ (8073951245), ಹರಿಹರ (8618868370) ಸಂಪರ್ಕಿಸಬಹುದು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT