ದಾವಣಗೆರೆ: ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಗುಣಮಟ್ಟದ ವಸತಿಯುತ ಶಿಕ್ಷಣ ಒದಗಿಸುವ ಏಕಲವ್ಯ ಶಾಲೆಯ ಮಂಜೂರಾತಿ ಕೋರಿ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಗೆ ಜಿಲ್ಲಾಡಳಿತ ಪ್ರಸ್ತಾವ ಸಲ್ಲಿಸಿದೆ. ಇದು ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವಾಲಯಕ್ಕೆ ರವಾನೆಯಾಗಲಿದ್ದು, ಬಹುದಿನಗಳ ಬೇಡಿಕೆಗೆ ಸ್ಪಂದಿಸುವ ನಿರೀಕ್ಷೆ ಗರಿಗೆದರಿದೆ.

ಜಿಲ್ಲೆಯ ಜಗಳೂರು ತಾಲ್ಲೂಕಿನ ಮಾಗಡಿ ಗ್ರಾಮದಲ್ಲಿ ಏಕಲವ್ಯ ಮಾದರಿ ವಸತಿ ಶಾಲೆಗೆ 19 ಎಕರೆ 20 ಗುಂಟೆ ಜಾಗ ಮೀಸಲಿಡಲಾಗಿದೆ. ಒಂದೂವರೆ ವರ್ಷದ ಹಿಂದಿನ ಕೋರಿಕೆಯನ್ನು ಪರಿಷ್ಕರಿಸಿ ಮೀಸಲಿಟ್ಟ ಭೂಮಿಯ ಸಹಿತ ಪ್ರಸ್ತಾವ ಕಳುಹಿಸಿಕೊಡಲಾಗಿದೆ.

ಪರಿಶಿಷ್ಟ ಪಂಗಡದ ಜನಸಂಖ್ಯೆ ಹೆಚ್ಚಿರುವ ಜಗಳೂರು ತಾಲ್ಲೂಕಿಗೆ ಏಕಲವ್ಯ ವಸತಿ ಶಾಲೆ ಸ್ಥಾಪಿಸುವ ಕೋರಿಕೆ ಹಲವು ವರ್ಷಗಳಿಂದ ಇದೆ. 2019ರ ಲೋಕಸಭಾ ಚುನಾವಣೆಯಿಂದ ಶಾಲೆಯ ವಿಚಾರ ಚರ್ಚೆಯ ಮುನ್ನೆಲೆಗೆ ಬಂದಿದೆ. ಭೂಮಿ ಮಂಜೂರಾತಿ ಪ್ರಕ್ರಿಯೆಯಲ್ಲಿ ಎದುರಾದ ತೊಡಕುಗಳಿಂದ ಹಲವು ದಿನಗಳಿಂದ ಇದು ನನೆಗುದಿಗೆ ಬಿದ್ದಿತ್ತು.

ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವಾಲಯ ಏಕಲವ್ಯ ಮಾದರಿ ವಸತಿ ಶಾಲೆ ಯೋಜನೆ ರೂಪಿಸಿದೆ. ರಾಜ್ಯ ಸರ್ಕಾರ ಭೂಮಿ ಒದಗಿಸಿದರೆ ಕೇಂದ್ರ ಸರ್ಕಾರ ಶಾಲೆಯನ್ನು ಮಂಜೂರು ಮಾಡುತ್ತದೆ. ಜವಾಹರ ನವೋದಯ ವಿದ್ಯಾಲಯದ ಮಾದರಿಯಲ್ಲಿರುವ ಈ ಶಾಲೆಯಲ್ಲಿ 6ರಿಂದ 12ನೇ ತರಗತಿಯವರೆಗೆ ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿ (ಸಿಬಿಎಸ್ಇ) ಪಠ್ಯಕ್ರಮದ ಉಚಿತ ಶಿಕ್ಷಣ ನೀಡಲಾಗುತ್ತದೆ.

ಚಿತ್ರದುರ್ಗ, ಚಾಮರಾಜನಗರ, ಮೈಸೂರು ಸೇರಿದಂತೆ ರಾಜ್ಯದ 14 ಜಿಲ್ಲೆಗಳಲ್ಲಿ ಏಕಲವ್ಯ ವಸತಿಯುತ ಮಾದರಿ ಶಾಲೆಗಳಿವೆ. ಮೂಲ ಬುಡಕಟ್ಟು ಸಮುದಾಯ ಹೆಚ್ಚಿರುವ ಪ್ರದೇಶದಲ್ಲಿ ಈ ಶಾಲೆ ಸ್ಥಾಪನೆಗೆ ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವಾಲಯ ಒಲವು ತೋರುತ್ತದೆ.

‘ಅರಣ್ಯಾಧಾರಿತ ಕಸುಬು ಹೊಂದಿರುವ ಬುಡಕಟ್ಟು ಸಮುದಾಯದ ಸಂಖ್ಯೆ ಜಿಲ್ಲೆಯಲ್ಲಿ ಕಡಿಮೆ ಇದ್ದರೂ ಶೈಕ್ಷಣಿಕವಾಗಿ ಜಗಳೂರು ತಾಲ್ಲೂಕು ಹಿಂದುಳಿದಿದೆ. ಕೊಂಡುಕುರಿ ಅರಣ್ಯದಂಚಿನ ಹಳ್ಳಿಗಳಲ್ಲಿ ಪರಿಶಿಷ್ಟ ಪಂಗಡದ ಜನರ ಜೀವನಮಟ್ಟ ಸುಧಾರಣೆಗೆ ವಸತಿ ಶಾಲೆ ನೆರವಾಗಲಿದೆ’ ಎಂಬುದನ್ನು ಪ್ರಸ್ತಾವದಲ್ಲಿ ಉಲ್ಲೇಖಿಸಲಾಗಿದೆ.

ಮಂಜೂರಾದ ಏಕಲವ್ಯ ವಸತಿ ಶಾಲೆಗೆ ಶಿಕ್ಷಕರು ಹಾಗೂ ಸಿಬ್ಬಂದಿಯನ್ನು ಕೇಂದ್ರ ಸರ್ಕಾರ ನಿಯೋಜಿಸುತ್ತದೆ. 5ನೇ ತರಗತಿಯ ವಿದ್ಯಾರ್ಥಿಗಳಿಂದ ಪ್ರವೇಶ ಪರೀಕ್ಷೆ ನಡೆಸಿ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಈ ಹೊಣೆಯನ್ನು ಕರ್ನಾಟಕ ಪರಿಶಿಷ್ಟ ಪಂಗಡಗಳ ವಸತಿ ಶಾಲಾ ಶಿಕ್ಷಣ ಸಂಸ್ಥೆಗಳ ಸಂಘ ನಿರ್ವಹಿಸುತ್ತಿದೆ. ಶಾಲಾ ಸಂಕೀರ್ಣ, ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಬೋಧಕೇತರ ಸಿಬ್ಬಂದಿಗೆ ವಸತಿ, ಆಟದ ಮೈದಾನ ಇರುತ್ತದೆ.

‘ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವಾಲಯದ ‘ಧರ್ತಿ ಆಭಾ ಜನಜಾತೀಯ ಗ್ರಾಮ ಉತ್ಕರ್ಷ ಅಭಿಯಾನ’ದಡಿ ಜಿಲ್ಲೆಯ 44 ಗ್ರಾಮಗಳು ಆಯ್ಕೆಯಾಗಿವೆ. ಇದರಲ್ಲಿ 24 ಗ್ರಾಮಗಳು ಜಗಳೂರು ತಾಲ್ಲೂಕಿನಲ್ಲಿಯೇ ಇವೆ. ಪರಿಶಿಷ್ಟ ಪಂಗಡಗಳ ಜನಸಂಖ್ಯೆ ಹೆಚ್ಚಿರುವ ಈ ಹಳ್ಳಿಗಳಲ್ಲಿ ವಿಶೇಷ ಗ್ರಾಮ ಸಭೆಗಳನ್ನು ನಡೆಸಿ ಜನರ ಅಹವಾಲು ಆಲಿಸಲಾಗಿದೆ. ಶಿಕ್ಷಣಕ್ಕೆ ಒತ್ತು ನೀಡುವಂತೆ ಜನರಿಂದ ಕೋರಿಕೆಗಳು ಬಂದಿವೆ. ಈ ಯೋಜನೆಯಡಿಯೂ ಏಕಲವ್ಯ ವಸತಿ ಶಾಲೆಗೆ ಮತ್ತೊಂದು ಪ್ರಸ್ತಾವ ಸಲ್ಲಿಸಲಾಗುವುದು’ ಎಂದು ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ನವೀನ್ ಮಠದ ತಿಳಿಸಿದರು.

