ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲೆ ಕವಚ ಒಣಗುವ ರೋಗ ನಿರ್ವಹಣಾ ಕ್ರಮ

Last Updated 18 ಫೆಬ್ರುವರಿ 2021, 14:13 IST
ಅಕ್ಷರ ಗಾತ್ರ

ದಾವಣಗೆರೆ: ಜಿಲ್ಲೆಯಲ್ಲಿ ಭತ್ತದ ಬೆಳೆಯು ವಿವಿಧ ಹಂತಗಳಲ್ಲಿದ್ದು, ಅಲ್ಲಲ್ಲಿ ಎಲೆ ಕವಚ ಒಣಗುವ ರೋಗ ಕಾಣಿಸಿಕೊಂಡಿದೆ. ಹೀಗಾಗಿ ರೈತರು ತಕ್ಷಣವೇ ಸಂರಕ್ಷಣಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಜಂಟಿ ಕೃಷಿ ನಿರ್ದೇಶಕ ಶ್ರೀನಿವಾಸ್‌ ಚಿಂತಾಲ್‌ ತಿಳಿಸಿದ್ದಾರೆ.

ಹಾನಿಯ ಲಕ್ಷಣ

ಎಲೆಯ ಕವಚದ ಮೇಲೆ ಕಂದು ಅಂಚುಳ್ಳ ಹುಲ್ಲಿನ ಬಣ್ಣದ ಉದ್ದ ಮಚ್ಚೆಗಳು ಕಾಣಿಸಿಕೊಂಡು ಎಲೆಗಳು ಒಣಗುತ್ತವೆ. ಕೆರೆ ಕೆಳಗಿನ ಅಥವಾ ನೀರಿನ ಒತ್ತಡ ಇರುವ ತಗ್ಗು ಪ್ರದೇಶದ ಗದ್ದೆಗಳಲ್ಲಿ ರೋಗದ ಬಾಧೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ.

ನಿರ್ವಹಣಾ ಕ್ರಮಗಳು

ನೀರು ಹರಿಸುವಾಗ ಜೊತೆಯಲ್ಲಿ ಸಗಣಿ ರಾಡಿ ಬಿಡುವುದು ಸೂಕ್ತ. ಸಗಣಿ ರಾಡಿ ಜೊತೆಯಲ್ಲಿ ಟ್ರೈಕೋಡರ್ಮಾವನ್ನು ಬೆರೆಸಿ ಬಿಡುವುದು ತುಂಬಾ ಉಪಯುಕ್ತ. ಸಗಣಿ ರಾಡಿಯ ಉಪಚಾರ ರೋಗ ಹರಡುವುದನ್ನು ತಡೆಗಟ್ಟುವಲ್ಲಿ ಮುಖ್ಯ ಪಾತ್ರ ವಹಿಸುತ್ತದೆ.

1 ಗ್ರಾಂ. ಕಾರ್ಬನ್‌ಡೈಜಿಂ 50 ಡಬ್ಲ್ಯುಪಿ ಅಥವಾ 1 ಮಿ.ಲೀ. ಪ್ರೊಪಿಕೊನೊಜೋಲ್ 25 ಇ.ಸಿ. ಅಥವಾ 2 ಮಿ.ಲೀ. ಹೆಕ್ಸಾಕೋನಜೋಲ್ 5 ಇ.ಸಿ. ಅನ್ನು ಒಂದು ಲೀಟರ್‌ ನೀರಿಗೆ ಬೆರೆಸಿ ಸಿಂಪಡಿಸಬೇಕು. ಇಲ್ಲವೇ 0.4 ಗ್ರಾಂ. ಟ್ರೈಶ್ಲಾಕ್ಸಿಸ್ಟ್ರೋಬಿನ್–25 ಮತ್ತು 0.4 ಗ್ರಾಂ. ಟೆಬುಕೊನಜೋಲ್–50 ಅನ್ನು ಒಂದು ಲೀಟರ್‌ ನೀರಿಗೆ ಬೆರೆಸಿ ಸಿಂಪಡಿಸಬೇಕು ಅಥವಾ ಇವೆರಡರ ಸಂಯುಕ್ತ ರಾಸಾಯನಿಕ ಲಭ್ಯವಿದ್ದರೆ ಸಿಂಪರಣೆ ಮಾಡಬೇಕು.

ವಿಶೇಷ ಸೂಚನೆ

ಗದ್ದೆಯಲ್ಲಿರುವ ನೀರನ್ನು ಬಸಿದು ದ್ರಾವಣವನ್ನು ಬುಡಭಾಗ ನೆನೆಯುವಂತೆ ಸಿಂಪಡಿಸಬೇಕು. ರೋಗದ ಲಕ್ಷಣಗಳು ಕಾಣಿಸಿಕೊಂಡ ತಕ್ಷಣ ಸಿಂಪರಣೆ ಕೈಗೊಳ್ಳುವುದು ಉತ್ತಮ. ಅಗತ್ಯವಿದ್ದರೆ 15 ದಿನಗಳ ನಂತರ ಪುನಃ ಸಿಂಪರಣೆ ಮಾಡಬೇಕು ಎಂದು ಅವರು ಸಲಹೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT