ಭಾನುವಾರ, ಮೇ 29, 2022
23 °C

ಕೆರೆಗೆ ಬಿದ್ದ ಕಾರು: ಪ್ರಯಾಣಿಕರು ಪಾರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಹರಿಹರದಿಂದ ದಾವಣಗೆರೆಗೆ ಬರುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಬಾತಿ ಕೆರೆಗೆ ಬಿದ್ದಿದೆ. ಕಾರಲ್ಲಿದ್ದ ಮೂವರೂ ಪವಾಡಸದೃಶವಾಗಿ ಪಾರಾಗಿದ್ದಾರೆ.

ಹರಿಹರ ಅಮರಾವತಿ ಬಡಾವಣೆಯ ಮುನೀಸ್‌ ಧವನ್‌ ಎಂಬವರು ತನ್ನ ಪತ್ನಿ ಪಪಿಯಾ ಧವನ್‌, ತಾಯಿ ಉಷಾ ಧವನ್‌ ಅವರನ್ನು ಕೂರಿಸಿಕೊಂಡು ದಾವಣಗೆರೆ ಕಡೆಗೆ ಬರುತ್ತಿದ್ದರು. ಈ ಸಂದರ್ಭದಲ್ಲಿ ಕಾರು ಕೆರೆಗೆ ಬಿದ್ದಿದೆ. ಸಣ್ಣಪುಟ್ಟ ಗಾಯಗಳೊಂದಿಗೆ ಮೂವರೂ ಕಾರಿನಿಂದ ಹೊರಗೆ ಬಂದಿದ್ದಾರೆ. ಬಳಿಕ ಕ್ರೇನ್‌ ಮೂಲಕ ಕಾರನ್ನು ಮೇಲೆಕ್ಕೆತ್ತಲಾಯಿತು ಎಂದು ದಾವಣಗೆರೆ ಗ್ರಾಮಾಂತರ ಠಾಣೆಯ ಪೊಲೀಸರು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು