ದಾವಣಗೆರೆ: ನಗರ ಮಾತ್ರವಲ್ಲದೇ ಜಿಲ್ಲೆಯ ಹಲವೆಡೆ ನಾಯಿಗಳ ಹಾವಳಿ ಮಿತಿ ಮೀರಿದೆ. ಇವು ಚಿಣ್ಣರು, ವೃದ್ಧರು ಎನ್ನದೇ ಸಿಕ್ಕ ಸಿಕ್ಕವರ ಮೇಲೆ ಎರಗಿ ಗಾಯಗೊಳಿಸುತ್ತಿವೆ. ‘ಭಯಾನಕ’ ನಾಯಿಗಳ ದಾಳಿಯಿಂದಾಗಿ ನಾಗರಿಕರ ಪ್ರಾಣಕ್ಕೇ ಕುತ್ತು ಎದುರಾಗುತ್ತಿದೆ.

ನಾಯಿಗಳಿಂದಾಗಿ ರಸ್ತೆಗಳಲ್ಲಿ ಜನ ನಿರ್ಭೀತಿಯಿಂದ ಓಡಾಡುವುದೇ ಕಷ್ಟ ಎಂಬಂತಾಗಿದೆ. ವಾಹನಗಳನ್ನು ಬೆನ್ನಟ್ಟುವ ಬೀದಿ ನಾಯಿಗಳು ಹಲವು ಅಪಘಾತಗಳಿಗೂ ಎಡೆಮಾಡಿಕೊಡುತ್ತಿವೆ. ದ್ವಿಚಕ್ರ ವಾಹನ ಸವಾರರನ್ನು ಇನ್ನಿಲ್ಲದಂತೆ ಕಾಡುತ್ತಿವೆ. ದುರುಗುಟ್ಟುತ್ತಾ ಏಕಾಏಕಿ ದಾಳಿ ನಡೆಸುವ ನಾಯಿಗಳಿಂದಾಗಿ ಸವಾರರು ಬಿದ್ದು ಗಾಯಗೊಳ್ಳುತ್ತಿರುವ ಉದಾಹರಣೆಗಳೂ ಸಾಕಷ್ಟಿವೆ.

ಬೀದಿ ನಾಯಿಗಳ ಹಾವಳಿ ಜೊತೆಗೆ ಸಾಕು ನಾಯಿಗಳ ದಾಳಿಯೂ ನಗರದಲ್ಲಿ ಹೆಚ್ಚಾಗಿದೆ. ಸಂಜೆ ವೇಳೆ ರಸ್ತೆ ಹಾಗೂ ಬೀದಿಗಳಲ್ಲಿ ನಡೆದಾಡುವುದೇ ಕಷ್ಟಕರವಾಗಿದೆ. ಇವು ಕೂಡ ರಸ್ತೆಯಲ್ಲಿ ಸಂಚರಿಸುವವರ ಮೇಲೆ ಏಕಾಏಕಿ ದಾಳಿ ನಡೆಸುತ್ತಿವೆ.

4,273 ಜನರಿಗೆ ನಾಯಿ ಕಡಿತ:

2025ರ ಜನವರಿಯಿಂದ ಮೇ 25ರ ವರೆಗೆ ಜಿಲ್ಲೆಯಲ್ಲಿ ಒಟ್ಟು 4,273 ಜನರ ಮೇಲೆ ನಾಯಿಗಳು ದಾಳಿ ನಡೆಸಿದ್ದು, ಕಚ್ಚಿ ಗಾಯಗೊಳಿಸಿವೆ. ಗಾಯಾಳುಗಳು ಸಕಾಲಕ್ಕೆ ಸೂಕ್ತ ಚಿಕಿತ್ಸೆ ಪಡೆದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅತಿ ಹೆಚ್ಚು ನಾಯಿ ಕಡಿತ ಪ್ರಕರಣಗಳು ದಾಖಲಾದ ತಾಲ್ಲೂಕುಗಳಲ್ಲಿ ದಾವಣಗೆರೆ ಮೊದಲ ಸ್ಥಾನದಲ್ಲಿದೆ.

5 ತಿಂಗಳಲ್ಲಿ ದಾವಣಗೆರೆ ತಾಲ್ಲೂಕಿನಲ್ಲಿ 2,599 ಪ್ರಕರಣಗಳು ದಾಖಲಾಗಿವೆ. ಈ ಪೈಕಿ ನಗರದಲ್ಲೇ ಅತಿ ಹೆಚ್ಚಿನ ಜನರ ಮೇಲೆ ಶ್ವಾನಗಳು ದಾಳಿ ನಡೆಸಿವೆ. ಹರಿಹರ ತಾಲ್ಲೂಕಿನಲ್ಲಿ 707, ಚನ್ನಗಿರಿ ತಾಲ್ಲೂಕಿನಲ್ಲಿ 459, ಜಗಳೂರು ತಾಲ್ಲೂಕಿನಲ್ಲಿ 270, ಹೊನ್ನಾಳಿ ತಾಲ್ಲೂಕಿನಲ್ಲಿ 238 ಜನರ ಮೇಲೆ ನಾಯಿಗಳು ದಾಳಿ ನಡೆಸಿವೆ.

ನಾಯಿ ಕಡಿತ ಪ್ರಕರಣಗಳ ಮಾಹಿತಿಯನ್ನು ನಿತ್ಯವೂ ಆರೋಗ್ಯ ಇಲಾಖೆಯ ಐಎಚ್ಐಪಿ (ಇಂಟಿಗ್ರೇಟೆಡ್ ಹೆಲ್ತ್ ಇನ್ಫರ್ಮೇಷನ್ ಪ್ಲಾಟ್ಫಾರ್ಮ್) ಪೋರ್ಟಲ್ನಲ್ಲಿ ದಾಖಲಿಸಲಾಗುತ್ತಿದೆ. ಗಾಯಾಳುಗಳು ಹತ್ತಿರದ ಸರ್ಕಾರಿ ಅಥವಾ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಹೋದಾಗ ಅಲ್ಲಿನ ಸಿಬ್ಬಂದಿಯೇ ಈ ಪೋರ್ಟಲ್ನಲ್ಲಿ ಅವರ ಮಾಹಿತಿ ದಾಖಲಿಸುತ್ತಾರೆ.

‘ಬೀದಿ ನಾಯಿಗಳಿಂದಾಗಿ ರಸ್ತೆಗಳಲ್ಲಿ ಓಡಾಡುವುದೇ ಕಷ್ಟಕರವಾಗಿದೆ. ಪ್ರತೀ ವರ್ಷ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ನಡೆಸಲಾಗುತ್ತಿದೆ. ಆದರೂ, ನಾಯಿಗಳ ಸಂಖ್ಯೆ ಕಡಿಮೆಯಾಗಿಲ್ಲ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವ ಅವಶ್ಯಕತೆ ಇದೆ’ ಎಂದು ಮಹಾನಗರ ಪಾಲಿಕೆಯ ಬಜೆಟ್ ಸಭೆಯಲ್ಲಿ ಆಡಳಿತ ಹಾಗೂ ವಿರೋಧ ಪಕ್ಷದ ಸದಸ್ಯರು ಒಮ್ಮತದಿಂದ ಪ್ರತಿಪಾದಿಸಿದ್ದರು.

ನಗರದಲ್ಲಿ ಬೀದಿ ನಾಯಿಗಳ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆಗಾಗಿ ಮಹಾನಗರ ಪಾಲಿಕೆಯು ವಾರ್ಷಿಕ ₹ 50 ಲಕ್ಷ ಮೊತ್ತ ಮೀಸಲಿರಿಸುತ್ತಿದೆ. ಆದರೂ, ನಾಯಿಗಳ ಹಾವಳಿಗೆ ಕಡಿವಾಣ ಬಿದ್ದಿಲ್ಲ.

‘ರೇಬಿಸ್ ಶೇ 100ರಷ್ಟು ಮಾರಣಾಂತಿಕ’

ನಾಯಿ ಕಡಿತದಿಂದ ಉಂಟಾಗುವ ರೇಬಿಸ್ ಕಾಯಿಲೆಯು ಶೇ 100 ರಷ್ಟು ಮಾರಣಾಂತಿಕವಾಗಿದೆ. ಈ ಕಾರಣಕ್ಕಾಗಿ ಕೇಂದ್ರ ಆರೋಗ್ಯ ಇಲಾಖೆಯು 2022 ರಲ್ಲಿ ರೇಬಿಸ್ ಅನ್ನು ‘ಘೋಷಿಸಲಾಗುವ ಕಾಯಿಲೆ’ ಎಂದು ಕರೆದಿದೆ. ಹೀಗಾಗಿ ಎಲ್ಲ ಸರ್ಕಾರಿ ಅಥವಾ ಖಾಸಗಿ ಆಸ್ಪತ್ರೆಗಳು ತಮ್ಮಲ್ಲಿ ದೃಢಪಟ್ಟ ರೇಬಿಸ್ ಪ್ರಕರಣಗಳ ವರದಿಯನ್ನು ಜಿಲ್ಲಾ ಆರೋಗ್ಯ ಇಲಾಖೆಗೆ (ಸರ್ವೇಕ್ಷಣಾ ಘಟಕ) ನೀಡುವುದು ಕಡ್ಡಾಯವಾಗಿದೆ. ಹುಚ್ಚು ನಾಯಿ ಕಡಿತದಿಂದ ಸಕಾಲದಲ್ಲಿ ರೇಬಿಸ್ ನಿರೋಧಕ ಲಸಿಕೆ ತೆಗೆದುಕೊಳ್ಳದಿರುವುದರಿಂದ ರೇಬಿಸ್ ಕಾಯಿಲೆ ಬರುತ್ತದೆ. ಬೆಕ್ಕು ತೋಳ ನರಿಗಳಂತಹ ಪ್ರಾಣಿಗಳಿಂದಲೂ ರೇಬಿಸ್ ಬರಬಹುದು. ನಾಯಿಯು ಒಂದೇ ಕಡೆ ಇರುವುದು ಬಾಯಿಯಿಂದ ಜೊಲ್ಲು ಸ್ರವಿಸುತ್ತಿರುವುದು ಅಪ್ರಚೋದಿತವಾಗಿ ಮನುಷ್ಯರನ್ನು ಪ್ರಾಣಿಗಳನ್ನು ಕಚ್ಚುವುದು ಶಂಕಿತ ರೇಬಿಸ್ ನಾಯಿಯ ಮುಖ್ಯ ಲಕ್ಷಣಗಳಾಗಿವೆ.

‘ಉಚಿತ ಚಿಕಿತ್ಸೆ; ಅಲಕ್ಷ್ಯ ಬೇಡ’

ನಾಯಿ ಕಡಿದ ದಿನದಿಂದಲೇ ಸೂಕ್ತ ಚಿಕಿತ್ಸೆ ಪಡೆಯಬೇಕು. ಆರೋಗ್ಯ ಇಲಾಖೆ ನಾಟಿ ಔಷಧಿಯನ್ನು ಕಡ್ಡಾಯವಾಗಿ ನಿರ್ಬಂಧಿಸಿದೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳಿಂದ ಹಿಡಿದು ಜಿಲ್ಲಾ ಆಸ್ಪತ್ರೆವರೆಗೆ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲೂ ನಾಯಿ ಕಡಿತಕ್ಕೆ ಬೇಕಾದ ಲಸಿಕೆ ಮತ್ತು ತೀವ್ರತರದ ಕಚ್ಚಿದ ಗಾಯಗಳಿಗೆ ಅಗತ್ಯವಾದ ‘ರೇಬಿಸ್ ಇಮ್ಯುನೋ ಗ್ಲೋಬುಲಿನ್’ ಔಷಧಿಯು ಉಚಿತವಾಗಿ ಲಭ್ಯವಿದೆ. ನಾಯಿ ಕಚ್ಚಿದ ತಕ್ಷಣ ಗಾಯವನ್ನು ಚೆನ್ನಾಗಿ ನೀರು ಸಾಬೂನಿನಿಂದ ಸ್ವಚ್ಛಗೊಳಿಸಿ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ತೆರಳಿ ವೈದ್ಯರ ಸಲಹೆಯಂತೆ ಚಿಕಿತ್ಸೆ ಪಡೆಯಬೇಕು ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಜಿ.ಡಿ.ರಾಘವನ್ ಸಲಹೆ ನೀಡಿದರು.

ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆಗೆ ₹90 ಲಕ್ಷ

‘ಬೀದಿ ನಾಯಿಗಳ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ನಡೆಸಲು ಬೆಂಗಳೂರಿನ ಎಎಸ್ಆರ್ಎ (ಅಸ್ರಾ) ಏಜೆನ್ಸಿಗೆ ₹90 ಲಕ್ಷ ಮೊತ್ತಕ್ಕೆ ಗುತ್ತಿಗೆ ನೀಡಲಾಗಿದೆ. ಏಜೆನ್ಸಿಯ ಸಿಬ್ಬಂದಿ ಇದೇ ಜನವರಿಯಿಂದ ಕಾರ್ಯಾಚರಣೆ ಆರಂಭಿಸಿದ್ದಾರೆ. ನಗರದಲ್ಲಿನ 6000 ನಾಯಿಗಳ ಪೈಕಿ ಈಗಾಗಲೇ 2081 ನಾಯಿಗಳಿಗೆ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ನಡೆಸಲಾಗಿದೆ’ ಎಂದು ಪಾಲಿಕೆ ಆಯುಕ್ತೆ ಎಂ.ರೇಣುಕಾ ತಿಳಿಸಿದರು. ‘ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆಗೆ ಒಳಗಾದ ನಾಯಿಗಳ ಗುರುತಿಗಾಗಿ ಅವುಗಳ ಕಿವಿಯ ತುದಿಯ ಭಾಗವನ್ನು ಕತ್ತರಿಸಲಾಗುತ್ತಿದೆ. ನಾಯಿಗಳ ಹಾವಳಿ ತಡೆಗೆ ಪಾಲಿಕೆಯು ಅಗತ್ಯವಿರುವ ಎಲ್ಲ ಕ್ರಮಗಳನ್ನೂ ಕೈಗೊಳ್ಳುತ್ತಿದೆ. ನಾಯಿ ಕಡಿತಕ್ಕೆ ಒಳಗಾದ ಗಾಯಾಳುಗಳಿಗೆ ₹5000 ಪರಿಹಾರವನ್ನೂ ಪಾಲಿಕೆಯಿಂದ ನೀಡಲಾಗುತ್ತಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.