ಬಸವಾಪಟ್ಟಣ (ದಾವಣಗೆರೆ ಜಿಲ್ಲೆ): ಚನ್ನಗಿರಿ ತಾಲ್ಲೂಕಿನ ಬಸವಾಪಟ್ಟಣದ ಸಮೀಪದ ಯಲೋದಹಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಪ್ರತಿ ವರ್ಷ ಮಳೆಗಾಲ ಬಂತೆಂದರೆ ಮಕ್ಕಳು ದೋಣಿಯನ್ನೇ ತೆಗೆದುಕೊಂಡು ಹೋಗಬೇಕು ಎಂಬ ಸ್ಥಿತಿ ಇದೆ. ಇಲ್ಲದಿದ್ದರೆ ಅವರು ಶಾಲೆಯ ಕೊಠಡಿಗಳನ್ನು ತಲುಪುವುದು ಅಸಾಧ್ಯ ಎಂಬ ಸ್ಥಿತಿಯೂ ಇದೆ.

ಅಲ್ಲದೇ ಈ ಶಾಲೆಯಲ್ಲಿ ಪ್ರವೇಶ ಪಡೆಯಬೇಕೆಂದರೆ ಮಕ್ಕಳು ಮೊದಲು ಈಜು ಕಲಿತು ಬಂದು ಆಮೇಲೆ ಅಕ್ಷರ ಕಲಿಯಬೇಕಾಗಬಹುದು.

ಇದಕ್ಕೆ ಕಾರಣ ಮಳೆಗಾಲದಲ್ಲಿ ಈ ಶಾಲೆ ಕೆರೆಯಂಗಳದಂತೆ ಆಗುವುದೇ ಆಗಿದೆ.

ಗ್ರಾಮದಲ್ಲಿ ಬುಧವಾರ ಮತ್ತು ಗುರುವಾರ ಸುರಿದ ಭಾರಿ ಮಳೆಗೆ ಈ ಶಾಲೆಯ ಆವರಣವು ಮತ್ತೆ ಕೆರೆಯಂತಾಗಿದ್ದು, ಶಾಲೆಯೊಳಗೆ ಹೋಗಲು ವಿದ್ಯಾರ್ಥಿಗಳು ಹರಸಾಹಸ ಪಟ್ಟಿದ್ದಾರೆ.

ಅ ಪರಶಿವನು (ಹರ) ಗಂಗೆಯನ್ನು (ಭಾಗೀರತಿಯನ್ನು) ಹಿಮಾಲಯದಿಂದ ಭೂಮಿಗೆ ಕರೆತರಲು ಸಾಹಸ ಪಟ್ಟರೆ, ಈ ವಿದ್ಯಾರ್ಥಿಗಳು ಆ ಗಂಗೆಯನ್ನು ದಾಟಿ ಅಕ್ಷರ ಕಲಿಯಲು ಶಾಲಾ ಕಟ್ಟಡ ಮುಟ್ಟಲು ಆ ಶಿವನಿಗಿಂತಲೂ ಹೆಚ್ಚೇ ಹಾಗೂ ಪಡಬಾರದ ಸಾಹಸಪಡುವುದು ಅನಿವಾರ್ಯ ಎಂಬಂತಾಗಿದೆ.

ಈ ಸಮಸ್ಯೆ (ಸ್ಥಿತಿ)ಯನ್ನು ಸರಿಪಡಿಸದಿದ್ದರೆ ಮುಂದಿನ ದಿನಗಳಲ್ಲಿ 'ಈಜು ಬಲ್ಲವರು ಮಾತ್ರ ಈ ಶಾಲೆಗೆ ಪ್ರವೇಶ ಪಡೆಯಬಹುದು' ಎಂಬ ನಿಯಮವನ್ನೂ, ಮಾನದಂಡವನ್ನೂ ಸರ್ಕಾರವೇ ರೂಪಿಸಿ, ಅನುಸರಿಸಬೇಕಾಗುವುದೂ ಅನಿವಾರ್ಯವಾಗಲಿದೆ.

ಇಂತಿಪ್ಪ ಈ ಶಾಲೆಯ ಆವರಣ ಮತ್ತು ಕಟ್ಟಡ ಗುರುವಾರ ಸಂಪೂರ್ಣ ಜಲಾವೃತ ಆಗಿದ್ದರಿಂದ ಒಂದೆಡೆ ಶಾಲೆಯ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಮೊಣಕಾಲು ದಾಟಿ, ಎದೆಯುದ್ದ ನಿಂತ ನೀರನ್ನು ತೆರವುಗೊಳಿಸಲು ಯತ್ನಿಸಿದರು. ಇನ್ನೊಂದೆಡೆ, ಕೆಲವು ವಿದ್ಯಾರ್ಥಿಗಳು ಅದೇ ಶಾಲಾ ಆವರಣದಲ್ಲಿ ನಿಂತ ನೀರಲ್ಲಿ ಈಜುತ್ತ ಸಾಗಿ ಗಮನಸೆಳೆದರು. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತ ಸರ್ಕಾರಿ ಶಾಲೆಗಳ ದುಃಸ್ಥಿತಿಗೆ ಕನ್ನಡಿ ಹಿಡಿದಂತಿತ್ತು.

'ಆದಷ್ಟು ಬೇಗ ಈ ವಿದ್ಯಾರ್ಥಿಗಳಿಗೆ ಈ ಸಮಸ್ಯೆಯಿಂದ ಮುಕ್ತಿ ದೊರೆಯದಿದ್ದರೆ, ಅವರಿಗೆ ಸಾಮೂಹಿಕವಾಗಿ, ಸಮರ್ಪಕವಾಗಿ ಈಜು ತರಬೇತಿಯನ್ನು ನೀಡಬೇಕು. ಇಲ್ಲದಿದ್ದರೆ ಈ ವಿದ್ಯಾರ್ಥಿಗಳು ಒಲಿಂಪಿಕ್ನ ಈಜು ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲು ಸುಲಭವಾಗಿ ದೊರೆಯುವ ಅವಕಾಶದಿಂದ ವಂಚಿತರಾಗುತ್ತಾರೆ. ಅಥವಾ ಒಲಿಂಪಿಕ್ ನ ಈಜು ಸ್ಪರ್ಧೆಯಲ್ಲಿ ಭಾರತಕ್ಕೆ ಒಂದು ಪದಕವನ್ನು ಖಂಡಿತ ದೊರಕಿಸಿಕೊಡುತ್ತಾರೆ ಎಂಬುದಂತೂ ದಿಟ' ಎಂದು ಗ್ರಾಮಸ್ಥರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.