ಅಗತ್ಯ ಭೂಮಿಯನ್ನು ಒದಗಿಸಿ ಏಕಲವ್ಯ ವಸತಿ ಶಾಲೆಗೆ ಪ್ರಸ್ತಾವ ಸಲ್ಲಿಸಲಾಗಿದೆ. ಮಂಜೂರಾತಿಗೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಶ್ರಮಿಸುತ್ತಿದ್ದಾರೆ
ಜಿ.ಎಂ. ಗಂಗಾಧರಸ್ವಾಮಿ ಜಿಲ್ಲಾಧಿಕಾರಿ

ಮಧ್ಯ ಕರ್ನಾಟಕ್ಕೆ ಬೇಕಿದೆ ಸೈನಿಕ ಶಾಲೆ

ದೇಶ ರಕ್ಷಣೆಗೆ ಅಗತ್ಯವಿರುವ ಜ್ಞಾನದೊಂದಿಗೆ ಶಿಕ್ಷಣವನ್ನೂ ನೀಡುವ ಸೈನಿಕ ಶಾಲೆ ಮಧ್ಯ ಕರ್ನಾಟಕಕ್ಕೆ ಬೇಕಿದೆ. ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಮಾಜಿ ಸೈನಿಕರು ಸೇರಿದಂತೆ ಸಾರ್ವಜನಿಕರು ಈ ಬೇಡಿಕೆಯನ್ನು ಮುಂದಿಡುತ್ತಿದ್ದಾರೆ. ರಕ್ಷಣಾ ಇಲಾಖೆಯ ಅಧೀನದಲ್ಲಿರುವ ಸೈನಿಕ ಶಾಲೆಗಳು ವಿಜಯಪುರ ಕೊಡಗು ಜಿಲ್ಲೆಯಲ್ಲಿವೆ. 6ರಿಂದ 12ನೇ ತರಗತಿಯವರೆಗೆ ವಸತಿಯುತ ಶಿಕ್ಷಣ ನೀಡುವ ಈ ಶಾಲೆಯ ಪ್ರವೇಶಕ್ಕೆ ಸಾಕಷ್ಟು ಪೈಪೋಟಿ ಇದೆ. ‘ಸೇನೆ ಸೇರಲು ಬೇಕಾಗುವ ಶಿಕ್ಷಣ ಈ ಶಾಲೆಗಳಲ್ಲಿ ದೊರೆಯುತ್ತದೆ. ಈ ಶಾಲೆಗೆ ಮಕ್ಕಳನ್ನು ಸೇರಿಸುವ ಆಸಕ್ತಿ ಪಾಲಕರಲ್ಲಿದೆ. ದೂರದ ಊರುಗಳಿಗೆ ಮಕ್ಕಳನ್ನು ಕಳುಹಿಸಿಕೊಡಲು ಸಾಧ್ಯವಾಗದೇ ಹಿಂದೇಟು ಹಾಕುತ್ತಿದ್ದಾರೆ. ದಾವಣಗೆರೆಯಲ್ಲಿ ಸೈನಿಕ ಶಾಲೆ ಸ್ಥಾಪಿಸಿದರೆ ಹಲವು ಜಿಲ್ಲೆಯ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ’ ಎಂದು ಮಾಜಿ ಸೈನಿಕ ವಿ.ಸಂತೋಷಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.