ಚಿಕ್ಕಜಾಜೂರು: ಸಮೀಪದ ಕಾಳಘಟ್ಟ ಗ್ರಾಮದ ತೋಟವೊಂದರಲ್ಲಿ ಬುಧವಾರ ಬೆಳಿಗ್ಗೆ ಶೆಡ್ ನಿರ್ಮಾಣದ ವೇಳೆ ವಿದ್ಯುತ್ ತಂತಿಗೆ ಕಬ್ಬಿಣದ ಕಂಬಿ ತಗುಲಿ ಮೂವರು ಮೃತಪಟ್ಟಿದ್ದಾರೆ.

ತೋಟದ ಮಾಲೀಕ ರಾಟೆರ ನಾಗರಾಜಪ್ಪ ಅವರ ಪುತ್ರ ಜಿ.ಎನ್.ಶ್ರೀನಿವಾಸ್ (35), ದಾವಣಗೆರೆ ತಾಲ್ಲೂಕಿನ ಎಂ.ನಾಸಿರ್ (34), ಕಾರ್ಮಿಕ ಮಹಮ್ಮದ್ ಫಾರೂಕ್ (32) ಮೃತರು.

ನಾಗರಾಜಪ್ಪ ಅವರು
ಶೆಡ್ ನಿರ್ಮಿಸಲು, ಫೈರೋಜ್ ಎಂಬವರಿಗೆ ಗುತ್ತಿಗೆ ನೀಡಿದ್ದರು. ಶೆಡ್ ನಿರ್ಮಾಣದ ವೇಳೆ ಮೇಲೆ ಕಂಬಿ ಎತ್ತಿ ಇಡಲು ಮುಂದಾದಾಗ ಅವಘಡ ಸಂಭವಿಸಿದೆ.

ಬೆಸ್ಕಾಂ ಹೆಚ್ಚುವರಿ ಶಾಖಾಧಿಕಾರಿ ಪಾಲಯ್ಯ ಸ್ಥಳಕ್ಕೆ ಭೇಟಿ ನೀಡಿದ್ದು, ‘ಶೆಡ್ ನಿರ್ಮಾಣ ಸಂಬಂಧ ಬೆಸ್ಕಾಂಗೆ ಮಾಹಿತಿ ನೀಡಿರಲಿಲ್ಲ. ಎಲ್.ಸಿ. ಪಡೆದಿರಲಿಲ್ಲ’ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.