ಶುಕ್ರವಾರ, ಜೂನ್ 25, 2021
24 °C

ದಾವಣಗೆರೆ| 6000 ಲೀಟರ್‌ ಆಮ್ಲಜನಕ ಎಲ್ಲಿ ಹೋಗುತ್ತದೆ: ಅಧಿಕಾರಿಗಳಿಗೆ ಸಚಿವ ತರಾಟೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಕೆಲವು ಜಿಲ್ಲೆಗಳಿಗೆ 400–500 ಲೀಟರ್‌ ಆಮ್ಲಜನಕ ಮಾತ್ರ ಪೂರೈಕೆಯಾಗುತ್ತಿದೆ. ಇಲ್ಲಿ 6 ಸಾವಿರ ಲೀಟರ್‌ ಆಮ್ಲಜನಕ ಒಂದೇ ಆಸ್ಪತ್ರೆಗೆ ಪೂರೈಕೆಯಾಗುತ್ತಿದೆ. ನಿಜಕ್ಕೂ ಅದು ಎಲ್ಲಿ ಹೋಗುತ್ತಿದೆ’ ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್‌ ಪ್ರಶ್ನಿಸಿದ್ದಾರೆ.

ಜಿಲ್ಲಾ ಚಿಗಟೇರಿ ಆಸ್ಪತ್ರೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಜಿಲ್ಲಾಧಿಕಾರಿ, ಜಿಲ್ಲಾ ಆರೋಗ್ಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತರು ಎಷ್ಟಿದ್ದಾರೆ ಎಂದು ಸಚಿವರು ಕೇಳಿದಾಗ, 300ಕ್ಕೂ ಅಧಿಕ ಮಂದಿ ಇರುವುದಾಗಿ ಅಧಿಕಾರಿಗಳು ತಿಳಿಸಿದರು. ‘ಎಲ್ಲರಿಗೂ ಆಮ್ಲಜನಕ ಕೊಡುತ್ತಿದ್ದೀರಾ? ಮತ್ತೆ ಹೇಗೆ ದಿನಕ್ಕೆ 6 ಸಾವಿರ ಲೀಟರ್‌ ಖಾಲಿಯಾಗುತ್ತಿದೆ? ಇಲ್ಲಿ ಏನೋ ನಡೆಯುತ್ತಿದೆ?’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಆಮ್ಲಜನಕ ನಿರ್ವಹಣೆಗಾಗಿ ಒಂದು ಸಮಿತಿ ಮಾಡಬೇಕು. ಯಾವ ರೋಗಿಗೆ ಎಷ್ಟು ಆಮ್ಲಜನಕ ನೀಡಲಾಗುತ್ತಿದೆ ಎಂಬ ‍ಪಕ್ಕಾ ಮಾಹಿತಿ ನೀಡಬೇಕು ಎಂದು ಸೂಚನೆ ನೀಡಿದ್ದಾರೆ’ ಎಂದು ಆಸ್ಪತ್ರೆಯ ಅಧಿಕಾರಿಗಳು ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು