ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ: ಗ್ರಾಮ ಪಂಚಾಯಿತಿ ಚುನಾವಣೆ; 63 ಮಂದಿ ಅವಿರೋಧ ಆಯ್ಕೆ

ಚನ್ನಗಿರಿ, ನ್ಯಾಮತಿ, ಹರಿಹರ ತಾಲ್ಲೂಕುಗಳ 101 ಗ್ರಾ.ಪಂಗೆ 3078 ಮಂದಿ
Last Updated 21 ಡಿಸೆಂಬರ್ 2020, 3:40 IST
ಅಕ್ಷರ ಗಾತ್ರ

ದಾವಣಗೆರೆ: ಚನ್ನಗಿರಿ, ನ್ಯಾಮತಿ, ಹರಿಹರ ತಾಲ್ಲೂಕುಗಳ 101 ಗ್ರಾಮ ಪಂಚಾಯಿತಿಗಳಿಗೆ ಡಿ.27ರಂದು ನಡೆಯಲಿರುವ ಚುನಾವಣೆಗೆ ಸಂಬಂಧಿಸಿದಂತೆ ಒಟ್ಟು 163 ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 3,078 ಮಂದಿ ಕಣದಲ್ಲಿದ್ದಾರೆ.

ಚನ್ನಗಿರಿ ತಾಲ್ಲೂಕಿನ 61 ಗ್ರಾಮ ಪಂಚಾಯಿತಿಗಳಿವೆ. ಅದರಲ್ಲಿ 93 ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಚನ್ನೇಶಪುರ ಪಂಚಾಯಿತಿಯಲ್ಲಿ ಅತಿಹೆಚ್ಚು ಅಂದರೆ 9 ಮಂದಿ, ದಾಗಿನಕಟ್ಟೆ ಮತ್ತು ಕೆರೆಬಿಳಚಿ ಗ್ರಾಮ ಪಂಚಾಯಿತಿಗಳಲ್ಲಿ ತಲಾ 6 ಮಂದಿ, ಮುದಿಗೆರೆಯಲ್ಲಿ 5 ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಬೆಳಲಗೆರೆ, ನವಿಲೇಹಾಳ್‌, ಬುಳಸಾಗರ, ದೊಡ್ಡಬ್ಬಿಗೆರೆ, ಹಿರೇಮಳಲಿ, ಲಿಂಗದಹಳ್ಳಿ, ಗುಡ್ಡದ ಕೋಮಾರನಹಳ್ಳಿಯಲ್ಲಿ ತಲಾ ಮೂರು ಮಂದಿ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ. ಇದಲ್ಲದೇ 32 ಪಂಚಾಯಿತಿಗಳಲ್ಲಿ 46 ಮಂದಿ ಪಂಚಾಯಿತಿ ಪ್ರವೇಶಿಸಿದ್ದಾರೆ. ಪರಿಶಿಷ್ಟ ಜಾತಿಯ 472, ಪರಿಶಿಷ್ಟ ಪಂಗಡದ 199, ಹಿಂದುಳಿದ ವರ್ಗ ಎ ಯ 166, ಹಿಂದುಳಿದ ವರ್ಗ ಬಿ ಯ 24 ಹಾಗೂ ಸಾಮಾನ್ಯ ಕ್ಷೇತ್ರದಲ್ಲಿ 901 ಮಂದಿ ಸ್ಪರ್ಧೆಗೆ ಇಳಿದಿದ್ದಾರೆ. ಒಟ್ಟು 643 ಕ್ಷೇತ್ರಕ್ಕೆ 1762 ಮಂದಿ ಸ್ಪರ್ಧಿಸುತ್ತಿದ್ದಾರೆ.

ಹರಿಹರ ತಾಲ್ಲೂಕಿನ 23 ಗ್ರಾಮ ಪಂಚಾಯಿತಿಗಳಿವೆ. ಅದರಲ್ಲಿ 55 ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಒಂದು ಕ್ಷೇತ್ರಕ್ಕೆ ಯಾರೂ ನಾಮಪತ್ರ ಸಲ್ಲಿಸಿಲ್ಲ. ಹರಳಹಳ್ಳಿ ಪಂಚಾಯಿತಿಯಲ್ಲಿ ಅತಿಹೆಚ್ಚು ಅಂದರೆ 10 ಮಂದಿ, ಸಾರಥಿ ಗ್ರಾಮ ಪಂಚಾಯಿತಿಗಳಲ್ಲಿ ತಲಾ 7 ಮಂದಿ, ಸಿರಿಗೆರೆಯಲ್ಲಿ 6 ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಬೇವಿನಹಳ್ಳಿಯಲ್ಲಿ ನಾಲ್ವರು, ಕೊಂಡಜ್ಜಿಯಲ್ಲಿ ಮೂರು ಮಂದಿ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ. ಇದಲ್ಲದೇ 9 ಪಂಚಾಯಿತಿಗಳಲ್ಲಿ 14 ಮಂದಿ ಪಂಚಾಯಿತಿ ಪ್ರವೇಶಿಸಿದ್ದಾರೆ. ಪರಿಶಿಷ್ಟ ಜಾತಿಯ 131, ಪರಿಶಿಷ್ಟ ಪಂಗಡದ 72, ಹಿಂದುಳಿದ ವರ್ಗ ಎ ಯ 107, ಹಿಂದುಳಿದ ವರ್ಗ ಬಿ ಯ 30 ಹಾಗೂ ಸಾಮಾನ್ಯ ಕ್ಷೇತ್ರದಲ್ಲಿ 457 ಮಂದಿ ಸ್ಪರ್ಧೆಗೆ ಇಳಿದಿದ್ದಾರೆ. ಒಟ್ಟು 295 ಕ್ಷೇತ್ರಗಳಲ್ಲಿ 777 ಮಂದಿ ಸ್ಪರ್ಧೆ ಮಾಡುತ್ತಿದ್ದಾರೆ.

ನ್ಯಾಮತಿ ತಾಲ್ಲೂಕಿನ 17 ಗ್ರಾಮ ಪಂಚಾಯಿತಿಗಳಿವೆ. ಅದರಲ್ಲಿ 15 ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಐದು ಕ್ಷೇತ್ರಗಳಿಗೆ ಯಾರೂ ನಾಮಪತ್ರ ಸಲ್ಲಿಸಿಲ್ಲ. ಚಿನ್ನಿಕಟ್ಟೆ, ಬೆಳಗುತ್ತಿ ಮತ್ತು ಕೆಂಚಿಕೊಪ್ಪ ಗ್ರಾಮ ಪಂಚಾಯಿತಿಗಳಲ್ಲಿ ತಲಾ ಮೂರು ಮಂದಿ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ. ಇದಲ್ಲದೇ 5 ಪಂಚಾಯಿತಿಗಳಲ್ಲಿ 6 ಮಂದಿ ಪಂಚಾಯಿತಿ ಪ್ರವೇಶಿಸಿದ್ದಾರೆ. ಪರಿಶಿಷ್ಟ ಜಾತಿಯ 127, ಪರಿಶಿಷ್ಟ ಪಂಗಡದ 33, ಹಿಂದುಳಿದ ವರ್ಗ ‘ಎ’ ಯ 69, ಹಿಂದುಳಿದ ವರ್ಗ ‘ಬಿ’ ಯ 13 ಹಾಗೂ ಸಾಮಾನ್ಯ ಕ್ಷೇತ್ರದಲ್ಲಿ 297 ಮಂದಿ ಸ್ಪರ್ಧೆಗೆ ಇಳಿದಿದ್ದಾರೆ. ಒಟ್ಟು 176 ಕ್ಷೇತ್ರಗಳಲ್ಲಿ 539 ಮಂದಿ ಸ್ಪರ್ಧೆ ಮಾಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT