ಶನಿವಾರ, 7 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಾಸ್ವೆಹಳ್ಳಿ | ರಸ್ತೆ ದುರಸ್ತಿಗೆ ಆಗ್ರಹ: ನಾಟಿ ಮಾಡಿ ಪ್ರತಿಭಟನೆ

Published 3 ಆಗಸ್ಟ್ 2024, 14:10 IST
Last Updated 3 ಆಗಸ್ಟ್ 2024, 14:10 IST
ಅಕ್ಷರ ಗಾತ್ರ

ಸಾಸ್ವೆಹಳ್ಳಿ: ಸಮೀಪದ ಕಮ್ಮಾರಗಟ್ಟೆಯಲ್ಲಿ ಹೆಳವನಕಟ್ಟೆ ಗಿರಿಯಮ್ಮ ಐಕ್ಯಸ್ಥಳ ಮಾರ್ಗದ ರಸ್ತೆ ಹಾಳಾಗಿದೆ. ಇದನ್ನು ಆದಷ್ಟು ಬೇಗ ಸರಿಪಡಿಸಬೇಕು ಎಂದು ಆಗ್ರಹಿಸಿದ ಗ್ರಾಮಸ್ಥರು, ರಸ್ತೆಯಲ್ಲಿ ನಾಟಿ ಮಾಡುವ ಮೂಲಕ ಶನಿವಾರ ಪ್ರತಿಭಟನೆ ಮಾಡಿದರು.

ಆ.8 ಮತ್ತು 9ರ ಗರುಡ ಪಂಚಮಿಯಂದು ಇಲ್ಲಿನ ಆಂಜನೇಯ ಸ್ವಾಮಿಯ ಕಾರ್ಣಿಕೋತ್ಸವ ನಡೆಯಲಿದೆ. ಈ ಸ್ಥಳಕ್ಕೆ ಭೇಟಿ ನೀಡುವ ಅಪಾರ ಭಕ್ತರು ಇಂತಹ ರಸ್ತೆಯಲ್ಲಿಯೇ ಓಡಾಡಬೇಕಿದೆ ಎನ್ನುತ್ತಾರೆ ಭಾರತೀಯ ಕಿಸಾನ್‌ ಸಂಘದ ಜಿಲ್ಲಾ ಘಟಕದ ಕೋಶಾಧ್ಯಕ್ಷ ಎಂ.ಕೆ ಶಾಂತರಾಜ್.

ಹೊಸ ಬಟ್ಟೆ ಧರಿಸಿ ಬರುವ ಜನರು ಕೆಸರುಮಯ ರಸ್ತೆಯಲ್ಲೇ ಓಡಾಡಬೇಕು. ಈ ಬಗ್ಗೆ ಗ್ರಾಮ ಪಂಚಾಯಿತಿಗೆ ಹಲವು ಸಲ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಜಾತ್ರೆಗೂ ಮುನ್ನವೇ ಕೆಸರು ಗದ್ದೆಯಾಗಿರುವ ಈ ಸ್ಥಳವನ್ನು ಸರಿಪಡಿಸಬೇಕು ಎಂದು ಒತ್ತಾಯಿಸಿದರು.

ಈ ರಸ್ತೆಗೆ ಮಣ್ಣು ಹಾಕಿಸಿ ಸರಿಪಡಿಸದಿದ್ದರೆ ಶಾಸಕರ ಮನೆಯ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು. 

ಶಾಂತನಗೌಡ, ಮಾದಪ್ಪ, ಭಾಗ್ಯ, ಹಾಲೇಶ, ಸುರೇಶ, ಶ್ರೀನಿವಾಸ ಪಾಟೀಲ್‌, ಪೂಜಾರ್‌ ಪ್ರಶಾಂತ, ಗಣೇಶ, ಹನುಮಂತ, ನವೀನ, ಮಂಜನಾಥ, ಕೆ.ವಿ ಪ್ರಶಾಂತ, ಕೆ.ವಿ ಶ್ರೀಕಾಂತ ಇದ್ದರು. ‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT