ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪಘಾತದಲ್ಲಿ ಮೃತಪಟ್ಟವರ ಅಂತ್ಯಕ್ರಿಯೆ

Last Updated 17 ಜನವರಿ 2021, 0:49 IST
ಅಕ್ಷರ ಗಾತ್ರ

ದಾವಣಗೆರೆ:ಧಾರವಾಡ ಸಮೀಪಇಟ್ಟಿಗಟ್ಟಿ ಬಳಿಯ ಬೈಪಾಸ್‌ನಲ್ಲಿ ಶುಕ್ರವಾರ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿಮೃತಪಟ್ಟ ಬಾಲ್ಯದ ಗೆಳತಿಯರ ಅಂತ್ಯಕ್ರಿಯೆ ಜಿಲ್ಲೆಯ ವಿವಿಧ ಕಡೆಗಳಲ್ಲಿ ನೆರವೇರಿತು.

ಸ್ತ್ರೀರೋಗ ಮತ್ತು ಪ್ರಸೂತಿ ತಜ್ಞೆಯಾಗಿದ್ದ ಡಾ. ವೀಣಾ ಪ್ರಕಾಶ್, ವರ್ಷಿತಾ, ಮಂಜುಳಾ ನಟೇಶ್, ರಾಜೇಶ್ವರಿ ಬಂದಮ್ಮನವರ್ ಅಂತ್ಯಕ್ರಿಯೆ ಶುಕ್ರವಾರ ಸಂಜೆ ನಗರದಲ್ಲಿ ನೆರವೇರಿತು.

ಮಾಜಿ ಸಿಎಂ ಜೆ.ಎಚ್. ಪಟೇಲ್ ಅವರ ತಂಗಿಯ ಸೊಸೆ ಪರಂಜ್ಯೋತಿ ಅವರ ಅಂತ್ಯಕ್ರಿಯೆ ಚನ್ನಗಿರಿ ತಾಲ್ಲೂಕು ತ್ಯಾವಣಿಗೆಯಲ್ಲಿ ಶುಕ್ರವಾರ ರಾತ್ರಿ ನಡೆಯಿತು. ಮಾಜಿ ಶಾಸಕ ಟಿ. ಗುರುಸಿದ್ಧನಗೌಡ ಅವರ ಸೊಸೆ ಪ್ರೀತಿ ರವಿಕುಮಾರ್ ಅಂತ್ಯಕ್ರಿಯೆ ಹರಪನಹಳ್ಳಿ ತಾಲ್ಲೂಕು ಗಡಿಗುಡಾಳು ಗ್ರಾಮದಲ್ಲಿ, ಮಾನಸಿ, ಯಶ್ಮಿತಾ ಅವರ ಅಂತ್ಯಕ್ರಿಯೆ ನಗರದಲ್ಲಿ ಶನಿವಾರ ನೆರವೇರಿಸಲಾಯಿತು.

ಅಂತ್ಯಕ್ರಿಯೆಯ ವೇಳೆ ಸಂಬಂಧಿಕರ ರೋದನ ಮುಗಿಲುಮುಟ್ಟಿತ್ತು.

ವಿಶ್ರಾಂತಿ ಬಯಸಿದ್ದ ಮಿನಿ ಬಸ್ ಚಾಲಕ: ದಾವಣಗೆರೆಯಿಂದ ಗೋವಾ ಪ್ರವಾಸಕ್ಕೆ ತೆರಳುವ ಮುನ್ನ ಚಾಲಕ ಸರಿಯಾಗಿ ನಿದ್ದೆ ಮಾಡಿರಲಿಲ್ಲ ಎಂಬ ಅಂಶ ತಿಳಿದು ಬಂದಿದೆ.

ಎಲ್ಲಾ ಸ್ನೇಹಿತೆಯರನ್ನು ಒಟ್ಟುಗೂಡಿಸಿಕೊಳ್ಳುವ ಉದ್ದೇಶದಿಂದರಾತ್ರಿ 2 ಗಂಟೆಗೆ ಹೊರಡಲು ಎಲ್ಲರೂ ನಿರ್ಧರಿಸಿದ್ದರು. ಆದರೆ ಆ ದಿನವೇ ಚಾಲಕ ಮುರುಡೇಶ್ವರಕ್ಕೆ ಹೋಗಿ ಬಂದಿದ್ದರಿಂದ ಸ್ವಲ್ಪ ವಿಶ್ರಾಂತಿ ಬೇಕು. ತಡವಾಗಿ ಅಂದರೆ ಮೂರೂವರೆಗೆ ಬರುವುದಾಗಿ ಹೇಳಿದ್ದರು. ಕಡೆಗೆ ಮೂರು ಗಂಟೆಗೆ ಗುಂಡಿ ಸರ್ಕಲ್‌ನಿಂದ ಹೊರಟರು ಎಂದು ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಆಶಾ ಅವರು ಪತಿ ಜಗದೀಶ್‌ ಅವರಿಗೆ ತಿಳಿಸಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿದ ಜಗದೀಶ್, ‘20 ಜನರು ಹೋಗಲು ನಿರ್ಧರಿಸಿದ್ದು, ಧಾರವಾಡದಲ್ಲಿ ನನ್ನ ಅಳಿಯನ ಮನೆಯಲ್ಲೇ ಉಪಾಹಾರಕ್ಕೆ ವ್ಯವಸ್ಥೆ ಮಾಡಿದ್ದೆ. ಒಬ್ಬರಿಗೆ ಬೆನ್ನು ನೋವು ಇದ್ದುದರಿಂದ ನನ್ನ ಪತ್ನಿಕುಳಿತಿದ್ದ ಸೀಟನ್ನು ಮತ್ತೊಬ್ಬರಿಗೆ ಬಿಟ್ಟುಕೊಟ್ಟು ಹಿಂಬದಿ ಸೀಟಿನಲ್ಲಿ ಕುಳಿತಿದ್ದರಿಂದ ಬದುಕುಳಿದರು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT