ಮಲೇಬೆನ್ನೂರು: ಸರ್ಕಾರ ರೈತರ ಅನುಕೂಲಕ್ಕಾಗಿ ಜಮೀನುಗಳ ಪೋಡಿ ಮಾಡಲು ಮುಂದಾಗಿದ್ದು, ರೈತರು ಸದುಪಯೋಗ ಪಡೆಸಿಕೊಳ್ಳಬೇಕು ಶಾಸಕ ಬಿ.ಪಿ.ಹರೀಶ್ ಹೇಳಿದರು.
ಹೋಬಳಿ ವ್ಯಾಪ್ತಿಯ ಕುಣಿಬೆಳೆಕೆರೆ ಗ್ರಾಮದಲ್ಲಿ ಮಂಗಳವಾರ ಪೋಡಿ ಮುಕ್ತ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
‘ಸರ್ಕಾರದ ಪೋಡಿ ಮುಕ್ತ ಅಭಿಯಾನ ಮಹತ್ವಾಕಾಂಕ್ಷಿ ಯೋಜನೆ ಆಗಿದೆ. ಸರ್ವೆ ಅಧಿಕಾರಿಗಳು ಪೋಡಿ ಮಾಡುವ ವೇಳೆ ಹಿಡುವಳಿದಾರರು ಹಾಗೂ ಖಾತೆದಾರರು ಅಳತೆ, ಹೆಸರು ಕುರಿತು ಗೊಂದಲ ಮಾಡಿಕೊಂಡು ಬರಬೇಡಿ. ಆಯಾ ಗ್ರಾಮಗಳಲ್ಲಿ ಜಮೀನುಗಳ ಮಾಲೀಕತ್ವ, ಅಳತೆ, ಗಡಿ ಕುರಿತ ಸಮಸ್ಯೆ ಪರಿಹಾರ ಮಾಡಿಕೊಳ್ಳಿ’ ಎಂದು ಕಿವಿಮಾತು ಹೇಳಿದರು.
ತಹಶೀಲ್ದಾರ್ ಗುರುಬಸವರಾಜ, ಉಪ ತಹಶೀಲ್ದಾರ್ ಆರ್ ರವಿ, ಭೂ ದಾಖಲೆ ಇಲಾಖೆಯ ಕಲ್ಲೇಶ್, ವಿಜಯ ಪ್ರಕಾಶ್, ಕಂದಾಯ ನಿರೀಕ್ಷಕ ಆನಂದ್, ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗರಾಜ್, ಗ್ರಾಮಸ್ಥರು ಇದ್ದರು.
ಗುಳದಹಳ್ಳಿ, ಆದಾಪುರ ಹಾಗೂ ನಂದಿತಾವರೆ ಗ್ರಾಮದಲ್ಲಿ ಪೋಡಿ ಮುಕ್ತ ಗ್ರಾಮ ಸಭೆ ಅಧಿಕಾರಿಗಳ ಉಪಸ್ಥಿತಿಯಲ್ಲಿ ಜರುಗಿತು.