ಭಾನುವಾರ, ಜನವರಿ 17, 2021
22 °C
ಜಿಲ್ಲಾ ಉಸ್ತುವಾರಿ ಸಚಿವರಿಂದ ಪ್ರಶಸ್ತಿ ಪ್ರದಾನ ಇಂದು

34 ಮಂದಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿಗೆ ಮೂರು ಸಂಸ್ಥೆಗಳೂ ಸೇರಿ ಒಟ್ಟು 34 ಮಂದಿಯನ್ನು ಆಯ್ಕೆ ಮಾಡಲಾಗಿದೆ. ಕೊರೊನಾ ಕಾರಣದಿಂದ ಪ್ರಶಸ್ತಿಯ ಆಯ್ಕೆ ತಡವಾಗಿತ್ತು. ನ.25ರಂದು ಮಧ್ಯಾಹ್ನ 3ಕ್ಕೆ ಜಿಲ್ಲಾಧಿಕಾರಿ ಕಚೇರಿಯ ತುಂಗಭದ್ರಾ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

ಪ್ರಶಸ್ತಿ ವಿಜೇತ ಸಂಘ ಸಂಸ್ಥೆಗಳು: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಪ್ರೇರಣಾ ಮಹಿಳಾ ಸೇವಾ ಸಂಸ್ಥೆ, ಅಕ್ಕಮಹಾದೇವಿ ಮಹಿಳಾ ಸಂಸ್ಥೆ.

ಪ್ರಶಸ್ತಿ ಪುರಸ್ಕೃತರು: ಹರಿಹರ ಹರ್ಲಾಪುರದ ಶ್ಯಾಮಲಾಬಾಯಿ (ಸಂಗೀತ), ಹರಿಹರ ವಿದ್ಯಾನಗರದ ಮಂಜಪ್ಪ ಬಲ್ಲೂರು (ಡೊಳ್ಳು ಕುಣಿತ–ಜನಪದ), ಚನ್ನಗಿರಿ ವಡ್ನಾಳ್‌ನ ಜಿ.ಎಂ. ರಾಜಪ್ಪ(ವೀರಗಾಸೆ–ಜನಪದ), ಎಂಸಿಸಿ ಬಿ ಬ್ಲಾಕ್‌ನ ಮಾಧವಿ ಡಿ.ಕೆ.(ನೃತ್ಯ), ಹೊನ್ನಾಳಿ ದುರ್ಗಿಗುಡಿಯ ಚಂದ್ರಪ್ಪ ಎಂ.ಸಿ.(ಸಮಾಜಸೇವೆ), ಪಿ.ಜೆ. ಬಡಾವಣೆಯ ವಾಸುದೇವ ರಾಯ್ಕರ್‌(ಸಮಾಜಸೇವೆ), ದೇವರಾಜ ಅರಸು ಬಡಾವಣೆಯ ಸಂತೋಷ್‌ ಕುಮಾರ್‌ ಎಂ.(ಸಮಾಜಸೇವೆ), ಎಸ್‌.ಎಸ್‌. ಬಡಾವಣೆಯ ಸಂತೋಷ್‌ ಕುಮಾರ್‌ ಕುಲಕರ್ಣಿ (ಚಿತ್ರಕಲೆ), ವಿನೋಬನಗರದ ಬಿ.ಎಚ್‌. ರಾಜಶೇಖರ್‌(ಸಾಹಿತ್ಯ), ಚನ್ನಗಿರಿ ಪಾಂಡೋಮಟ್ಟಿಯ ಕೆ. ಸರೋಜ ನಾಗರಾಜ (ಸಾಹಿತ್ಯ),ದಾವಣಗೆರೆ ವಿನಾಯಕ ಬಡಾವಣೆಯ ಸತ್ಯಭಾಮಾ ಎಚ್‌.ಕೆ. (ಸಾಹಿತ್ಯ).

ಹರಿಹರ ತಾಲ್ಲೂಕು ಕುಂಬಳೂರು ಆಂಜನೇಯ (ಕೃಷಿ), ಮಲ್ಲನಾಯಕನಹಳ್ಳಿ ರಾಘವ (ಕೃಷಿ), ಸಿದ್ಧವೀರಪ್ಪ ಬಡಾವಣೆಯ ಮಂಜು ಮೊಗವೀರ (ಕ್ರೀಡೆ), ಗಾಂಧಿನಗರದ ಕೃಷ್ಣ ಎಸ್‌. (ಕ್ರೀಡೆ), ಶೇಖರಪ್ಪ ನಗರದ ಮಂಜಪ್ಪ ಪಿ. (ಕ್ರೀಡೆ), ಕೆಟಿಜೆ ನಗರದ ಬಿ.ಪಿ. ಯಮನೂರು ಸಾಬ್‌ (ಸಂಗೀತ), ನ್ಯಾಮತಿ ಸುರೆ ಹೊನ್ನೆಯ ಜೆ.ಎಂ. ಚನ್ನರಾಜು (ಸಂಗೀತ), ಎಂಸಿಸಿ ಎ ಬ್ಲಾಕ್‌ನ ಸಂಗೀತ ರಾಘವೇಂದ್ರ (ಸಂಗೀತ), ಸುರೇಶ್‌ ನಗರದ ಬಿ. ಉಮಾಶ್ರೀ (ರಂಗಭೂಮಿ), ಎಸ್‌ಪಿಎಸ್‌ ನಗರದ ವೀರಯ್ಯಸ್ವಾಮಿ (ರಂಗಭೂಮಿ), ಶಿವಾಜಿನಗರದ ತಿಪ್ಪೇಶರಾವ್‌ ಚೌಹಾಣ್‌ (ರಂಗಭೂಮಿ), ಜಗಳೂರು ದೊಣೆಹಳ್ಳಿಯ ಎಸ್.ಚಂದ್ರಪ್ಪ (ರಂಗಭೂಮಿ).

ಎಸ್‌ಎಸ್‌ ಬಡಾವಣೆಯ ಮುರುಗೇಂದ್ರಪ್ಪ ಸಿ.ಎಚ್‌.(ಶಿಕ್ಷಣ), ಮಿರ್ಜಾಇಸ್ಮಾಯಿಲ್‌ ನಗರದ ಅಮ್ಜದ್‌ ಅಲಿ (ಕನ್ನಡಪರ ಹೋರಾಟ), ಎಂಸಿಸಿ ಎ ಬ್ಲಾಕ್‌ನ ಮಂಜುನಾಥ ಕಾಡಜ್ಜಿ (ಪತ್ರಿಕಾಮಾಧ್ಯಮ), ಭಗತ್‌ಸಿಂಗ್‌ನಗರದ ಎಚ್‌ಎಂಪಿ ಕುಮಾರ್‌ (ದೃಶ್ಯಮಾಧ್ಯಮ), ಪಿಸಾಳೆ ಕಾಂಪಾಂಡ್‌ನ ವಿಜಯ ಜಾಧವ್‌ (ಛಾಯಾಗ್ರಾಹಕ) ,ಆಂಜನೇಯ ಬಡಾವಣೆಯ ಎ.ಆರ್‌. ಉಜ್ಜಿನಪ್ಪ(ಸಂಕೀರ್ಣ), ಎಂಯು ಎಸ್‌ಎಸ್‌ ಕಾಲೊನಿಯ ರುದ್ರಾಕ್ಷಿ ಬಾಯಿ ಸಿ.ಕೆ. (ಜನಪದ ಸಂಗೀತ), ರಮಣಲಾಲ್‌ ಪಿ. (ಸಮಾಜಸೇವೆ).

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು