ದಾವಣಗೆರೆ: ಸರಕು ಸಾಗಣೆ ವಾಹನಗಳಿಗೆ ಜಿಲ್ಲೆಯಲ್ಲಿ ‘ಟ್ರಕ್ ಟರ್ಮಿನಲ್’ ನಿರ್ಮಿಸುವ ಪ್ರಯತ್ನ ಕೈಗೂಡುವಂತೆ ಕಾಣುತ್ತಿಲ್ಲ. ಸರ್ಕಾರಿ ಭೂಮಿ ಲಭ್ಯವಾಗದೇ ಟರ್ಮಿನಲ್ ಕನಸು ನನಸಾಗುವ ಕಾಲ ಕೂಡಿಬರುತ್ತಿಲ್ಲ. ಇದರಿಂದ ಲಾರಿ ಚಾಲಕರು, ಸಹಾಯಕರ ಬವಣೆ ಅಂತ್ಯವಾಗುತ್ತಿಲ್ಲ.

ಜಿಲ್ಲಾಡಳಿತವು ಅಗತ್ಯ ಭೂಮಿ ಒದಗಿಸಿದರೆ ದೇವರಾಜ ಅರಸು ಟ್ರಕ್ ಟರ್ಮಿನಲ್ ಸಂಸ್ಥೆ ‘ಟರ್ಮಿನಲ್’ ನಿರ್ಮಿಸಲು ಸಿದ್ಧವಿದೆ. ಇದಕ್ಕೆ ಸರ್ಕಾರಿ ಭೂಮಿಯನ್ನು ನೀಡುವಂತೆ ಲಾರಿ ಮಾಲೀಕರು ಒಂದೂವರೆ ದಶಕದಿಂದ ಹೋರಾಟ ನಡೆಸುತ್ತಿದ್ದಾರೆ. ಸ್ಥಳ ಹುಡುಕಾಟ ತಾರ್ಕಿಕ ಅಂತ್ಯ ಕಾಣದೇ ‘ಟ್ರಕ್ ಟರ್ಮಿನಲ್’ ನಿರ್ಮಾಣ ಕನಸಾಗಿಯೇ ಉಳಿದಿದೆ.

ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಯಲ್ಲಿನ ಅಪಘಾತ ನಿಯಂತ್ರಣಕ್ಕೆ ಟ್ರಕ್ ಟರ್ಮಿನಲ್ ಅಗತ್ಯ. ದಾವಣಗೆರೆ ಮತ್ತು ಹರಿಹರ ನಗರದ ಸಂಚಾರ ದಟ್ಟಣೆ ನಿಯಂತ್ರಣಕ್ಕೂ ಸಹಕಾರಿ. ನಿರಂತರವಾಗಿ ರಸ್ತೆಯ ಮೇಲೆ ಸಂಚರಿಸುವ ಲಾರಿಯ ಚಾಲಕರು, ಸಹಾಯಕರು ವಿಶ್ರಾಂತಿಗೆ ಸ್ಥಳವೊಂದು ನಿಗದಿಯಾಗುತ್ತದೆ. ಲಾರಿಗಳನ್ನು ನಿಲುಗಡೆ ಮಾಡಲು, ಶುಚಿಗೊಳಿಸಲು ಹಾಗೂ ರಿಪೇರಿ ಮಾಡಿಸಲು ಇಲ್ಲಿ ಅವಕಾಶವಿರುತ್ತದೆ. ಟ್ರಕ್ ಟರ್ಮಿನಲ್ ನಿರ್ಮಾಣವಾಗದೇ ಲಾರಿಗಳು ಎಲ್ಲೆಂದರಲ್ಲಿ ನಿಲ್ಲುತ್ತಿವೆ.

ಮಧ್ಯ ಕರ್ನಾಟಕದ ದಾವಣಗೆರೆಯಲ್ಲಿ ವಾಣಿಜ್ಯ ಚಟುವಟಿಕೆ ಹೆಚ್ಚು. ರಾಷ್ಟ್ರೀಯ ಹೆದ್ದಾರಿ 48 ಹಾಗೂ ರೈಲ್ವೆ ಮಾರ್ಗ ನಗರದಲ್ಲಿ ಹಾದು ಹೋಗಿವೆ. ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಆವರಣದಲ್ಲಿ ದೊಡ್ಡ ಮಟ್ಟದ ವಹಿವಾಟು ನಡೆಯುತ್ತದೆ. ಭತ್ತ, ಮೆಕ್ಕೆಜೋಳ, ಈರುಳ್ಳಿ ಸೇರಿದಂತೆ ಹಲವು ಕೃಷಿ ಉತ್ಪನ್ನಗಳು ದೇಶದ ವಿವಿಧೆಡೆಗೆ ಸರಬರಾಜು ಆಗುತ್ತವೆ. ರೈಲ್ವೆ ಗೂಡ್ಸ್ಶೆಡ್ಗೆ ಅಪಾರ ಪ್ರಮಾಣದ ಸರಕು ಬರುತ್ತದೆ. ಜಿಲ್ಲೆಯಲ್ಲಿ 2,000ಕ್ಕೂ ಅಧಿಕ ಲಾರಿಗಳಿವೆ.

ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುವ ಸರಕು ಸಾಗಣೆ ವಾಹನಗಳನ್ನು ಎಲ್ಲೆಂದರಲ್ಲಿ ನಿಲುಗಡೆ ಮಾಡಲಾಗುತ್ತಿದೆ. ಹೆದ್ದಾರಿ ಬದಿಯಲ್ಲಿ ನಿಲುಗಡೆ ಮಾಡುವ ಲಾರಿಗಳಿಗೆ ಇತರ ವಾಹನಗಳು ಡಿಕ್ಕಿ ಹೊಡೆದು ಅಪಘಾತಗಳು ಸಂಭವಿಸುತ್ತಿವೆ. ನಗರದ ಹೊರಭಾಗದ ಬಯಲು, ಡಾಬಾ, ಖಾಲಿ ಸ್ಥಳಗಳಲ್ಲಿ ಲಾರಿಗಳನ್ನು ನಿಲುಗಡೆ ಮಾಡಲಾಗುತ್ತಿದೆ. ಹೀಗೆ ನಿಲುಗಡೆ ಮಾಡಿದ ಲಾರಿಗಳ ಡೀಸೆಲ್, ಟೈರುಗಳು ಕಳವಾಗುತ್ತಿವೆ.

‘ದಶಕಗಳ ಹಿಂದೆ ಖಾಸಗಿ ಬಸ್ ನಿಲ್ದಾಣದ ಸಮೀಪದಲ್ಲಿ ಲಾರಿ ನಿಲುಗಡೆ ಮಾಡುತ್ತಿದ್ದೆವು. ಪೊಲೀಸರ ಸೂಚನೆಯ ಬಳಿಕ ಅಶೋಕ ಚಿತ್ರಮಂದಿರದ ಬಳಿಗೆ ಸ್ಥಳಾಂತರಗೊಂಡೆವು. ಆ ನಂತರ ಲಿಂಗೇಶ್ವರ ದೇಗುಲ, ಪದ್ಮಾಂಜಲಿ ಚಿತ್ರಮಂದಿರ ಹಾಗೂ ಈರುಳ್ಳಿ ಮಾರುಕಟ್ಟೆ ಸಮೀಪ ಲಾರಿ ನಿಲುಗಡೆ ಮಾಡಲಾಗುತ್ತಿತ್ತು. ಸೂಕ್ತ ಸ್ಥಳ ಗುರುತಿಸದೇ ಇರುವುದರಿಂದ ಜಿಎಂಐಟಿ ಸಮೀಪ ಭೂಮಿಯನ್ನು ಬಾಡಿಗೆ ಪಡೆದು ಲಾರಿ ನಿಲುಗಡೆ ಮಾಡುತ್ತಿದ್ದೇವೆ’ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಸಯ್ಯದ್ ಸೈಫುಲ್ಲಾ.

ಟ್ರಕ್ ಟರ್ಮಿನಲ್ ನಿರ್ಮಾಣಕ್ಕೆ ಹಲವೆಡೆ ಭೂಮಿ ಪರಿಶೀಲನೆ ಮಾಡಲಾಗಿದೆ. ಸೂಕ್ತ ಮತ್ತು ಅಗತ್ಯ ಭೂಮಿ ಲಭ್ಯವಾಗುತ್ತಿಲ್ಲ. ಸ್ಥಳ ಹುಡುಕಾಟದ ಪ್ರಯತ್ನ ನಿರಂತರವಾಗಿ ನಡೆಯುತ್ತಿದೆ
ಜಿ.ಎಂ. ಗಂಗಾಧರಸ್ವಾಮಿ ಜಿಲ್ಲಾಧಿಕಾರಿ

ಟ್ರಕ್ ಟರ್ಮಿನಲ್ಗೆ 15 ವರ್ಷಗಳಿಂದ ಹೋರಾಟ ನಡೆಸುತ್ತಿದ್ದೇವೆ. ಟರ್ಮಿನಲ್ ಇಲ್ಲದಿರುವುದರಿಂದ ಲಾರಿಗಳನ್ನು ಎಲ್ಲೆಂದರಲ್ಲಿ ನಿಲುಗಡೆ ಮಾಡುತ್ತಿದ್ದೇವೆ. ಚಾಲಕರು ಮಾಲೀಕರ ಕೂಗನ್ನು ಸರ್ಕಾರ ಆಲಿಸುತ್ತಿಲ್ಲ
ಸೈಯದ್ ಸೈಫುಲ್ಲಾ ಅಧ್ಯಕ್ಷ ಜಿಲ್ಲಾ ಲಾರಿ ಮಾಲೀಕರ ಸಂಘ

ಬಾತಿ ಗುಡ್ಡದತ್ತ ಒಲವು

ಟ್ರಕ್ ಟರ್ಮಿನಲ್ಗೆ ಕನಿಷ್ಠ 10ರಿಂದ 12 ಎಕರೆ ಭೂಮಿಯ ಅಗತ್ಯವಿದೆ. 20 ಎಕರೆ ಭೂಮಿ ಲಭ್ಯವಾದರೆ ಸುಸಜ್ಜಿತ ಟರ್ಮಿನಲ್ ನಿರ್ಮಾಣ ಸಾಧ್ಯವಿದೆ. ರಾಷ್ಟ್ರೀಯ ಹೆದ್ದಾರಿಯನ್ನು ಸುಲಭದಲ್ಲಿ ಸಂಪರ್ಕಿಸುವ ಸ್ಥಳವನ್ನು ಒದಗಿಸಿದರೆ ದೇವರಾಜ ಅರಸು ಟ್ರಕ್ ಟರ್ಮಿನಲ್ ಸಂಸ್ಥೆ ವತಿಯಿಂದ ಟರ್ಮಿನಲ್ ಅಭಿವೃದ್ಧಿಪಡಿಸಲಾಗುತ್ತದೆ. ಸಂಸ್ಥೆಯ ಮಾನದಂಡಕ್ಕೆ ಅನುಗುಣವಾದ ಭೂಮಿಗೆ ಜಿಲ್ಲಾಡಳಿತ ಹುಡುಕಾಟ ನಡೆಸಿದೆ. ದಾವಣಗೆರೆ ಹೊರವಲಯದ ಬಾಡಾ ಕ್ರಾಸ್ ಸಮೀಪ ಸರ್ಕಾರಿ ಭೂಮಿಯನ್ನು ಪರಿಶೀಲಿಸಿದೆ. ಹೊನ್ನೂರು ಗೊಲ್ಲರಹಟ್ಟಿ ಸಮೀಪದ ಸರ್ಕಾರಿ ಭೂಮಿಗೆ ಲಾರಿ ಮಾಲೀಕರು ಸಹಮತ ವ್ಯಕ್ತಪಡಿಸಿಲ್ಲ. ಬಾತಿ ಟ್ರಕ್ ಟರ್ಮಿನಲ್ ಇಲ್ಲದಿರುವುದರಿಂದ ಲಾರಿಗಳನ್ನು ಚಾಲಕರು ಎಲ್ಲೆಂದರಲ್ಲಿ ನಿಲುಗಡೆ ಮಾಡುತ್ತಿದ್ದಾರೆ. ಹೀಗೆ ನಿಲುಗಡೆ ಮಾಡಿದ ಲಾರಿಯ ಬ್ಯಾಟರಿ ಟಾರ್ಪಲ್ ಹಾಗೂ ಸರಕನ್ನು ಕಳವು ಮಾಡಲಾಗುತ್ತಿದೆ. ಲಾರಿಗಳನ್ನು ಕಳ್ಳರಿಂದ ರಕ್ಷಿಸಿಕೊಳ್ಳಲು ಚಾಲಕರು ಮತ್ತು ಮಾಲೀಕರು ಕಷ್ಟಪಡುತ್ತಿದ್ದಾರೆ. ‘ಅ.1ರಿಂದ 4ರವರೆಗೆ ನಗರ ವ್ಯಾಪ್ತಿಯಲ್ಲಿ 15 ಲಾರಿಗಳ ಬ್ಯಾಟರಿಗಳನ್ನು ಕಳವು ಮಾಡಲಾಗಿದೆ. ಬ್ಯಾಟರಿಗೆ ₹ 22000 ಬೆಲೆ ಇದೆ. ನಿರ್ಜನ ಪ್ರದೇಶದಲ್ಲಿರುವ ಲಾರಿಗಳನ್ನು ಗುರಿಯಾಗಿಸಿ ಕೃತ್ಯ ಎಸಗಲಾಗುತ್ತಿದೆ. ಉತ್ಸವ ಹಬ್ಬಗಳ ಸಂದರ್ಭದಲ್ಲಿ ಟಾರ್ಪಲ್ಗಳನ್ನು ಕಳವು ಮಾಡಲಾಗುತ್ತಿದೆ’ ಎಂದು ಅಳಲು ತೋಡಿಕೊಳ್ಳುತ್ತಾರೆ ಜಿಲ್ಲಾ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಸೈಯದ್ ಸೈಫುಲ್ಲಾ.ಗುಡ್ಡದ ಸಮೀಪ ಸ್ಥಳ ಗುರುತಿಸಿದರೆ ಅನುಕೂಲ ಎಂಬುದು ಲಾರಿ ಮಾಲೀಕರ ಕೋರಿಕೆ.

ಎಫ್ಐಆರ್ಗೆ ಪೊಲೀಸರ ಹಿಂದೇಟು

ಲಾರಿಗಳಿಂದ ಕಳವಾಗುವ ಸರಕಿನ ಕುರಿತು ಎಫ್ಐಆರ್ ದಾಖಲಿಸಲು ಪೊಲೀಸರು ಹಿಂದೇಟು ಹಾಕುತ್ತಿದ್ದಾರೆ. ಇದರಿಂದ ಕಳವಾದ ಸರಕಿನ ವಿಮೆ ಪಡೆಯಲು ಸಾಧ್ಯವಾಗದೇ ಲಾರಿ ಮಾಲೀಕರು ಪರದಾಡುತ್ತಿದ್ದಾರೆ. ಸರಕು ತುಂಬಿದ ಲಾರಿಯೊಂದರಲ್ಲಿ ಇಬ್ಬರು ಚಾಲಕರು ಇರಬೇಕು ಎಂಬುದು ಸರ್ಕಾರದ ಸೂಚನೆ. ಚಾಲಕರು ಹಾಗೂ ಸಹಾಯಕರ ಕೊರತೆಯಿಂದಾಗಿ ಇದು ಸಾಧ್ಯವಾಗುತ್ತಿಲ್ಲ. ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುವ ಲಾರಿಗಳನ್ನು ಚಾಲಕರು ವಿಶ್ರಾಂತಿಗೆ ಅಲ್ಲಲ್ಲಿ ನಿಲುಗಡೆ ಮಾಡುತ್ತಾರೆ. ಇದನ್ನೇ ಹೊಂಚು ಹಾಕಿ ಕಾಯುವ ಕಳ್ಳರು ಲಾರಿಯ ಸರಕು ಕಳವು ಮಾಡುತ್ತಿದ್ದಾರೆ. ‘ಲಾರಿಯಲ್ಲಿ ತುಂಬಿದ ಸರಕಿಗೆ ವಿಮೆ ಇರುತ್ತದೆ. ಕಳವು ಅಪಘಾತ ಸಂಭವಿಸಿದಾಗ ಈ ವಿಮೆಯನ್ನು ಪಡೆಯಲು ಅವಕಾಶವಿದೆ. ಇದಕ್ಕೆ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಬೇಕು. ಆದರೆ ಪೊಲೀಸರು ಎಫ್ಐಆರ್ ದಾಖಲಿಸಲು ಸಾಕಷ್ಟು ಸತಾಯಿಸುತ್ತಾರೆ’ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಲಾರಿ ಚಾಲಕ ಮಹದೇವಸ್ವಾಮಿ.

ಟ್ರಕ್ ಟರ್ಮಿನಲ್ ಇಲ್ಲದಿರುವುದರಿಂದ ಲಾರಿಗಳನ್ನು ಚಾಲಕರು ಎಲ್ಲೆಂದರಲ್ಲಿ ನಿಲುಗಡೆ ಮಾಡುತ್ತಿದ್ದಾರೆ. ಹೀಗೆ ನಿಲುಗಡೆ ಮಾಡಿದ ಲಾರಿಯ ಬ್ಯಾಟರಿ ಟಾರ್ಪಲ್ ಹಾಗೂ ಸರಕನ್ನು ಕಳವು ಮಾಡಲಾಗುತ್ತಿದೆ. ಲಾರಿಗಳನ್ನು ಕಳ್ಳರಿಂದ ರಕ್ಷಿಸಿಕೊಳ್ಳಲು ಚಾಲಕರು ಮತ್ತು ಮಾಲೀಕರು ಕಷ್ಟಪಡುತ್ತಿದ್ದಾರೆ. ‘ಅ.1ರಿಂದ 4ರವರೆಗೆ ನಗರ ವ್ಯಾಪ್ತಿಯಲ್ಲಿ 15 ಲಾರಿಗಳ ಬ್ಯಾಟರಿಗಳನ್ನು ಕಳವು ಮಾಡಲಾಗಿದೆ. ಬ್ಯಾಟರಿಗೆ ₹ 22000 ಬೆಲೆ ಇದೆ. ನಿರ್ಜನ ಪ್ರದೇಶದಲ್ಲಿರುವ ಲಾರಿಗಳನ್ನು ಗುರಿಯಾಗಿಸಿ ಕೃತ್ಯ ಎಸಗಲಾಗುತ್ತಿದೆ. ಉತ್ಸವ ಹಬ್ಬಗಳ ಸಂದರ್ಭದಲ್ಲಿ ಟಾರ್ಪಲ್ಗಳನ್ನು ಕಳವು ಮಾಡಲಾಗುತ್ತಿದೆ’ ಎಂದು ಅಳಲು ತೋಡಿಕೊಳ್ಳುತ್ತಾರೆ ಜಿಲ್ಲಾ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಸೈಯದ್ ಸೈಫುಲ್ಲಾ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.